ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಹಿನ್ನೆಲೆ: ನೆಚ್ಚಿನ ಕಾರು ಚಾಲಕ ಕೊಪ್ಪಳದ ವೆಂಕಟೇಶ್ ಸಂತಸ

By Ravi Janekal  |  First Published May 20, 2023, 12:45 PM IST

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಸಿದ್ದರಾಮಯ್ಯರ ನೆಚ್ಚಿನ ಕಾರು ಚಾಲಕ ಕೊಪ್ಪಳದ ವೆಂಕಟೇಶ ಸಂತಸ ವ್ಯಕ್ತಪಡಿಸಿದ್ದಾರೆ.


ಕೊಪ್ಪಳ (ಮೇ.20) : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಸಿದ್ದರಾಮಯ್ಯರ ನೆಚ್ಚಿನ ಕಾರು ಚಾಲಕ ಕೊಪ್ಪಳದ ವೆಂಕಟೇಶ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು ಕೊಪ್ಪಳ ತಾಲೂಕಿನ  ಗುಳದಳ್ಳಿ ಗ್ರಾಮಸ್ಥನಾಗಿರುವ  ವೆಂಕಟೇಶ ವೆಂಕಟಗಿರಿ ಸಿದ್ದರಾಮಯ್ಯರ ಕಾರಿನ ಡ್ರೈವರ್. ಉತ್ತರ ಕರ್ನಾಟಕದ ಭಾಗದ ಯಾವುದೇ ಜಿಲ್ಲೆಗೆ ಬಂದರೂ ಸಿದ್ದರಾಮಯ್ಯರ ಕಾರಿನ ಡ್ರೈವರ್ ಆಗಿ ವೆಂಕಟೇಶ್ ಇರಲೇಬೇಕು. ಕಳೆ ಐದು ವರ್ಷಗಳಿಂದ ಸಿದ್ದರಾಮಯ್ಯರ ನೆಚ್ಚಿನ ಚಾಲಕನಾಗಿರುವ ವೆಂಕಟೇಶ.  ಬೆಂಜ್ ಕಾರು ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಚಲಾಯಿಸುತ್ತಾನೆ. ವೆಂಕಟೇಶ ಚಾಲನೆ ಮಾಡುವ ರೀತಿ, ಸುರಕ್ಷತೆ ಕ್ರಮಗಳನ್ನು ಸಿದ್ದರಾಮಯ್ಯರು ಮೆಚ್ಚಿಕೊಂಡಿದ್ದಾರೆ. 

Tap to resize

Latest Videos

undefined

ಹೆಜ್ಜೆ ಹೆಜ್ಜೆಗೂ ಜ್ಯೋತಿಷಿ ಸಲಹೆ ಕೇಳೋ ಡಿಕೆಶಿ ಶನಿವಾರವೇಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ?

ವೆಂಕಟೇಶ್ ಮೂಲತಃ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್(Raghavendra hitnal) ಕಾರು ಚಾಲಕನಾಗಿದ್ದು, ಒಮ್ಮೆ ರಾಘವೇಂದ್ರ ಹಿಟ್ನಾಳ್ ಅವರ ಕಾರು ಚಲಾಯಿಸಿದ್ದನ್ನು ನೋಡಿ ವೆಂಕಟೇಶ್ ಡ್ರೈವಿಂಗ್ ಇಷ್ಟಪಟ್ಟಿದ್ದ ಸಿದ್ದರಾಮಯ್ಯ. ಅಂದಿನಿಂದ ಸಿದ್ದರಾಮಯ್ಯರ ಉತ್ತರ ಕರ್ನಾಟಕದ ಪ್ರವಾಸದ ಖಾಯಂ ಕಾರು ಚಾಲಕನಾಗಿ ವೆಂಕಟೇಶ್ ಇರುತ್ತಾನೆ.

ವೆಂಕಟೇಶ ಡ್ರೈವಿಂಗ್ ಅಂದರೆ ಸಿದ್ದರಾಮಯ್ಯ ಗೆ ಅಚ್ಚುಮೆಚ್ಚು

ವೆಂಕಟೇಶ್ ಕಾರು ಡ್ರೈವಿಂಗ್ ಮಾಡುವ ಕೌಶಲ್ಯ ಕಂಡು ಸಿದ್ದರಾಮಯ್ಯನವರೇ ಮೆಚ್ಚಿಕೊಂಡಿದ್ದಾರೆ ಇದನ್ನು ಆಪ್ತ ಸಹಾಯಕ ಕೆ ವಿ ಪ್ರಭಾಕರ್ ಮುಂದೆ ಹೇಳಿಕೊಂಡಿದ್ದಾರೆ. ಆ ವೆಂಕಟೇಶ್ ನೇ ನನಗೆ ಡ್ರೈವರ್ ಆಗಿರಬೇಕೆಂದು ಹೇಳಿದ್ದಾರೆ.  ಈ ಹಿನ್ನೆಲೆ ಸುಮಾರು 5 ವರ್ಷಗಳಿಂದ ಸಿದ್ದರಾಮಯ್ಯ ಉ.ಕ ಪ್ರವಾಸದ ಖಾಯಂ ಚಾಲಕನಾಗಿರುವ ವೆಂಕಟೇಶ್. ಇಂದು ಸಿದ್ದರಾಮಯ್ಯ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಖುಷಿ ಪಟ್ಟಿದ್ದಾರೆ.

ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ

click me!