ಅಧಿಕಾರಿಗಳು RSS ಹಿನ್ನೆಲೆ ಇದ್ದರೆ ತಪ್ಪೇನು: ಜಗದೀಶ್‌ ಶೆಟ್ಟರ್‌

By Kannadaprabha News  |  First Published Oct 14, 2021, 12:34 PM IST

*  ಆರ್‌ಎಸ್‌ಎಸ್‌ ದೇಶದ ಪರಂಪರೆಯ ಉಳುವಿಗಾಗಿ ಮತ್ತು ದೇಶಕ್ಕಾಗಿ ಹೋರಾಡುವ ಸಂಘಟನೆ
*  ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ 
*  ವಿರೂಪಾಕ್ಷಪ್ಪ ಅಗಡಿ ಮುತ್ಸದ್ದಿ ರಾಜಕಾರಣಿ


ಕೊಪ್ಪಳ(ಅ.14): ದೇಶದಲ್ಲಿ ರಾಷ್ಟ್ರಪತಿ(President), ಉಪ ರಾಷ್ಟ್ರಪತಿ(Vice President), ಪ್ರಧಾನಿ(Prime Minister) ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರು ಆರ್‌ಎಸ್‌ಎಸ್‌ ಮೈಂಡ್‌ನವರಿದ್ದಾರೆ. ಅದೇ ರೀತಿ ಅನೇಕ ಅಧಿಕಾರಿಗಳೂ ಸಹ ಇದೇ ಮನೋಭಾವನೆ ಹೊಂದಿದ್ದರೆ ತಪ್ಪೇನು? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಹೇಳಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಅವರು ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ವಿಶೇಷತೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಸಹ ಆರ್‌ಎಸ್‌ಎಸ್‌ನಿಂದಲೇ(RSS) ಬಂದಿದ್ದೇನೆ. ಅದೊಂದು ಪಕ್ಷವಲ್ಲ, ಆರ್‌ಎಸ್‌ಎಸ್‌ ಎನ್ನುವುದು ದೇಶದ ಪರಂಪರೆಯ ಉಳುವಿಗಾಗಿ ಮತ್ತು ದೇಶಕ್ಕಾಗಿ ಹೋರಾಡುವ ಸಂಘಟನೆ. ಹಿಂದೂ ಸಂಸ್ಕೃತಿ(Hindu Culture) ಉಳಿವಿಗಾಗಿ ಹೋರಾಟ ಮಾಡುತ್ತದೆ. ಅಂಥ ಸಂಘಟನೆಯಲ್ಲಿ ಸೇವೆ ಮಾಡಿದ ಅನೇಕರು ಅಧಿಕಾರಿಗಳಾಗಿದ್ದಾರೆ. ದೇಶದ ಸಂವಿಧಾನಿಕ ಹುದ್ದೆಯಲ್ಲಿ ಸೇವೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

Tap to resize

Latest Videos

ಇಂಥ ಸಂಘಟನೆಯನ್ನು ತಾಲಿಬಾನ್‌(Taliban) ಸಂಘಟನೆಗೆ ಹೋಲಿಕೆ ಮಾಡುವವರು ಮೊದಲು ಪರಾಮರ್ಶೆ ಮಾಡಿಕೊಳ್ಳಬೇಕು. ಅಪಘಾನಿಸ್ತಾನದಲ್ಲಿ(Afghanistan) ಏನಾಗುತ್ತಿದೆ? ಅಲ್ಲಿಯ ನಾಗರಿಕತೆ(Civilization) ಎಂಥ ಸ್ಥಿತಿ ತಲುಪಿದೆ ಎನ್ನುವುದನ್ನು ನೋಡಿಯೂ ಈ ರೀತಿ ಮಾತನಾಡುವುದು ಎಂದರೆ ಏನರ್ಥ? ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಡಳಿತ ಬಂದು 7 ವರ್ಶಗಳಾಗಿವೆ. ಅಪಘಾನಿಸ್ತಾನದಲ್ಲಿ ಆದಂತೆ ಯಾವುದಾದರೂ ಘಟನೆ ನಡೆಯುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.

'ಭಾರತ ಎಂದೆಂದಿಗೂ ಹಿಂದು ರಾಷ್ಟ್ರವಾಗಿಯೇ ಇರಲಿದೆ'

ಈ ರೀತಿ ಆರೋಪ ಮಾಡುವವರು ಮೊದಲು ತಾವು ತಾಲಿಬಾನ್‌ ಆಡಳಿತದ ಪರವಾಗಿದ್ದೀರಾ? ಅಥವಾ ವಿರುದ್ಧವಾಗಿ ಇದ್ದೀರಾ? ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಹುತೇಕ ಕಾಂಗ್ರೆಸ್‌(Congress) ಮೈಂಡ್‌ ಸೆಟ್‌ ಇರುವವರೇ ತಾಲಿಬಾನ್‌ ಆಡಳಿತದ ಪರವಾಗಿ ಮಾತನಾಡಿದ್ದಾನೆ. ದೇಶದ ಜನತೆಗೆ ತಾಲಿಬಾನ್‌ ಕುರಿತ ತಮ್ಮ ನಿಲುವು ಸ್ಪಷ್ಪಡಿಸಬೇಕು ಎಂದರು.

ವಿರೂಪಾಕ್ಷಪ್ಪ ಅಗಡಿ ಮುತ್ಸದ್ದಿ ರಾಜಕಾರಣಿ

ಮಂಗಳವಾರ ನಿಧನರಾಗಿರುವ ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ(Virupakshappa Agadi) ಮುತ್ಸದ್ದಿ ರಾಜಕಾರಣಿಯಾಗಿದ್ದರು.(Politician) ಅವರು ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

ಬುಧವಾರ ವಿರೂಪಾಕ್ಷಪ್ಪ ಅಗಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು. ವಿರೂಪಾಕ್ಷಪ್ಪ ಅವರು ಸಮಾಜಕ್ಕೂ ಉತ್ತಮ ನಾಯಕರಾಗಿದ್ದರು. ಜಿಲ್ಲೆಯ ಕುರಿತು ಸದಾ ಚಿಂತನೆ ಮಾಡುತ್ತಿದ್ದರು. ಅವರು ಎಂದೂ ಸಹ ತಮ್ಮ ವೈಯಕ್ತಿಕಕ್ಕಾಗಿ ಸುತ್ತಾಡಲಿಲ್ಲ. ತಮ್ಮ ಆಗೋಗ್ಯವನ್ನು ಲೆಕ್ಕಿಸದೆ ಸದಾ ಸಮಾಜಮುಖಿ ಸೇವೆ ಮಾಡುತ್ತಿದ್ದರು. ಅದಕ್ಕಾಗಿಯೇ ಅವರು ಸದಾ ಕ್ರೀಯಾಶೀಲರಾಗಿರುತ್ತಿದ್ದರು. ಅಂಥವರ ನಿಧನ ತುಂಬಲಾರದ ನಷ್ಟ ಎಂದರು.
 

click me!