
ಮೈಸೂರು (ಸೆ.04): ಪೋಷಕರೇ ಮಕ್ಕಳ ಕೈಗೆ ರಿಮೋಟ್ ನೀಡುವ ಮುನ್ನ ಎಚ್ಚರ.
ಮೈಸೂರಿನ ಇಟ್ಟಿಗೆ ಗೂಡಿನಲ್ಲಿ ಮಗು ಒಂದು ರಿಮೋಟ್ ಶೆಲ್ ನುಂಗಿ ಪ್ರಾಣ ಕಳೆದುಕೊಂಡಿದೆ.
ಒಂದೂವರೆ ವರ್ಷದ ಮಗು ಹೇಮಂತ್ ಸ್ಕಂದಮಣಿ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ರಿಮೋಟ್ ಶೆಲ್ ನುಂಗಿದೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ವೃದ್ಧೆಯ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ಲೂಟಿ ..
ಈ ಸಂಬಂಧ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆಯೂ ಅನೇಕ ಬಾರೀ ಇಂತಹ ಘಟನೆಗಳು ವರದಿಯಾಗಿವೆ. ಆದರೂ ಕೆಲವೊಮ್ಮೆ ಅನಾಹುತಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಪುಟ್ಟ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಪುಟ್ಟ ವಸ್ತುಗಳನ್ನು ಮಕ್ಕಳು ಕುತೂಹಲದ ದೃಷ್ಟಿಯಿಂದ ಬಾಯಿಯಲ್ಲಿ ಹಾಕಿದಾಗ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ.