ಮುಳುಗಿದ್ದ ಮನೆಗಳಲ್ಲೀಗ ಹಾವುಗಳದ್ದೇ ಹಿಂಡು!

By Web DeskFirst Published Aug 18, 2019, 11:02 AM IST
Highlights

ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹದಿಂದ ಸಂತ್ರಸ್ತರಾಗಿದ್ದು, ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವುಗಳ ಕಾಟ ಶುರುವಾಗಿದೆ. 

ಅಥಣಿ [ಆ.18] :  ಕೃಷ್ಣಾ ತೀರದ ಗ್ರಾಮ​ಗ​ಳಲ್ಲಿ ಪ್ರವಾಹ ಇಳಿದ ಬಳಿಕ ಒಂದೊಂದೇ ಸಮಸ್ಯೆಗಳು ಉದ್ಭವಿಸುತ್ತಿವೆ. ನೆರೆ​ ಹಿನ್ನೆಲೆಯಲ್ಲಿ ಮನೆ, ಮಠಗಳನ್ನು ಬಿಟ್ಟು ಪರಿ​ಹಾರ ಕೇಂದ್ರದಲ್ಲಿ ಆಶ್ರ​ಯ​ ಪ​ಡೆ​ದಿದ್ದ ಕೃಷ್ಣಾ ​ತೀ​ರದ ಗ್ರಾಮ​ಸ್ಥರಿಗೆ ಈಗ ಹಾವು​ಗಳ ಕಾಟ ಶುರು​ವಾ​ಗಿದೆ.

ಜಲಾವೃತಗೊಂಡಿದ್ದ ಮನೆಗಳನ್ನೇ ಹಾವುಗಳು ತಮ್ಮ ಆವಾಸ ಸ್ಥಾನ ಮಾಡಿಕೊಂಡಿವೆ. ಪ್ರವಾಹ ತಗ್ಗಿದ ಬಳಿಕ ತಮ್ಮ ಮನೆಗಳತ್ತ ಮುಖ ಮಾಡಿದ ಮಂದಿ, ಮನೆಯಲ್ಲಿನ ದೃಶ್ಯಗಳನ್ನು ಕಂಡು ಹೌಹಾರಿದ್ದಾರೆ. ಬೆಳ​ಗಾವಿ ಜಿಲ್ಲೆಯ ಅಥಣಿ ತಾಲೂ​ಕಿನ ನಾಗ​ನೂರು, ಸತ್ತಿ, ಜನ​ವಾಡ ಗ್ರಾಮ​ಗಳ ಮಂದಿ ಪ್ರವಾಹ ಇಳಿಮುಖವಾಯಿತೆಂದು ನಿಟ್ಟುಸಿರು ಬಿಡುವ ಮುನ್ನವೇ, ಹಾವುಗಳ ಕಾಟ ಕಂಡು ಆತಂಕಕ್ಕೆ ಗುರಿಯಾಗಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಗಪ್ಪನ ದರ್ಶ​ನ:  ಕೃಷ್ಣಾ ಪ್ರವಾ​ಹ​ದಿಂದ ಜಲಾ​ವೃ​ತ​ಗೊಂಡಿದ್ದ ನದಿ ತೀರದ ಗ್ರಾಮ​ಗಳ ಮನೆ​ಗ​ಳಲ್ಲಿ ಹಾವುಗಳದ್ದೇ ರಾಜ್ಯಭಾರವಾಗಿದೆ. ಮನೆಗಳ ಬಾಗಿಲು ತೆರೆಯುತ್ತಿದ್ದಂತೆ ನಾಗಪ್ಪ ದರ್ಶನ ಆಗುತ್ತಿದೆ. ನೆರೆ ಇಳಿಯಿತು ಮನೆ​ಯಲ್ಲಿ ವಾಸ​ ಮಾ​ಡ​ಬೇ​ಕೆಂಬ ಬಯಕೆಯೊಂದಿಗೆ ಬಂದ ನಿರಾ​ಶ್ರಿ​ತರು ತೀವ್ರ ಚಿಂತಾ​ಕ್ರಾಂತ​ರಾ​ಗು​ತ್ತಿ​ದ್ದಾರೆ. 

ಹಾವುಗಳನ್ನು ಕಂಡು ಮನೆಯೊಳಗೆ ಹೋಗಲು ಭಯ ಪಡುತ್ತಿ​ದ್ದಾರೆ. ಕೆಲವರು ಸಣ್ಣ-ಪುಟ್ಟಹಾವುಗಳನ್ನು ಹೊಡೆದು ಹಾಕುತ್ತಿ​ದ್ದರೆ, ದೊಡ್ಡ ಹಾವುಗಳು ತಾವಾಗಿಯೇ ಹೊರ ಹೋಗುವವರೆಗೆ ಕಾಯುತ್ತಿದ್ದಾರೆ. ಹಾವುಗಳು ಮನೆಯಲ್ಲಿ ಅವಿತುಕೊಂಡಿವೆ ಎಂಬ ಸುದ್ದಿ ತಿಳಿದ ಕೆಲ ಗ್ರಾಮಸ್ಥರಂತೂ ಮನೆಗಳತ್ತ ತಲೆ ಹಾಕು​ತ್ತಿಲ್ಲ. ಇತ್ತ ಪರಿಹಾರ ಕೇಂದ್ರದಲ್ಲಿಯೂ ಇರಲಾರದೆ, ಹಾವುಗಳನ್ನು ಎದುರಿಸಿ ಮನೆಗೂ ಹೋಗ​ಲಾ​ರ​ದಂತಹ ಇಕ್ಕ​ಟ್ಟಿನಲ್ಲಿ ಸಿಲುಕಿ ಒದ್ದಾ​ಡು​ತ್ತಿ​ದ್ದಾರೆ.

click me!