ರಾಜ್ಯ ಎದುರಿಸುತ್ತಿರುವ ಭೀಕರ ಪ್ರವಾಹ ಪರಿಹಾರಕ್ಕೆ 125 ಕೋಟಿ ರೂ. ಎಸ್.ಡಿ.ಆರ್.ಎಫ್ ಫಂಡ್ ರಿಲೀಸ್ ಆಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಗೆ ಪರಿಹಾರ ಕೊಡಲು ನಮಗೆ ದುಡ್ಡಿನ ಕೊರತೆ ಏನು ಇಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು[ಆ. 11] ಪ್ರವಾಹ ಪರಿಸ್ಥಿತಿ ಎದುರಿಸಲು ತಕ್ಷಣಕ್ಕೆ 125 ಕೋಟಿ ಎಸ್.ಡಿ.ಆರ್.ಎಫ್ ಫಂಡ್ ರಿಲೀಸ್ ಆಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಗೆ ಪರಿಹಾರ ಕೊಡಲು ನಮಗೆ ದುಡ್ಡಿನ ಕೊರತೆ ಏನು ಇಲ್ಲ. ಕೊಡಗಿನಲ್ಲಿ 58 ಕೋಟಿ ರು. ಇದೆ, ಮೃತರಿಗೆ 5 ಲಕ್ಷ ಕೊಟ್ಟಿದ್ದೇವೆ. ನದಿಪಾತ್ರದಲ್ಲಿ ಮುಳುಗಡೆಯಾದ ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಕೆಲಸ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸರ್ವೀಸ್‌ನಲ್ಲಿ ಎಂತೆಂಥವುಗಳನ್ನು ನೋಡಿದ್ದೇನೆ....ಬೇಡ್ತಿ ಸೇತುವೆ ಮೇಲೆ ಶಿವರಾಮ ಹೆಬ್ಬಾರ್ ಸಾಹಸ
ಹುಣಸೂರಿನಲ್ಲಿ ಅಂದಾಜು ಎರಡುವರೆ ಸಾವಿರ ಎಕರೆ ಕೃಷಿಭೂಮಿ ಹಾಳಾಗಿದೆ. ಆದರೆ ಉಳಿದ ಭೂಮಿಯಲ್ಲಿ ಬೆಳೆ ನಷ್ಟ ಆಗಿದೆ. ಮುಂದಿನ ಬೆಳೆ ತೆಗಿಯೋಣ. ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾದ ಕ್ಷಣದಲ್ಲೂ ಜಲಾಶಯಗಳೆಲ್ಲಾ ತುಂಬಿದ್ದವು. ಜನರ ಪರವಾಗಿ ನಾವು ಇದ್ದೇವೆ ಎಂದು ಹುಣಸೂರು ತಾಲೂಕು ಕೋಣನ ಹೊಸ ಹಳ್ಳಿಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಕಳೆದೊಂದು ವಾರದಿಂದ ರಾಜ್ಯದ ಕರಾವಳಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಅರ್ಧಕ್ಕಿಂತ ಹೆಚ್ಚಿನ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ.