ಬೆಳಗಾವಿಲಿ ಐಟಿ-ಬಿಟಿ ಕೇಂದ್ರ ತೆರೆಯಲು ಪ್ರಯತ್ನ: ಸಚಿವ ಅಶ್ವತ್ಥ ನಾರಾಯಣ

By Kannadaprabha News  |  First Published Oct 14, 2021, 1:41 PM IST

*  700 ಎಕರೆ ಜಮೀನಿನಲ್ಲಿ ಐಟಿ-ಬಿಟಿ ತೆರೆದು ಉದ್ಯೋಗ ಸೃಷ್ಟಿ
*  ರಾಣಿ ಚೆನ್ನಮ್ಮ ವಿವಿ ನೂತನ ಕಟ್ಟಡ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭ
*  ದೇಶದಲ್ಲಿ ಮಹತ್ವದ ಬದಲಾವಣೆಯೊಂದಿಗೆ ಹೊಸ ಶಿಕ್ಷಣ ನೀತಿ ಜಾರಿ 


ಬೆಳಗಾವಿ(ಅ.14):  ಉತ್ತರ ಕರ್ನಾಟಕದ(North Karnataka) ಶಕ್ತಿ ಕೇಂದ್ರವಾಗಿರುವ ಬೆಳಗಾವಿ ಮಹಾನಗರದಲ್ಲಿ 700 ಎಕರೆ ಜಮೀನಿನಲ್ಲಿ ಐಟಿ-ಬಿಟಿ ಕೇಂದ್ರಗಳನ್ನು(IT-BT Center) ತೆರೆದು ಈ ಭಾಗದಲ್ಲಿ ಉದ್ಯೋಗ(Job) ಸೃಷ್ಟಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ, ಕೌಶಲ ಅಭಿವೃದ್ಧಿ ಸಚಿವ ಡಾ.ಅಶ್ವತ್ಥ ನಾರಾಯಣ(CN Ashwathnaraya) ಹೇಳಿದ್ದಾರೆ. 

ಟಿಳಕವಾಡಿಯ ಆರ್‌ಪಿಡಿ ವೃತ್ತದಲ್ಲಿರುವ ಬಿಜೆಪಿ(BJP) ಗ್ರಾಮಾಂತರ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ(Belagavi) ಸುತ್ತಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಬೆಂಗಳೂರು(Bengaluru), ಪುಣೆ(Pune), ಮುಂಬೈ(Mumbai) ನಗರಗಳಿಗೆ ಉದ್ಯೋಗ ಅರಿಸಿ ಹೋಗುವ ಬದಲು ಪುಣೆ ನಗರದಲ್ಲಿರುವ ತಂತ್ರಜ್ಞಾನಗಳ(Technology) ಕಚೇರಿಗಳನ್ನು ಮೀರಿಸುವ ಹಾಗೆ ನಗರದಲ್ಲಿ ನಿರ್ಮಿಸುವ ಪ್ರಯತ್ನ ನಡೆದಿದೆ ಎಂದ ಅವರು, ಬಿಜೆಪಿಯಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಮಹಾನಗರ ಪಾಲಿಕೆಯಲ್ಲಿ ಅಭೂತಪೂರ್ವ ಜಯ ತಂದುಕೊಟ್ಟ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬರುವ ವಿಧಾನಪರಿಷತ್‌(Vidhana Parishat) ಚುನಾವಣೆಯಲ್ಲಿ(Election) ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪದಾಧಿಕಾರಿಗಳು ಜನಪ್ರತಿನಿಧಿಗಳು ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರು.

Tap to resize

Latest Videos

undefined

ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸ ಬನ್ನಿ: ಸಚಿವ ಅಶ್ವತ್ಥ ನಾರಾಯಣ

ಈ ದೇಶದಲ್ಲಿ ಮಹತ್ವದ ಬದಲಾವಣೆಯೊಂದಿಗೆ ಹೊಸ ಶಿಕ್ಷಣ ನೀತಿ(NEP) ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ(Central Government) ನಿರ್ಧಾರದಿಂದ ವಿದ್ಯಾರ್ಥಿಗಳಿಗೆ(Students) ಶಿಕ್ಷಣದ(Education) ಸ್ವಾತಂತ್ರ್ಯ ಸಿಕ್ಕಂತಾಗಿದೆ. ಇದರಿಂದ ಅನ್ಯ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಪಥದಲ್ಲಿ ಭಾರತ(India) ಜಗದ್ಗುರುವಾಗಿ ಬದಲಾಗಲಿದೆ ಎಂದರು.

ಚಿಕ್ಕೋಡಿ, ಕುಡಚಿಯಲ್ಲಿ ಸರ್ಕಾರಿ ಕಾಲೇಜು:

ರಾಜ್ಯದಲ್ಲಿ ಅನೇಕ ಸರ್ಕಾರಿ ಪದವಿ ಮಹಾವಿದ್ಯಾಲಯ ಹಾಗೂ ಡಿಪ್ಲೋಮಾ ಕಾಲೇಜುಗಳು ಪ್ರಾರಂಭವಾಗಿವೆ. ಇರುವ ಕಾಲೇಜುಗಳನ್ನು ಅವಶ್ಯಕವಿರುವ ಕಡೆ ತೆರೆಯಲು ಕ್ರಮಕೈಗೊಂಡಿದ್ದು ಇದರ ಫಲವಾಗಿ ಚಿಕ್ಕೋಡಿ(Chikkodi) ಮತ್ತು ಕುಡಚಿಯಲ್ಲಿ ಸರ್ಕಾರಿ ಕಾಲೇಜುಗಳನ್ನು ಪ್ರಾರಂಭ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ವಿದ್ಯಾದಾನ ಮಾಡುವ ಕ್ರಮಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಉದ್ಯೋಗ ನೀಡಿದ ಹೆಗ್ಗಳಿಕೆ:

ವೀರರಾಣಿ ಕಿತ್ತೂರು ಚೆನ್ನಮ್ಮ ವಿಶ್ವವಿದ್ಯಾನಿಲಯದ ನೂತನ ಕಟ್ಟಡ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಬೆಳಗಾವಿ ಜಿಲ್ಲೆಗೆ ಎರಡು ವಿಶ್ವವಿದ್ಯಾನಿಲಯ(Rani Channamma University) ನೀಡಿ ಇಲ್ಲಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ವ್ಯಕ್ತಪಡಿಸಲು ಅನುಕೂಲಕರವಾಗಿದೆ. ಅಲ್ಲದೇ ದೇಶದ ನಾನಾ ಭಾಗಗಳಿಗೆ ಯಂತ್ರೋಪಕರಣದ ಬಿಡಿಭಾಗಗಳನ್ನು ತಯಾರಿಸಿ ಕಳಿಸಿ ಕೊಡುವ ಔದ್ಯೋಗಿಕ ಕ್ಷೇತ್ರದಲ್ಲಿ ಮಹತ್ವರ ಸಾಧನೆಗೈದ ಬೆಳಗಾವಿಯ ಹೆಸರು ಎಲ್ಲ ಕಡೆ ಪಸರಿಸುತ್ತಿದೆ ಹಾಗೂ ಅನೇಕರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆ ಬೆಳಗಾವಿಯರಿಗೆ ಸಲ್ಲುತ್ತದೆ ಎಂದರು.

ಪಾಲಿಟೆಕ್ನಿಕ್ ಮೂಲಕ ಎಂಜಿನಿಯರಿಂಗ್‌ಗೆ ಹೆಚ್ಚಿನ ಅವಕಾಶ: ಸಚಿವ ಅಶ್ವತ್ಥನಾರಾಯಣ

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್‌ ಪಾಟೀಲ್‌ ಮಾತನಾಡಿ, ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಮಾನ್ಯ ಮಂತ್ರಿಗಳು ಸಹಕಾರ ನೀಡಿದ್ದು ಅವರಿಗೆ ಜಿಲ್ಲೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಪಕ್ಷದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೆರ್ಲಿ, ಮಹಾನಗರ ಅಧ್ಯಕ್ಷ ಶಶಿ ಪಾಟೀಲ್‌, ವಿಧಾನಪರಿಷತ ಸದಸ್ಯರಾದ ಹನುಮಂತ ನಿರಾಣಿ, ಅರುಣ್‌ ಶಾಹಪುರ, ರಾಜ್ಯ ಕಾರ್ಯದರ್ಶಿ ಉಜ್ವಲ ಬಡವನಾಚೆ, ಧನಶ್ರೀ ದೇಸಾಯಿ ಇದ್ದರು. ಮಹೇಶ ಮೋಹಿತೆ ಸ್ವಾಗತಿಸಿ ನಿರೂಪಿಸಿದರು.
 

click me!