KR ಪೇಟೆ ಬಿಜೆಪಿ ಗೆಲುವಿನ ಹಿಂದೆ ತೋಟದ ಮನೆಯ ಸೀಕ್ರೆಟ್

By Suvarna NewsFirst Published Dec 10, 2019, 1:06 PM IST
Highlights

KR ಪೇಟೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇದರ ಹಿಂದಿನ ಸೀಕ್ರೆಟ್ ಇಲ್ಲಿನ ತೋಟದ ಮನೆ ಎನ್ನಲಾಗುತ್ತಿದೆ. ಏನಿದು ತೋಟದ ಮನೆ ಸೀಕ್ರೆಟ್

ಮಂಡ್ಯ [ಡಿ.10]: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇನ್ನು ಜೆಡಿಎಸ್ ಚುನಾವಣೆಯಲ್ಲಿ ಶೂನ್ಯ ಫಲಿತಾಂಶ ದಾಖಲು ಮಾಡಿದೆ. 

ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ಆರ್.ಪೇಟೆ ಸಹ ಈ ಬಾರಿ ಬಿಜೆಪಿ ವಶವಾಗಿದ್ದು, ನಾರಾಯಣ ಗೌಡಗೆ ವಿಜಯ ಒಲಿದಿದೆ. ಈ ಜಯದ ಹಿಂದೆ ಒಂದು ಸೀಕ್ರೆಟ್ ಅಡಗಿದೆ. 

ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಗೆಲುವಿಗೆ ಇಂದು ಇರುವುದು ತೋಟದ ಮನೆ ಸೀಕ್ರೆಟ್. ಬಿಜೆಪಿ ಶಕ್ತಿ ಕೇಂದ್ರವಾಗಿದ್ದ ಆ ತೋಟದ ಮನೆ ಸದ್ಯ ಕೆ.ಆರ್.ಪೇಟೆ ಬಿಜೆಪಿಗರಿಗೆ ಅದೃಷ್ಟದ ಮನೆ ಎನಿಸಿಕೊಂಡಿದೆ. ಕೆ.ಆರ್ ಪೇಟೆ ಗೆಲುವಿನ ಎಲ್ಲಾ ಲೆಕ್ಕಾಚಾರಗಳೂ ಇಲ್ಲಿಯೇ ನಡೆದಿದ್ದವು. 

ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?..

ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲು ಪ್ರಮುಖ ಪಾತ್ರ ವಹಿಸಿದ್ದ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಸತತ 15 ದಿನಗಳ ಕಾಲ ಇಲ್ಲಿಯೇ ವಾಸ ಮಾಡಿದ್ದು, ಚುನಾವಣೆಯ ಎಲ್ಲಾ ಮಾಸ್ಟರ್ ಪ್ಲಾನ್ ಗಳು ಇಲ್ಲಿಯೇನಡೆದಿದ್ದವು.  ಈ ಮನೆಯಲ್ಲಿ ರಣತಂತ್ರ ರೂಪಿಸಿ ಜೆಡಿಎಸ್ ಭದ್ರಕೋಟೆ ಭೇದಿಸಲು ವಿಜಯೇಂದ್ರ ನೇತೃತ್ವದ ತಂಡ ಕಾರ್ಯತಂತ್ರಗಳನ್ನು ರೂಪಿಸಿತ್ತು. 

ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ಇರುವ ಮನೆಯು ಪ್ರಶಾಂತ ವಾತಾವರಣದಲ್ಲಿ ಇದ್ದು ಪ್ರತಿದಿನವೂ ಕೂಡ ಇದೇ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಈ ತೋಟದ ಮನೆಯ ಲಕ್ ಬಿಜೆಪಿಗೆ ಗೆಲುವು ತಂದುಕೊಟ್ಟಿದೆ ಎಂದೇ ಇದೀಗ ಕಾರ್ಯಕರ್ತರು ಹೇಳುತ್ತಿದ್ದಾರೆ. 

click me!