ಡ್ರಗ್ಸ್ ಮಾಫಿಯಾ ಎನ್ನುವುದು ಸಿನಿಮಾ ರಂಗ ಹಾಗೂ ರಾಜಕೀಯದೊಂದಿಗೆ ನಂಟು ಹೊಂದಿದ್ದು, ಇದೀಗ ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಸಚಿವ ಸಿ. ಟಿ ರವಿ ಹೇಳಿದರು.
ಚಿಕ್ಕಮಗಳೂರು (ಸೆ.04): ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಡ್ರಗ್ ಎನ್ನುವುದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ ಕೆಲವು ಕಡೆ ಭಯೋತ್ಪಾದಕರ ಜೊತೆ, ರಾಜಕೀಯ ವ್ಯಕ್ತಿ, ಸಿನಿಮಾ ನಟರೊಂದಿಗೆ ತಳುಕು ಹಾಕಿಕೊಂಡಿದೆ. ಯಾರೆ ಇದ್ರೂ ಸರಿ ಯುವ ಜನರನ್ನು ಪಿಡುಗಿನಿಂದ ಮುಕ್ತಗೊಳಿಸುವ ಜವಬ್ದಾರಿ ಸರ್ಕಾರದ್ದಾಗಿದೆ ಎಂದು ಹೇಳಿದರು.
ತನಿಖೆಯ ತಂಡದ ಮೇಲೆ ಒತ್ತಡ ತರುವಂತ ಹಾಗೂ ವಿಷಯಾಂತರ ಗೊಳಿಸುವಂತಹ ಪ್ರಯತ್ನ ನಡೆಯುತ್ತಿದೆ. ಆದರೆ ಇದಕ್ಕೆ ಸರ್ಕಾರ ಬಗ್ಗುವುದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. 84ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಮೇಲ್ನೋಟದ ಅಧಾರದ ಮೇಲೆ ಕಸ್ಟಡಿಗೆ ತೆಗೆದುಕೊಳ್ಳುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಉಟ್ಟಾ ಪಲ್ಟಾ ಆಯ್ತು ನಟಿ ರಾಗಿಣಿ ಪ್ಲಾನ್! ಇಂದು ಹಾಜರಾಗದಿದ್ದರೆ ಬಂಧನ?
ಕೆಲವರನ್ನು ವಿಚಾರಣೆ ನಡೆಸಿ ಬಿಡುವ ಕೆಲಸ ಮಾಡಲಾಗಿದೆ. ಇದರಿಂದ ಈ ಪ್ರಕರಣದ ಬಗ್ಗೆ ಯಾವುದೇ ರಾಜೀ ಮಾಡಿಕೊಂಡಿಲ್ಲ ಎನ್ನುವ ಸಂಗತಿ ತಿಳಿದುಬರುತ್ತದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಮೈಸೂರಿನಲ್ಲಿ ದಸರ ಅಚರಣೆ ಬಗ್ಗೆ ಪ್ರಸ್ತಾಪ : ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆಗೆ ಸಂಬಂಧಿಸಿದಂತೆ ಇದೇ ಸೆಪ್ಟೆಂಬರ್ 8 ರಂದು ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದರು.
ಅಂದು ದಸರ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ರೂಪರೇಷೆ ಚರ್ಚೆ ನಡೆಸಲಾಗುವುದು. ಮೈಸೂರು ಉಸ್ತುವಾರಿಯೊಂದಿಗೆ ನಾನು ತೆರಳಿ ಅಲ್ಲಿ ಸಮಗ್ರ ಯೋಜನೆ ರೂಪಿಸುತ್ತೇವೆ. ಸಂಪ್ರದಾಯ ಪಾಲಿಸಬೇಕು ಈಗ ಸಾಂಕ್ರಾಮಿಕ ರೋಗ ಇರುವುದರಿಂದ ಸರಳ ಆಚರಣೆಗೆ ಚರ್ಚೆಯಾಗಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು.