10 ಸಾವಿರ ಕೋಟಿ ಹಾನಿ ವರದಿ: ದೆಹಲಿಗೆ ಬಾ ಎಂದ ಶಾ, ಭಾರೀ ನಿರೀಕ್ಷೆಯಲ್ಲಿ ಕರುನಾಡು

By Web DeskFirst Published Aug 11, 2019, 10:23 PM IST
Highlights

ನೆರೆಯಿಂದ ಅಂದಾಜು 30 ಸಾವಿರ ಕೋಟಿ ಹಾನಿ| ಮೊದಲ ಹಂತದಲ್ಲಿ 3 ಸಾವಿರ ಕೋಟಿಗೆ ಶಾ ಮುಂದೆ ಬೇಡಿಕೆ ಇಟ್ಟ ಬಿಎಸ್​ವೈ| ದೆಹಲಿಗೆ ಬರಲು ಸೂಚಿಸಿದ ಗೃಹ ಸಚಿವ ಅಮಿತ್ ಶಾ| ಭಾರೀ ನಿರೀಕ್ಷೆಯಲ್ಲಿ ಕರುನಾಡು.  

ಬೆಳಗಾವಿ, [ಆ.11]:  ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಇಂದು [ಭಾನುವಾರ]  ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. 

ಸುವರ್ಣ ನ್ಯೂಸ್‌ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ

ಭಾನುವಾರ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾ, ಸೇನಾ ಹೆಲಿಕಾಪ್ಟರ್ ನಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಅಥಣಿ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹಪೀಡಿತ ಪ್ರದೇಶಗಳನ್ನು ಅವಲೋಕಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2.10 ನಿಮಿಷಗಳ ಕಾಲ ಏರಿಯಲ್ ಸರ್ವೆ ಮಾಡಿದ ಅಮಿತ್ ಶಾಗೆ  ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಚಿವರಾದ ಪ್ರಲ್ಹಾದ್​ ಜೋಶಿ ಮತ್ತು ಸುರೇಶ್​ ಅಂಗಡಿ ಸಾಥ್ ನೀಡಿದರು. ಬಳಿಕ  ಸಾಂಬ್ರಾ ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳೊಂದಿಗೆ ಕೆಲಹೊತ್ತು ಸಭೆ ನಡೆಸಿದ ಶಾ, ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಿದರು.

ಶಾಗೆ 10 ಸಾವಿರ ಕೋಟಿ ರು. ಹಾನಿ ವರದಿ 


ಪ್ರವಾಹದಿಂದಾಗಿ ರಾಜ್ಯದಲ್ಲಿ 10 ಸಾವಿರ ಕೋಟಿ ರೂಪಾಯಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದು, ಈ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ 4.81 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದ್ದು, 22431 ಮನೆಗಳ ಹಾನಿಯಾಗಿದೆ. ಪ್ರಾಥಮಿಕ ಸಮೀಕ್ಷೆಯ ಪ್ರಕಾರ 10 ಸಾವಿರ ಕೋಟಿ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಇಡೀ ರಾಜ್ಯದ ಪ್ರವಾಹ ಸ್ಥಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ.ವಿಜಯ್ ಭಾಸ್ಕರ್, ಶಾಗೆ ಸಂಪೂರ್ಣ ಮಾಹಿತಿ ನೀಡಿದರು.

3 ಸಾವಿರ ಕೋಟಿ ಪರಿಹಾರ ಬಿಡುಗಡೆಗೆ ಸಿಎಂ ಮನವಿ


10 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಆದ್ರೆ ಸಿಎಂ ಯಡಿಯೂರಪ್ಪ ಅವರು ಶೀಘ್ರವೇ ತಾತ್ಕಾಲಿಕವಾಗಿ 3 ಸಾವಿರ ಕೋಟಿ ರು. ಪರಿಹಾರ ಬಿಡುಗಡೆ ಮಾಡುವಂತೆ ಶಾ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಿತ್ ಶಾ  ಕ್ಲೀಯರ್ ಪಿಚ್ಚರ್ ಪಡೆದುಕೊಂಡು ದೆಹಲಿಯತ್ತ ಪ್ರಯಾಣ ಬೆಳೆಸಿದರು.

ದೆಹಲಿಗೆ ಬರುವಂತೆ ಶಾ ಸೂಚನೆ

ರಾಜ್ಯದಲ್ಲಾದ ಪ್ರವಾಹ ಹಾನಿಯನ್ನು ಅಮಿತ್ ಶಾ ಕಣ್ಣಾರೆ ಕಂಡಿದ್ದಾರೆ. ಅಷ್ಟೇ ಅಲ್ಲದೇ ನಷ್ಟದ ಬಗ್ಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ ನೆರೆ ಸಂತ್ರಸ್ತರಿಗೆ ಖಂಡಿತ ಸಹಾಯ ಮಾಡುತ್ತವೆ ಎಂದು ಶಾ ಟ್ವೀಟ್ ಮೂಲಕ ಕರುನಾಡಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಚರ್ಚಿಸಲು ಆಗಸ್ಟ್ 16ರಂದು ದೆಹಲಿಗೆ ಬರುವಂತೆ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.  

ಭಾರೀ ನಿರೀಕ್ಷೆಯಲ್ಲಿ ಕರುನಾಡು


ಹೌದು..ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇರುವುದರಿಂದ ಅನುದಾನಕ್ಕೇನು ಬರ ಇಲ್ಲ. ಬೇಕಾದಷ್ಟು ಸಿಗುತ್ತೆ ಎಂದು ಎಲ್ಲರ ಭಾವನೆ. ಇದೇ ಭಾವನೆಯಲ್ಲಿ ಇಡೀ ಕರುನಾಡು ಇದೆ. ಅಮಿತ್ ಶಾ ಸೂಚನೆಯಂತೆ ಬಿಎಸ್ ವೈ ಆಗಸ್ಟ್ 16ಕ್ಕೆ ದೆಹಲಿಗೆ ತೆರಳಲಿದ್ದು, ಎಷ್ಟು ಅನುದಾನ ಕೊಟ್ಟು ಕಳುಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.  

click me!