ಬೆಳಗಾವಿ ಜಿಲ್ಲೆಗೆ ಒಲಿದು ಬರಲಿದೆಯಾ ಆರು ಸಚಿವ ಸ್ಥಾನ..?

By Suvarna NewsFirst Published Dec 10, 2019, 12:41 PM IST
Highlights

ಉಪಚುನಾವಣೆ ನಡೆದು ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ಪಟ್ಟ ಪಡೆದವರೆಲ್ಲರೂ ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಒಂದು ಜಿಲ್ಲೆಯಲ್ಲಿಯೇ ಆರು ಜನ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ.

ಬೆಳಗಾವಿ(ಡಿ.10): ಉಪಚುನಾವಣೆ ನಡೆದು ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ಪಟ್ಟ ಪಡೆದವರೆಲ್ಲರೂ ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಒಂದು ಜಿಲ್ಲೆಯಲ್ಲಿಯೇ ಆರು ಜನ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ.

ವಾಲ್ಮಿಕಿ ಸಮುದಾಯದ ಕೋಟಾದಡಿ ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ದೊರೆಯುವುದು ಬಹುತೇಕ ಫಿಕ್ಸ್ ಆಗಿದೆ. ಬೆಳಗಾವಿ ಜಿಲ್ಲೆಗೆ ಆರು ಸಚಿವ ಸ್ಥಾನ ಒಲಿದು ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಸೋತರೂ ಮನಸ್ಸಿಂದ ಹೋಗಿಲ್ಲ ಮಂತ್ರಿಗಿರಿ ಆಸೆ, ಸಚಿವ ಸ್ಥಾನಕ್ಕೆ ಹಳ್ಳಿ ಹಕ್ಕಿ ಲಾಭಿ

ಈಗಾಗಲೇ ಬೆಳಗಾವಿ ಜಿಲ್ಲೆಯ ಓರ್ವ ಡಿಸಿಎಂ, ಓರ್ವ ಸಚಿವೆ ಸಂಪುಟದಲ್ಲಿದ್ದಾರೆ. ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ ಈಗಾಗಲೇ ಬಿ.ಎಸ್‌. ಯಡಿಯೂರಪ್ಪ ಸಂಪುಟದಲ್ಲಿದ್ದಾರೆ. ಉಪಚುನಾವಣೆ ಗೆದ್ದ ಮೂವರು ಶಾಸಕರಿಗೂ ಮಂತ್ರಿಗಿರಿ ನೀಡುವುದು ಬಹುತೇಕ ಪಕ್ಕಾ ಆಗಿದೆ. ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ, ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ್ ಪಾಟೀಲ್‌ಗೆ ಮಂತ್ರಿಗಿರಿ ಫಿಕ್ಸ್ ಆಗಿದೆ.

ಈರುಳ್ಳಿ ಮಾರೋಕೆ ಲೈಸೆನ್ಸ್ ಕಡ್ಡಾಯ, ಬೇಕಾಬಿಟ್ಟಿ ಸ್ಟಾಕ್ ಮಾಡಿದ್ರೆ ಕೇಸ್

ಮತ್ತೊಂದೆಡೆ ಉಮೇಶ್ ಕತ್ತಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದು, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲೂ ರೆಡಿ ಎಂದಿದ್ದಾರೆ. ಇನ್ನು ಹುಣಸೂರಿನಲ್ಲಿ ಸೋತ ವಿಶ್ವನಾಥ್ ಕೂಡಾ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ರಮೇಶ್‌ ಜಾರಕಿಹೊಳಿ‌, ಮಹೇಶ್ ಕುಮಟಳ್ಳಿ ಸಂಜೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು, ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಡೆಂಘಿ ಜ್ವರ ಹಿನ್ನೆಲೆ ಮಹಾರಾಷ್ಟ್ರದ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಮೇಶ್‌ ಜಾರಕಿಹೊಳಿ ಡಿಸಿಎಂ ಆಗ್ತಾರಾ?

click me!