* ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ
* ಕೊರೋನಾ ನಿಯಂತ್ರಣಕ್ಕೆ ನೋಡಲ್ ಅಧಿಕಾರಿಗಳ ನೇಮಕ
* ಐಎಎಸ್ - ಐಪಿಎಸ್ ಅಧಿಕಾರಿಗಳ ನೇಮಿಸಿ ಆದೇಶಿಸಿದ ಸರ್ಕಾರ
ಬೆಂಗಳೂರು, (ಜ.04): ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ (Coroanviru) ಕೇಸ್‌ಗಳ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದೆ. ಅದಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟವಾಗುತ್ತಿದೆ.
ಈ ಹಿನ್ನೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನೋಡಲ್ ಅಧಿಕಾರಿಗಳನ್ನ(Nodal Officers) ನೇಮಕ ಮಾಡಿ ಆದೇಶ ಹೊರಡಿಸಿದೆ.
Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 24ಗಂಟೆಗಳಲ್ಲಿ ದ್ವಿಗುಣ
ಐಎಎಸ್, ಐಪಿಎಸ್ ಅಧಿಕಾರಿಗಳ(IAS IPS Officers) ನೇಮಕ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಮೀಸಲಿರಿಸಲು, ರೋಗಿಗಳ ಟ್ರೇಸಿಂಗ್, ಅನ್ ಟ್ರೇಸ್ಡ್ ಪೇಶೆಂಟ್, ಕಂಟೋನ್ಮೆಂಟ್ ಝೋನ್‌ಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ.
ಜವಾಬ್ದಾರಿ ನೀಡಲಾದ ಆಯಾ ವಲಯಗಳಲ್ಲಿನ ಕೊರೋನಾ ಸ್ಥಿತಿ-ಗತಿ ಬಗ್ಗೆ ನೇಮಕಗೊಂಡ ಅಧಿಕಾರಿಗಳು ನೋಡಿಕೊಳ್ಳಬೇಕು. ಹಾಗಾದ್ರೆ ಯಾರೆಲ್ಲ ನೇಮಕವಾಗಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
* ಬೆಂಗಳೂರು ಏರ್ಪೋರ್ಟ್ ಕೋವಿಡ್ ಉಸ್ತುವಾರಿಯನ್ನಾಗಿ ಸಿ. ಶಿಖಾ ಅವರನ್ನ ನೇಮಕ ಮಾಡಲಾಗಿದೆ.
* ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳಾಗಿ ಪೂರ್ವವಲಯಕ್ಕೆ 1- ಕ್ಯಾ. ಮಣಿವಣ್ಣನ್ ಮತ್ತು ಅಲೋಕ್ ಕುಮಾರ್.
* ಪೂರ್ವ ವಲಯ-2 ಮೊಹಮ್ಮದ್ ಮೋಹಿಸಿನ್ ಮತ್ತು ಹರಿಶೇಖರನ್...
* ಮಹದೇವಪುರ- ಉಮಾ ಮಹದೇವನ್ ಮತ್ತು ಹಿತೇಂದ್ರ.
* ಪಶ್ಚಿಮ ವಲಯ- ಎಂ.ಟಿ ರೇಜು ಮತ್ತು ಕೆ.ಟಿ ಬಾಲಕೃಷ್ಣ.
* ದಕ್ಷಿಣ ವಲಯ -ರಾಜೇಂದ್ರ ಚೋಳನ್ ಮತ್ತು ಡಾ. ರಾಮಚಂದ್ರ ರಾವ್.
* ಆರ್.ಆರ್ ನಗರ- ಡಾ. ವಿ ರಾಮ್ ಪ್ರಸಾತ್ ಮನೋಹರ್ ಮತ್ತು ಹೇಮಂತ್ ನಿಂಬಾಳ್ಕರ್...
* ಯಲಹಂಕ ಮತ್ತು ದಾಸರಳ್ಳಿ- ಏಕ್ ರೂಪ್ ಕೌರ್ ಮತ್ತು ಎಸ್ ರವಿ.
*ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್ ಕಾದಿರಿಸೋ ಉಸ್ತುವಾರಿ- ಎನ್ ಜಯರಾಮ್
*ಟ್ರೇಸಿಂಗ್, ಅನ್ ಟ್ರೇಸ್ಡ್ ಪೇಶೆಂಟ್- ಉಸ್ತುವಾರಿ ಡಿ.ಸಿ.ಪಿ ಅನುಚೇತ್...
*ಕೋವಿಡ್ ಮೃತರ ಅಂತ್ಯಸಂಸ್ಕಾರ ಉಸ್ತುವಾರಿ- ರಾಜೇಂದ್ರ ಕುಮಾರ್ ಕಠಾರಿಯಾ.
*ಕಂಟೋನ್ಮೆಂಟ್ ಝೋನ್ ಉಸ್ತುವಾರಿ ಸತ್ಯವತಿ
ಇಂದು(ಮಂಗಳವಾರ) ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 2053 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 202 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 11,423 ಸಕ್ರಿಯ ಪ್ರಕರಣಗಳಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕೇಸ್ ಹಾಗೂ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. ಇದು ಜನರಲ್ಲಿ ಎರಡೆರಡು ರೀತಿ ಭಯಕ್ಕೆ ಕಾರಣವಾಗಿದೆ.
ಒಂದು ಕಡೆ ಆಸ್ಪತ್ರೆಗಳು ದಿಢೀರ್ ತುಂಬಿ ತುಳುಕುವ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ಇನ್ನೊಮ್ಮೆ ಲಾಕ್ ಡೌನ್ ಆತಂಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಕಳೆದ 2 ವರ್ಷಗಳಿಂದ ಇದೇ ರೀತಿ ಕೊರೊನಾ ವೈರಸ್ ಎಲ್ಲರನ್ನೂ ಸಂಕಷ್ಟದ ಬಲೆಗೆ ನೂಕುತ್ತಿದೆ.
ಮೊದಲೇ ಎಚ್ಚರಿಸಿದ್ದ ತಜ್ಞರು: ಕೊರೊನಾ 2ನೇ ಅಲೆ ಮುಗಿಯುತ್ತಿದ್ದಂತೆ ತಜ್ಞರು 3ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಆರಂಭದಲ್ಲಿ ಕಂಟ್ರೋಲ್ ಆಗಿದ್ದ ಕೇಸ್ ಗಳು ಈಗ ದಿಢೀರ್ ಏರಿಕೆ ಕಾಣುತ್ತಿವೆ.
ಇದೇ ರೀತಿ ಇನ್ನಷ್ಟು ದಿನ ಪಾಸಿಟಿವಿಟಿ ದರ ಏರಿಕೆಯಾದ್ರೆ ಬೆಂಗಳೂರು ನಗರ ಲಾಕ್ ಆಗೋದು ಫಿಕ್ಸ್ ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.
ಬೆಂಗಳೂರು ಕೊರೋನಾ ಹಾಟ್‌ಸ್ಫಾಟ್ ಆಗುತ್ತಿದ್ದು, ಟಫ್ ರೂಲ್ಸ್ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ತಜ್ಞರ ಜತೆ ಸಭೆ ಮಾಡಿದ್ದಾರೆ. ಇಂದಿನ ಸಭೆಯಲ್ಲಿ ತಜ್ಞರು ಕೊಟ್ಟ ಸಲಹೆ, ಸೂಚನೆಗಳನ್ನ ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದೆ. ಬಳಿಕ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳಲಿದೆ.