ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’!

By Web Desk  |  First Published Aug 14, 2019, 9:05 AM IST

ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’| ಪಕ್ಷಿಧಾಮಕ್ಕೆ ಬಂದ ಅತಿಥಿಗಳ ಗೋಳು ಕೇಳುವವರಿಲ್ಲ


ಶಿವಮೊಗ್ಗ[ಆ.14]: ಹೆರಿಗೆಗಾಗಿ ಸಂಭ್ರಮದಿಂದ ತವರು ಮನೆಗೆ ಬರುವ ಹೆಣ್ಣುಮಕ್ಕಳಂತೆ ಸಾವಿರಾರು ಕಿ.ಮೀ. ದೂರದಿಂದ ಇಲ್ಲಿನ ಮಂಡಗದ್ದೆ ಹೆರಿಗೆ ಮನೆಗೆ ಸುಂದರ ಕನಸು ಕಟ್ಟುತ್ತಾ ಬಂದ ಸಾವಿರಾರು ಪಕ್ಷಿಗಳ ಬದುಕು ಕಟ್ಟುವ ಕನಸು ನನಸಾಗಲಿಲ್ಲ. ಬದಲಿಗೆ ಹೆರಿಗೆ ಮನೆಯೇ ಸೂತಕದ ಮನೆಯಾಗಿ ಪರಿವರ್ತನೆಯಾದ ಮನಃಕಲಕುವ ಘಟನೆ ನಡೆದಿರುವುದು ಇಲ್ಲಿನ ಮಂಡಗದ್ದೆ ಪಕ್ಷಿಧಾಮದಲ್ಲಿ.

ಶಿವಮೊಗ್ಗ-ತೀರ್ಥಹಳ್ಳಿ ನಡುವೆ ಇರುವ ಮಂಡಗದ್ದೆ ಪಕ್ಷಿಧಾಮಕ್ಕೆ ಹಲವು ದಶಕಗಳ ಇತಿಹಾಸವಿದೆ. 60ರ ದಶಕದಲ್ಲಿ ಗಾಜನೂರಿನಲ್ಲಿ ತುಂಗಾ ಜಲಾಶಯ ನಿರ್ಮಾಣವಾದ ಅವಧಿಯಲ್ಲಿಯೇ ಇಲ್ಲಿನ ಮಂಡಗದ್ದೆ ಹೆರಿಗೆ ಮನೆಯೂ ಸಿದ್ಧವಾಯಿತು. ಜಲಾಶಯದ ಹಿನ್ನೀರಿನಲ್ಲಿ ಮಂಡಗದ್ದೆ ಬಳಿ ನಡುಗಡ್ಡೆಯೊಂದು ಸೃಷ್ಟಿಯಾಯಿತು. ಮೊದಲೇ ಇಲ್ಲಿ ಸಹಜ ನಡುಗಡ್ಡೆಯೊಂದು ಇತ್ತು. ಆದರೆ ಜಲಾಶಯ ನಿರ್ಮಾಣದ ಬಳಿಕ ಇದು ಇನ್ನಷ್ಟುಸಮರ್ಪಕ ರೀತಿಯಲ್ಲಿ ಎಂಬಂತೆ ಬದಲಾಯಿತು. ಹೊಳೆಲಕ್ಕಿ ಸೇರಿ ಅನೇಕ ಮರಗಳು ಇಲ್ಲಿ ಬೆಳೆದಿದ್ದವು. ಯಾವಾಗಲೋ ಈ ಜಾಗವನ್ನು ತಮ್ಮ ಸುರಕ್ಷಿತ ಹೆರಿಗೆ ಮನೆ ಎಂದುಕೊಂಡಿದ್ದ ಸಾವಿರಾರು ಕಿ.ಮೀ. ದೂರದಿಂದ ದೇಶ-ವಿದೇಶದ ಹಕ್ಕಿಗಳು ಜೂನ್‌ನಲ್ಲಿ ಇಲ್ಲಿಗೆ ವಲಸೆ ಬರುತ್ತಿದ್ದವು.

Tap to resize

Latest Videos

3 ತಿಂಗಳ ಅವಧಿಯಲ್ಲಿ ಸಂಗಾತಿಯೊಡನೆ ಗೂಡುಕಟ್ಟಿಸಂತಾನಾಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತಿದ್ದವು. ಯಾವಾಗ ಗಾಜನೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ತುಂಗಾ ಮೇಲ್ದಂಡೆ ಜಲಾಶಯ ನಿರ್ಮಾಣವಾಯಿತೋ ಆಗ ಶುರುವಾಗಿದ್ದು ಈ ಪಕ್ಷಿಗಳಿಗೆ ಜಲ ಕಂಟಕ. ಮಳೆಗಾಲದಲ್ಲಿ ಉಕ್ಕೇರುವ ತುಂಗೆ ಯಾವ ಮುಲಾಜೂ ಇಲ್ಲದೆ ಹೊಳೆಲಕ್ಕಿ ಮರದಲ್ಲಿ ಕಟ್ಟಿದ ಗೂಡು, ಗೂಡಿನಲ್ಲಿರುವ ಮೊಟ್ಟೆಎಲ್ಲವನ್ನೂ ಆಪೋಶನ ತೆಗೆದುಕೊಳ್ಳಲಾರಂಭಿಸಿತು. ಇದೆನ್ನೆಲ್ಲ ನೋಡಿ ಕೂಗಿಡುವ ಹಕ್ಕಿಗಳ ನೋವು ಮನ ಕಲಕುವಂತಿವೆ.

click me!