
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಕೊನೆಗೂ ಖಾತೆ ಹಂಚಿಕೆ ನಡೆದಿದ್ದು, ಸಚಿವ ಸ್ಥಾನ ಕೈತಪ್ಪಿ ಬಂಡಾಯ ಮಾಡಿದ್ದ ಶಾಸಕರ ಮನವೊಲಿಕೆ ಯಶಸ್ವಿಯಾಗಿ ಮಾಡಿದ ಬಳಿಕ ಈಗ ಖಾತೆ ಹಂಚಿಕೆಯನ್ನು ಬಹಳ ಲೆಕ್ಕಾಚಾರ ಮಾಡಿ ನೀಡಿದ್ದಾರೆ. ಈ ಹಿಂದೆ ಮೊದಲ ಹಂತದ ಖಾತೆ ಹಂಚಿಕೆಯಾದ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಸಚಿವ ಕೆಎಚ್ ಮುನಿಯಪ್ಪ, ಕೃಷ್ಣಬೈರೇಗೌಡ ಅವರು ಬೇಸರ ಹೊರಹಾಕಿದ್ದರು. ಅದರಲ್ಲೂ ರಾಮಲಿಂಗಾರೆಡ್ಡಿ ಅವರು ರಾಜೀನಾಮೆಯನ್ನು ನೀಡಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಮಾಡಿ ಅಧಿಕಾರ ವಹಿಸಿಕೊಳ್ಳುವಂತೆ ಮಾಡಿದ್ದರು. ಸದ್ಯ ನಡೆದಿರುವ ಎರಡನೇ ಹಂತದ ಖಾತೆ ಹಂಚಿಕೆ ಸಂದರ್ಭದಲ್ಲಿ ಅಳೆದುತೂಗಿ ಸಚಿವರಿಗೆ ಖಾತೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನೀಡಿದ್ದ ಆಹಾರ ಇಲಾಖೆಯನ್ನು ಮತ್ತೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಕೆಎಚ್ ಮುನಿಯಪ್ಪ ಅವರು, ಸಮಾಜ ಕಲ್ಯಾಣ ಇಲಾಖೆಗೆ ಪಟ್ಟುಹಿಡಿದು ಹೈಕಮಾಂಡ್ ಭೇಟಿಯನ್ನು ಮಾಡಿದ್ದರು.
ಸದ್ಯ ಮುನಿಯಪ್ಪ ಬೇಡಿಕೆಗೆ ಕೊನೆಗೂ ಮಣಿದ ಹೈಕಮಾಂಡ್, ಅವರು ಕೇಳಿದ ಖಾತೆ ನೀಡಿ ಸಮಾಧಾನ ಮಾಡಿದೆ. ಮುನಿಯಪ್ಪ ಅವರಿಗೆ ನೀಡಿದ್ದ ಆಹಾರ ಇಲಾಖೆಯನ್ನು ರಿಜ್ವಾನ್ ಅವರಿಗೆ ನೀಡಿರುವ ಹೈಕಮಾಂಡ್, ಸಮಾಜ ಕಲ್ಯಾಣ ಖಾತೆಯನ್ನು ಮುನಿಯಪ್ಪ ಅವರಿಗೆ ನೀಡಿದೆ.
ಇನ್ನು, ಮಹಿಳೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿರುವ ಸಚಿವ ಕೆಎಚ್ ಮುನಿಯಪ್ಪ ಪುತ್ರಿ KGF ಶಾಸಕಿ ರೂಪಕಲಾ, ಮಹಿಳೆಯರಿಗೆ ಅವಕಾಶ ನೀಡುವ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ನಿರ್ಧಾರ ಮಾಡಲಿದ್ದಾರೆ. ರಾಜ್ಯದ ದೃಷ್ಟಿಕೋನ ಇಟ್ಟುಕೊಂಡು ಜವಾಬ್ದಾರಿ ನೀಡಲಿದೆ. ಪಕ್ಷದ ಇತಿಮಿತಿಯಲ್ಲಿ ಮಾತನಾಡಬೇಕು. ಮಹಿಳೆಯರಿಗೆ ಸಚಿವ ಸಿಗಬೇಕು, ಜನರ ಕಷ್ಟ ಸುಖಗಳು ಅರಿತವರು ಸದನಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಪಕ್ಷ ನಮಗೆ ಸಂಘಟನೆ ಮಾಡುವಂತೆ ಜವಾಬ್ದಾರಿ ಕೊಟ್ಟಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರು ಗೆದ್ದಿಲ್ಲ, ನಮಗೆ ಅವಕಾಶ ಸಿಕ್ಕಿದೆ. ದ್ವೇಷ, ಅಸೂಯೆ, ಸ್ವಾರ್ಥಗಳಿಗೆ ನಾನು ಬಲಿಯಾಗಲ್ಲ. ಯಾರ ಬಗ್ಗೆ ನಾನು ಮಾತನಾಡಲ್ಲ, ಕ್ಷೇತ್ರದ ಜನರ ಧ್ವನಿಯಾಗಿದ್ದರೆ ಸಾಕು. ಹಲವಾರು ನಾಯಕರು ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ನನಗೆ ಒಂದು ಅವಕಾಶ ಕೋಡಿ, ಅವಕಾಶ ವಂಚಿತೆಂದು ಕೇಳುವುದು ತಪ್ಪಲ್ಲ. ಅವಕಾಶ ವಂಚಿತರು ಕೇಳುವುದರಲ್ಲಿ ತಪ್ಪಲ್ಲ, ಕೇಳಬಹುದು.
ರಾಜ್ಯದಲ್ಲಿ 5 ರಿಂದ 6 ಮಹಿಳೆ ಶಾಸಕರು ಗೆದಿದ್ದರೆ. ಮಹಿಳೆಯರ, ತಾಯಂದಿರು ಧ್ವನಿಯಾಗಬೇಕು. ಅದರಲ್ಲಿ ಜಾತಿ ಧರ್ಮ ನೋಡಬಾರದು. ಪಕ್ಷ ಸ್ಥಾನ ಮಾನ ಕೊಡುತ್ತೆ, ನನ್ನಂತವರನ್ನು ಹುಟ್ಟು ಹಾಕುವ ಶಕ್ತಿ ಪಕ್ಷಕ್ಕೆ ಇದೆ. ರಾಜಕಾರಣಿ ಪ್ರತಿಯೊಬ್ಬರ ಆಸ್ತಿಯಾಗಬೇಕು. ನನ್ನ ನಿರ್ಧಾರಕ್ಕೆ ರಾಜಕಾರಣಿಯಾಗಬೇಕು. ಇಡೀ ರಾಜ್ಯದ ಮಹಿಳೆಯರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರೂಪಕಲಾ ತಿಳಿಸಿದ್ದಾರೆ.