ಬಸ್ ಸ್ಟ್ಯಾಂಡ್ ರಾಘು ಸೋಲಿಸಲು ಗುದ್ದಲಿ ಗೋಪಾಲ ಪಣ!

By Web DeskFirst Published Oct 18, 2018, 6:07 PM IST
Highlights

ಶಿವಮೊಗ್ಗ ಲೋಕಸಭಾ ಕಣ ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಒಂದು ಕಡೆ ಬಿಜೆಪಿ ಮತ್ತೊಂದು ಕಡೆ ಮೈತ್ರಿ ಸರಕಾರದ ಪರ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅಖಾಡಕ್ಕೆ ಇಳಿದಿದ್ದಾರೆ.

ಶಿವಮೊಗ್ಗ[ಅ.18]  ಮಾಜಿ ಸಿಎಂ ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದಾದರೆ ಬಸ್ ಸ್ಟ್ಯಾಂಡ್ ರಾಘು ಸೋಲಿಸಲೇ ಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲ ಕೃಷ್ಣ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ರಾಜಕಾರಣ, ಸಮ್ಮಿಶ್ರ ಸರ್ಕಾರ ದ ಆಭ್ಯರ್ಥಿ ಮಧು ಬಂಗಾರಪ್ಪ ಕಣಕ್ಕಿಳಿದ್ದಾರೆ. ಮೀ  ಟೂ ದಲ್ಲಿ ಕೇಂದ್ರ ಸರ್ಕಾರದ ಒಂದು ವಿಕೆಟ್ ಪತನವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ. ಸುಪ್ರೀಂ ಕೋರ್ಟ್ ಆಕ್ರಮ ಸಂಬಂಧದ ಬಗ್ಗೆ ಹೇಳಿದರೂ ಬಿಜೆಪಿಯವರು ಮಾತನಾಡಿಲ್ಲ , ಹಾಗಾಗಿ ಇವರಿಗೆ ಮಿ ಟೂ ಬೇಕಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಅಂಗಲಾಚಿ ಜೆಡಿಎಸ್ ಜೊತೆಗೆ ಸರ್ಕಾರ ಮಾಡಿದರಲ್ಲ ಅದು ಅಪವಿತ್ರ ಮೈತ್ರಿ ಅಲ್ಲವೇ ಎಂದು ಪ್ರಶ್ನೆ ಮಾಡಿದ ಬೇಳೂರು ಬಿಜೆಪಿ ಯವರು ಎನೂ ಅಪಪ್ರಚಾರ ಮಾಡಿದರೂ ಮೈತ್ರಿ ಸರ್ಕಾರ ಸುಭದ್ರ ವಾಗಿದೆ. ಯಡಿಯೂರಪ್ಪ ಅವರಿಗೆ ಕಣ್ಷು ಕಾಣಿಸುತ್ತಿಲ್ಲ, ಕಿವಿ ಯೂ ಕೇಳಿಸುತ್ತಿಲ್ಲ. ಅಚ್ಛೆ ದಿನ್ ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಬಂದಿದೆ. ಯಡಿಯೂರಪ್ಪ ನವರ ಮಗನ ಅಸ್ತಿ ವಿವರ ಶೇ.16  ರಷ್ಟು ಜಾಸ್ತಿ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?...ಫುಲ್ ಡಿಟೇಲ್ಸ್

ಬ್ರಾಹ್ಮಣ ಸಮಾಜಕ್ಕೆ ಬಿಜೆಪಿ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ. ಯಡಿಯೂರಪ್ಪ ಬಕೆಟ್ ಹಿಡಿಯುವವರಿಗೆ ಮಾತ್ರ ಟಿಕೆಟ್ ಕೊಟ್ಟಿದ್ದಾರೆ. ಅನಂತ ಕುಮಾರ್ ಹೆಗಡೆ ಯನ್ನು ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಮತ್ತು ಶೋಭಾ ಕರದ್ಲಾಂಜೆ ಪಿತೂರಿ ಮಾಡಿದರು. ರಾಜಕೀಯ ಕಾರಣಕ್ಕಾಗಿ ಬ್ರಾಹ್ಮಣ ಸಮಾಜವನ್ನು ಯಡಿಯೂರಪ್ಪ ಮತ್ತವರ ಮಕ್ಕಳು ತುಳಿಯಲು ಪ್ರಯತ್ನ ನಡೆಸಿದ್ದಾರೆ. ಮಧು ಬಂಗಾರಪ್ಪ ನವರ ಹೆಸರನ್ನು ಯಡಿಯೂರಪ್ಪ ನವರು ಯಾರಿಗೂ ಹೇಳ ಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿ ಅಪಹಾಸ್ಯ ಮಾಡಿದ್ದೀರಾ? ರಾಜ್ಯದ ಜನತೆ ಮಧು ರವರು ಬಂಗಾರಪ್ಪ ಪುತ್ರ ಎಂದು ಗೊತ್ತು ಎಂದು ಟೀಕಾ ಪ್ರಹಾರ ಮಾಡಿದ್ದಾರೆ.

ತುಮರಿ ಸೇತುವೆ ನಿರ್ಮಾಣ ಮಾಡುವುದಾಗಿ ಕಿವಿ ಮೇಲೆ ಹೂವು ಇಟ್ಟಿದ್ದಾರೆ.ಈ ಬಾರಿ ಮಧು ಬಂಗಾರಪ್ಪ ಗೆದ್ದೇ ಗೆಲ್ಲುತ್ತಾರೆ. ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ತಮ್ಮೆಲ್ಲ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು. ಯಡಿಯೂರಪ್ಪ ಮಾತು ಎತ್ತಿದ್ದರೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳಿದರರೂ ಸಮ್ಮಿಶ್ರ ಸರ್ಕಾರ ಬಿದ್ದು ಹೋಗೋಲ್ಲ. ಅದು ಠುಸ್ ಪಟಾಕಿ ಆಗುತ್ತದೆ. ಕುಮಾರ್ ಬಂಗಾರಪ್ಪ ಗಾಳಿಗೆ ತೂರಿಕೊಂಡು ಬಂದಿದ್ದಾರೆ ಈ ಬಾರಿ ಸೊರಬ ಕ್ಷೇತ್ರದಲ್ಲಿ ಲೀಡ್ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

click me!