ಉಪಚುನಾವಣೆಗೂ ಮುನ್ನ  ವರ್ಗಾವಣೆ; ಬೆಳಗಾವಿ ಡಿಸಿಯಾಗಿ ಹರೀಶ್ ಕುಮಾರ್

By Suvarna NewsFirst Published Mar 22, 2021, 6:27 PM IST
Highlights

ಉಪಚುನಾವಣೆಗೂ ಮುನ್ನ ವರ್ಗಾವಣೆ/ ಬೆಳಗಾವಿ ಡಿಸಿಯಾಗಿ ಹರೀಶ್ ಕುಮಾರ್ ನೇಮಕ/ ಜಿಲ್ಲಾ ಮಟ್ಟದ ಅತ್ಯುತ್ತಮ ಚುನಾವಣಾ ಅಧಿಕಾರಿ ಪುರಸ್ಕಾರಕ್ಕೆ ಪಾತ್ರವಾಗಿದ್ದರು/ ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ

ಬೆಂಗಳೂರು(ಮಾ.  22) ಉಪಚುನಾವಣೆ ಕಾವು ರಂಗೇರುತ್ತಲೇ ಇದೆ.  ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ  ಲೋಕಸಭಾ ಸ್ಥಾನಕ್ಕೂ ಉಪಚುನಾವಣೆ ಘೋಷಣೆಯಾಗಿದೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎಂಜಿ ಹಿರೇಮಠ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ.

ಸಿಎಂ ಹೇಳಿದ ಬೈ ಎಲೆಕ್ಷನ್ ಕ್ಯಾಂಡಿಡೇಟ್

ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಹರೀಶ್ ಕುಮಾರ್  ಜಿಲ್ಲಾ ಮಟ್ಟದ ಅತ್ಯುತ್ತಮ ಚುನಾವಣಾ ಅಧಿಕಾರಿ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಚುನಾವಣಾ ಆಯೋಗ ಸಂಸ್ಥಾಪನೆ ದಿನದ ನೆನಪಿಗೆ ಮತದಾರರ ದಿನಾಚರಣೆ ಅಂಗವಾಗಿ  ಪಾರದರ್ಶಕ ಚುನಾವಣೆ, ಮತದಾನ ಜಾಗೃತಿ ಅಂಶಗಳನ್ನು ಪರಿಗಣಿಸಿ  ಪುರಸ್ಕಾರ ನೀಡಲಾಗಿತ್ತು.

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಆರಂಭವಾದ ನಂತರ ಕ್ರಮ ಕೈಗೊಂಡಿದ್ದ ಸರ್ಕಾರ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ರಚನೆ ಮಾಡಿತ್ತು. ಕೋವಿಡ್ ಕಣ್ಗಾವಲು ಮತ್ತು ಮೇಲುಸ್ತುವಾರಿ ನೊಡಲ್ ಆಧಿಕಾರಿಯನ್ನಾಗಿ ಹರೀಶ್ ಕುಮಾರ್ ಅವರನ್ನು ಕೆಲವೆ ದಿನದ ಹಿಂದೆ ನೇಮಕ ಮಾಡಲಾಗಿತ್ತು.

ಬೆಳಗಾವಿ ಲೋಕಸಭಾ ಚುನಾವಣೆ ಜತೆಗೆ ಮಸ್ಕಿ ಮತ್ತು ಬಸವಕಲ್ಯಾಣ  ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅಧಿಸೂಚನೆ ಪ್ರಕಟವಾಗಿದೆ. ಏಪ್ರಿಲ್ 17ಕ್ಕೆ ಮತದಾನ
ನಡೆಯಲಿದ್ದು ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಕಾರ್ಯಾಚರಣೆ ಆರಂಭ ಮಾಡಿವೆ. 

click me!