ಮಂಗಳೂರು ಸ್ಮಾರ್ಟ್ ಸಿಟಿಯ ಯೋಜನೆಗಳಲ್ಲೊಂದಾದ ರಾಜ್ಯದ ಅತಿದೊಡ್ಡ ಕ್ಲಾಕ್ ಟವರ್ ‘ಟಿಕ್ ಟಿಕ್’ ಎನ್ನಲು ದಿನಗಣನೆ ಆರಂಭವಾಗಿದೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಕಳೆದೊಂದು ವರ್ಷದಿಂದ ನೂತನ ಕ್ಲಾಕ್ ಟವರ್ ಕಾಮಗಾರಿ ನಡೆದಿದ್ದು, ಕೊನೆಯ ಹಂತ ತಲುಪಿದೆ.
ಮಂಗಳೂರು(ಸೆ.25): ಮಂಗಳೂರು ಸ್ಮಾರ್ಟ್ ಸಿಟಿಯ ಯೋಜನೆಗಳಲ್ಲೊಂದಾದ ರಾಜ್ಯದ ಅತಿದೊಡ್ಡ ಕ್ಲಾಕ್ ಟವರ್ ‘ಟಿಕ್ ಟಿಕ್’ ಎನ್ನಲು ದಿನಗಣನೆ ಆರಂಭವಾಗಿದೆ. ಈ ಕೆಲಸ ಅಂತಿಮ ಹಂತಕ್ಕೆ ತಲುಪಿದ್ದು, ಗುರುವಾರ ಬೃಹತ್ ಗಡಿಯಾರಗಳನ್ನು ಫಿಟ್ ಮಾಡುವ ಕಾಮಗಾರಿ ನಡೆದಿದೆ.
1930ರ ದಶಕದಲ್ಲಿ ನಾಯಕ್ ಕ್ಲಾಕ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದ ವಾಮನ್ ನಾಯಕ್ ಅವರು 1964ರಲ್ಲಿ ಇಲ್ಲಿ ಕ್ಲಾಕ್ ಟವರ್ ನಿರ್ಮಿಸಿಕೊಟ್ಟಿದ್ದರು. ಯಾಂತ್ರಿಕವಾಗಿ ಓಡುವ ಆ ಗಡಿಯಾರಕ್ಕೆ ವಾರಕ್ಕೊಮ್ಮೆ ಕೀ ಕೊಡಬೇಕಿತ್ತು. ಕ್ರಮೇಣ ನಗರ ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ನಿಖರ ಸಮಯ ನೀಡುತ್ತಿದ್ದ ಆ ಕ್ಲಾಕ್ ಟವರ್ ಕೂಡ ಇತಿಹಾಸದ ಪುಟ ಸೇರಿ ಹೋಯಿತು. ಇದೀಗ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕಳೆದೊಂದು ವರ್ಷದಿಂದ ನೂತನ ಕ್ಲಾಕ್ ಟವರ್ ಕಾಮಗಾರಿ ನಡೆದಿದ್ದು, ಕೊನೆಯ ಹಂತ ತಲುಪಿದೆ.
ಮಂಗಳೂರು: ಅರಳಿದ ಮಲ್ಲಿಗೆ ಕೇಳಿದ ಬಾಲಿವುಡ್ ತಾರೆ..!
ಹಳೆಯ ಕ್ಲಾಕ್ ಟವರ್ ನಿರ್ಮಿಸಿದ ಸಂಸ್ಥೆಯೇ ಈಗಲೂ ಗಡಿಯಾರ ಅಳವಡಿಸುವ ಕೆಲಸ ವಹಿಸಿಕೊಂಡಿದೆ. ಮಂಗಳೂರಿನ ಮಾರ್ನಮಿಕಟ್ಟೆಯ ನಾಯಕ್ಸ್ ಟೈಮ್ ಸಂಸ್ಥೆಯ ಸತೀಶ್ ನಾಯಕ್ ಹಾಗೂ ಅವರ ಪುತ್ರ ಸಿದ್ಧಾಂತ್ ನಾಯಕ್ ಅವರು ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ರಾಜ್ಯದಲ್ಲೇ ದೊಡ್ಡದು:
ಈಗಿನ ಹೊಸ ಗಡಿಯಾರಕ್ಕೆ ಕೀ ಕೊಡಬೇಕಿಲ್ಲ. ಸಿಡಿಲು ಮತ್ತಿತರ ಅವಘಡಗಳಾದರೂ ಗಡಿಯಾರ ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತದೆ. ಅಂಥದನ್ನು ತಡೆಯುವ ಶಕ್ತಿ ಅವುಗಳಿಗಿದೆ. ಎರಡು ಸೌಂಡ್ ಬಾಕ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಗಂಟೆಯ ಬೆಲ್ ಶಬ್ದ ಉತ್ತಮವಾಗಿ ಕೇಳುತ್ತದೆ. 88 ಅಡಿ ಸುತ್ತಳತೆಯ ಕ್ಲಾಕ್ ಇದಾಗಿದ್ದು, ಇಷ್ಟುದೊಡ್ಡ ಗಡಿಯಾರ ರಾಜ್ಯದಲ್ಲೇ ಇಲ್ಲ ಎಂದು ಸತೀಶ್ ನಾಯಕ್ ಹೇಳುತ್ತಾರೆ.
KMC ಪ್ರಥಮ ‘ಮಹಿಳಾ ಮತ್ತು ಮಕ್ಕಳ ಕೇಂದ್ರಕ್ಕೆ ಚಾಲನೆ, ನಟಿ ಶಿಲ್ಪಾ ಶೆಟ್ಟಿ ಕೊಟ್ಟ ಸಲಹೇಗಳೇನು..?
ಗಡಿಯಾರಗಳ ಪ್ರಾಯೋಗಿಕ ಅಳವಡಿಕೆ ಮಾಡಿ ನೋಡಿದ್ದೇವೆ, ಸರಿಯಾಗಿ ನಡೆಯುತ್ತದೆ ಎನ್ನುವುದನ್ನು ಖಾತರಿಗೊಳಿಸಿದ್ದೇವೆ ಎಂದವರು ತಿಳಿಸಿದರು. ಇಟಲಿ ತಂತ್ರಜ್ಞಾನ: ಈ ಗಡಿಯಾರಗಳ ಯಂತ್ರೋಪಕರಣಗಳನ್ನು ತರಿಸಿದ್ದು ಇಟಲಿಯಿಂದ. ಇದರಲ್ಲಿ 8 ಬಗೆಯ ಬೆಲ್ ವ್ಯವಸ್ಥೆ ಇದ್ದರೂ ಭಾರತೀಯರಿಗೆ ಇಷ್ಟವಾಗುವಂಥ ಒಂದೇ ವಿಧದ ಬೆಲ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗಂಟೆ ಸೂಚಿಸುವ ಬೆಲ್‌ಗಳು ಮತ್ತು ಪ್ರತಿ ಅರ್ಧ ಗಂಟೆಗೊಂದು ಬೆಲ್ ಮೊಳಗಲಿದೆ. ಗೋಪುರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಗಡಿಯಾರಗಳು ರಾರಾಜಿಸುತ್ತಿವೆ. ಉದ್ಘಾಟನೆಗೆ ಕಾಯುತ್ತಿದೆ.
75 ಅಡಿ ಎತ್ತರ
ನೂತನ ಕ್ಲಾಕ್ ಟವರ್‌ನ ಎತ್ತರ 75 ಅಡಿ. ಅದರ ಮೇಲ್ಭಾಗದಲ್ಲಿ ನಾಲ್ಕೂ ದಿಕ್ಕಿನಲ್ಲೂ ನಾಲ್ಕು ಗಡಿಯಾರಗಳು. ಈ ಹಿಂದೆ ಅದೇ ಜಾಗದಲ್ಲಿದ್ದ ಕ್ಲಾಕ್ ಟವರ್ ಕೇವಲ 45 ಅಡಿ ಎತ್ತರದಲ್ಲಿತ್ತು. ಈಗ ಮತ್ತಷ್ಟುಎತ್ತರದಲ್ಲಿ ಕುಡ್ಲದ ಕ್ಲಾಕ್ ಟವರ್ ಮಿಂಚುತ್ತಿದೆ. ಇನ್ನು ಈ ಕ್ಲಾಕ್ ಟವರ್ ಕೂಡ ಯಾವಾಗ ನಗರೀಕರಣಕ್ಕೆ ಬಲಿಯಾಗುತ್ತದೋ ಗೊತ್ತಿಲ್ಲ!
'ಇಂಡಿಯಾ ಹಿಂದೂ ರಾಷ್ಟ್ರ' ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ