ಇಂಧನ ಇಲಾಖೆಯಲ್ಲಿ ಒಳ ಒಪ್ಪಂದ ಆರೋಪ, ಸಿಬಿಐ ತನಿಖೆಗೆ ಡಿಕೆಶಿ ಒತ್ತಾಯ

By Gowthami KFirst Published Aug 19, 2022, 9:27 PM IST
Highlights

ಇಂಧನ ಇಲಾಖೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ತಡ ಮಾಡದೆ ಸರ್ಕಾರ ತನಿಖೆ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.19): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆಂದ ಬಿಜೆಪಿ ಶಾಸಕ ಭೋಪಯ್ಯ ವಿರುದ್ಧ ಕಿಡಿಕಾರಿದರು. ಮೊದಲು ಆ ಬಿಜೆಪಿ ಶಾಸಕ ಭೋಪಯ್ಯನ ಬಂಧಿಸಬೇಕು ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ, ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು. ನಮ್ಮ ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆಂದಿದ್ದು ಹೇಡಿತನ ಎಂದು ವಾಗ್ದಾಳಿ ನಡೆಸಿದರು. ಇನ್ನೂ ಇದೇ ವೇಳೆ‌ ಇಂಧನ ಇಲಾಖೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಡ ಮಾಡದೆ ಸರ್ಕಾರ ತನಿಖೆ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು. ಕೇವಲ ಸ್ಟೇಟ್ ಮೆಂಟ್ ಮಾಡದೆ ತನಿಖೆ ಮಾಡಲಿ. ಸಿಬಿಐ, ಇಡಿಗಾದರು ವಹಿಸಿ ತನಿಖೆ ಮಾಡಲಿ ಎಂದರು. ಡಿಕೆ ಶಿವಕುಮಾರ್ ಅವರನ್ನು ಸರ್ಕಾರ ಕಟ್ಟಿ ಹಾಕಲು ಪ್ರಯತ್ನ ವಿಚಾರ. ಹಗ್ಗ, ಸರಪಳಿ ಬೇಕಿದ್ದರೆ ಕಳಿಸುವೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದ ಪ್ರತಾಪ್ ಸಿಂಹ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು. ಓಹೋಹೋ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ? ಮಡಿಕೇರಿ ಏನು ಅವರ ಮನೇನಾ ಅದು ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ಬಗ್ಗೆ ಇನ್ನೂ ಚರ್ಚಿಸಿಲ್ಲ. ಬೆಂಗಳೂರು ಹೋದ ಬಳಿಕ ಚರ್ಚೆ ಮಾಡುತ್ತೇನೆ ಎಂದರು‌. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ. ಸಚಿವರ ಕಾರ್ಯಕ್ರಮ ವೇಳೆ ಕೈ ಕಾರ್ಯಕರ್ತರ ಪ್ರತಿಭಟನೆಗೆ ಕರೆ ಕೊಟ್ಟರೆ ಏನಾಗಬಹುದು ಎಂದು ಯೋಚಿಸಿ ಎಂದರು.

ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

ವಿಪಕ್ಷ ನಾಯಕ ಸಿದ್ಧರಾಮಯ್ಯ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ. ಹೇಳಿಕೆಗಳ ಬಗ್ಗೆ ಟೀಕೆ ಪ್ರಜಾಪ್ರಭುತ್ವದ ಒಂದು ಭಾಗ. ನೆರೆ ವೇಳೆ ವಿಪಕ್ಷ ನಾಯಕರಾಗಿ ಭೇಟಿ ನೀಡಿದ್ದಾರೆ. ಸರ್ಕಾರದ ಕಣ್ತೆರೆಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಭೇಟಿ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಕೊಲೆ‌ ನಡೆಯುತ್ತಿವೆ ಎಂದು ಹೇಳಿದ್ದಾರೆ. ಪ್ರತಿಭಟನೆಗಳು ನಡೆದಿವೆ, ಎಂದು ವಿವಿಧ ಹೇಳಿಕೆ ನೀಡಿದ್ದಾರೆ. ಸರ್ಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಅವರ ಸಚಿವರೇ ಹೇಳಿದ್ದಾರೆ. ನಮ್ಮ ಜನರು ನಿಮ್ಮ ಕಾರ್ಯಕ್ರಮಕ್ಕೆ ಪ್ರತಿಭಟಿಸಿದರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿರುತ್ತದೆ ? ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ. ನಮಗೆ ಅಡ್ಡಿ ಪಡಿಸುವುದಾದರೆ ನಮಗೆ ಬೇರೆ ದಾರಿ ಇಲ್ಲ ಎಂದು ಬಿಜೆಪಿಯವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

ನಿಮ್ಮ ಕಾರ್ಯಕ್ರಮಗಳಿಗೆ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತದೆ. ಈಗಾಗಲೇ ನಮ್ಮಗಳ ವಿರುದ್ಧ ಅನೇಕ ಕೇಸ್ ಹಾಕಿದ್ದೀರಿ. ಮೇಕೆದಾಟು ಪಾದಯಾತ್ರೆ ವೇಳೆ ಕೇಸ್ ಹಾಕಿದ್ದೀರಿ. ನಿಮ್ಮ ನಾಯಕರ ಮೇಲಿನ ಕೇಸ್ ವಾಪಸ್ ಪಡೆದಿದ್ದೀರಿ. ನಮಗೂ ಕಾಲ ಬರುತ್ತದೆ ಎಂದು ಡಿಕೆಶಿ ಎಚ್ಚರಿಕೆ. ಸಚಿವರ ಕಾರ್ಯಕ್ರಮದ ವೇಳೆ ನಾವು ಕಪ್ಪುಬಾವುಟ ಪ್ರದರ್ಶಿಸುವದು ಅನಿವಾರ್ಯ ಆಗಲಿದೆ. ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಜನರು ನರಳುತ್ತಿದ್ದಾರೆ. ವಿಪಕ್ಷ ನಾಯಕರು ಸರ್ಕಾರ ಎಚ್ಚರಿಸುವ ಕರ್ತವ್ಯ ಮಾಡುತ್ತಿದ್ದಾರೆ. ಮೊಟ್ಟೆ ಹೊಡೆದು ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ನ್ನು ಎದುರಿಸಲಾಗದು. ಗೋ ಬ್ಯಾಕ್ ಎಂದು ಪ್ರತಿಭಟಿಸಿದರೆ ಹೇಗೆ ಬೊಮ್ಮಾಯಿ ಸಾಹೇಬರೆ, ಕಟೀಲ್‌ ಸಾಹೇಬರೆ ಅಧಿಕೃತವಾಗಿ ನಾವು ಸರ್ಕಾರಿ ಕಾರ್ಯಕ್ರಮದ ವಿರುದ್ಧ ಧರಣಿಗೆ ಕರೆ ನೀಡಿದರೆ? ಇದು ಲಂಚದ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕರೆ ನೀಡಿದರೆ? ಎಫ್ ಡಿಎ, ಇಂಜಿನಿಯರ್ ಆಯ್ಕೆಗೆ ಲಂಚ ಹೊಡಿದಿದ್ದೀರಿ ಎಂದು ನಾನು ಕರೆ ಕೊಟ್ಟರೆ ಏನಾಗಬಹುದು ಯೋಚಿಸಿ ಎಂದು ತಿಳಿಸಿದರು.

click me!