Karnataka election 2023: ತಾಯಿ ನಿಧನರಾದರೂ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆ!

By Kannadaprabha News  |  First Published May 10, 2023, 12:22 AM IST

ಸೋಮವಾರವಷ್ಟೇ ತಾಯಿ ನಿಧನರಾದರೂ ವಿಚಲಿತರಾಗದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿ ಚುನಾವಣಾ ಕರ್ತವ್ಯಕ್ಕೆ ಪೊಲೀಸ್‌ ಪೇದೆಯೊಬ್ಬರು ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ಜರುಗಿದೆ.


ಗದಗ (ಮೇ.10) : ಸೋಮವಾರವಷ್ಟೇ ತಾಯಿ ನಿಧನರಾದರೂ ವಿಚಲಿತರಾಗದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿ ಚುನಾವಣಾ ಕರ್ತವ್ಯಕ್ಕೆ ಪೊಲೀಸ್‌ ಪೇದೆಯೊಬ್ಬರು ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ಜರುಗಿದೆ. ಗದಗ ನಗರದ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ಅಶೋಕ ಅವರ ಕಾರ್ಯಕ್ಕೆ ಸಾರ್ವಜನಿಕರು ಪೊಲೀಸ್‌ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಂಗಳವಾರ ಕಚೇರಿ ಆವರಣದಲ್ಲಿಯೇ ಸನ್ಮಾನಿಸುವ ಮೂಲಕ ಗೌರವಿಸಿದರು.

ಚುನಾವಣೆ ಹಿನ್ನೆಲೆ(Karnataka assembly election 2023)ಯಲ್ಲಿ ಪೊಲೀಸ್‌ ಇಲಾಖೆ(Police depertment)ಯ ಕೆಲಸದ ಒತ್ತಡ, ಜವಾಬ್ದಾರಿ ಅರಿತು ಡ್ಯೂಟಿಗೆ ಹಾಜರಾಗಿದ್ದು, ಪೊಲೀಸ್‌ ಇಲಾಖೆಯಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಮಂಗಳವಾರ ಕಚೇರಿ ಆವರಣದಲ್ಲಿಯೇ ಅಶೋಕ ಅವರನ್ನು ಸನ್ಮಾನಿಸುವ ಮೂಲಕ ಗೌರವಿಸಿದರು. ಬೆಟಗೇರಿ ಸಿಪಿಐ ಸುಬ್ಬಾಪುರಮಠ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Latest Videos

undefined

ಮತಗಟ್ಟೆಗಳಿಗೆ ತೆರಳಿದ‌ ಚುನಾವಣಾ ಸಿಬ್ಬಂದಿ; ಸುಗಮ ಮತದಾನಕ್ಕೆ ಬೆಳಗಾವಿಯಲ್ಲಿ ಸಕಲ ಸಿದ್ಧತೆ

56 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ:

ವಿಧಾನಸಭಾ ಸಾರ್ವತ್ರಿಕ ಚುನಾಣೆಗೆ ಮೇ 10 ರಂದು ನಡೆಯಲಿರುವ ಮತದಾನಕ್ಕಾಗಿ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ 956 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 4589 ಸಿಬ್ಬಂದಿಗಳು ಸೇರಿದಂತೆ ಅಗತ್ಯ ಪೊಲೀಸ್‌ ಬಂದೂ ಬಸ್‌್ತಗೆ 1500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯುಕ್ತಿ ಮಾಡಿರುವ ಜಿಲ್ಲಾಡಳಿತ ನ್ಯಾಯ ಸಮ್ಮತ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಿದೆ.

ಮತದಾನದ ಮುನ್ನಾ ದಿನವಾದ ಮಂಗಳವಾರ ಜಿಲ್ಲೆಯ ತಾಲೂಕು ಕೇಂದ್ರಗಳಿಂದ ಮತಯಂತ್ರಗಳು ಸೇರಿದಂತೆ ಮತದಾನದ ಅಗತ್ಯ ಸಲಕರಣೆಗಳನ್ನು ತೆಗೆದುಕೊಂಡು ನಿಯುಕ್ತಿಗೊಂಡ ಸಿಬ್ಬಂದಿ ಮತಕೇಂದ್ರಗಳತ್ತ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದರು.

ಜಿಲ್ಲೆಯಲ್ಲಿ 867955 ಮತದಾರರು

ಪ್ರಸಕ್ತ ಚುನಾವಣೆಗೆ 20445 ಹೊಸ ಮತದಾರರು ಸೇರಿದಂತೆ ಒಟ್ಟಾರೆ 867955 ಮತದಾರರಿದ್ದು, 434997 ಪುರುಷರು, 432897 ಮಹಿಳೆಯರು ಹಾಗೂ 61 ಇತರೆ ಮತದಾರರಿದ್ದಾರೆ. ಶಿರಹಟ್ಟಿಮೀಸಲು ಕ್ಷೇತ್ರದಲ್ಲಿ 113885 ಪುರುಷ, 112922 ಮಹಿಳಾ ಹಾಗೂ 14 ಇತರೆ ಮತದಾರರು ಸೇರಿದಂತೆ ಒಟ್ಟು 226821. ಗದಗ ಕ್ಷೇತ್ರದಲ್ಲಿ 110331 ಪುರುಷ, 112221 ಮಹಿಳಾ ಹಾಗೂ 17 ಇತರೆ ಸೇರಿ ಒಟ್ಟು 222569 ಮತದಾರರಿದ್ದಾರೆ. ರೋಣ ಕ್ಷೇತ್ರದಲ್ಲಿ 116176 ಪುರುಷ, 115828 ಮಹಿಳಾ, 23 ಇತರೆ ಮತದಾರರು ಸೇರಿ ಒಟ್ಟು 232027 ಮತದಾರರಿದ್ದಾರೆ. ನರಗುಂದ ಕ್ಷೇತ್ರದಲ್ಲಿ 94605 ಪುರುಷ, 91926 ಮಹಿಳಾ, 7 ಇತರೆ ಸೇರಿದಂತೆ ಒಟ್ಟು 186538 ಅರ್ಹ ಮತದಾರರಿದ್ದಾರೆ.

198 ಕ್ರಿಟಿಕಲ್‌ ಮತಗಟ್ಟೆಗಳು

ಶಿರಹಟ್ಟಿವಿಧಾನಸಭಾ ಮತಕ್ಷೇತ್ರದಲ್ಲಿ 249, ಗದಗ 221, ರೋಣ 266 ಹಾಗೂ ನರಗುಂದ 220 ಮತಗಟ್ಟೆಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 956 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 198 ಕ್ರಿಟಿಕಲ್‌ ಮತಗಟ್ಟೆಗಳು ಹಾಗೂ 758 ಮತಗಟ್ಟೆಗಳನ್ನು ನಾನ್‌ ಕ್ರಿಟಿಕಲ್‌ ಮತಗಟ್ಟೆಗಳೆಂದು ಗುರುತಿಸಲಾಗಿರುತ್ತದೆ. ಜಿಲ್ಲೆಯ 956 ಮತಗಟ್ಟೆಗಳ ಪೈಕಿ 603 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ನಡೆಯಲಿದ್ದು, ಆಯೋಗದ ಮಾರ್ಗಸೂಚಿಯನ್ವಯ 100 ಮೈಕ್ರೋ ಆಬ್ಸರ್ವರ್‌ ಹಾಗೂ ವಿಡಿಯೋ ಗ್ರಾಫರ್‌ ಗಳನ್ನು ನಿಯೋಜಿಸಲಾಗುವುದು.

4589 ಸಿಬ್ಬಂದಿಗಳ ನೇಮಕ

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ 956 ಮತಗಟ್ಟೆಗಳಿಗೆ ಶೇ 20 ಕಾಯ್ದಿರಿಸಿದ ಸಿಬ್ಬಂದಿಗಳನ್ನು ಒಳಗೊಂಡಂತೆ 1147 ಮೊದಲನೇ ಮತಗಟ್ಟೆಅಧಿಕಾರಿಗಳು, 2294 ಮತಗಟ್ಟೆಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 4589 ಮತಗಟ್ಟೆಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಮನೆಯಿಂದಲೇ ಮತ ಹಾಕಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ810 ಮತದಾರರು ಹಾಗೂ 175 ವಿಶæೕಷಚೇತನ ಮತದಾರರು ತಮ್ಮ ಹಕ್ಕನ್ನು ಮನೆಯಿಂದಲೇ ಚಲಾಯಿಸಿರುತ್ತಾರೆ. ಅಗತ್ಯ ಸೇವೆಗಳ 12 ಇಲಾಖೆಗಳ 312 ಅಧಿಕಾರಿ ಸಿಬ್ಬಂದಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದು ಮತಗಟ್ಟೆಗೆ ನಿಯೋಜಿತ ಅಧಿಕಾರಿ ಸಿಬ್ಬಂದಿಗಳ ಪೈಕಿ 4004 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ.

Karnataka Assembly Election 2023 summary: ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಮತಗಟ್ಟೆ!

ಬಿಗಿ ಭದ್ರತೆ

ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 959 ಸಿವಿಲ್‌ ಪೊಲೀಸ್‌, 317 ಹೋಂ ಗಾರ್ಡ್‌್ಸ, 4 ಕೆಎಸ್‌ಆರ್‌ಪಿ ತುಕಡಿಗಳು, 4 ಸಿಎಆರ್‌, ಡಿಎಆರ್‌ ತುಕಡಿಗಳು, 12 ಎಸ್‌ಎಪಿ, ಸಿಎಪಿಎಫ್‌ಗಳು, ಹಾಗೂ ಎಸ್‌ಎಸ್‌ಪಿ,ಆರ್‌ಪಿಆರ್‌ ಎರಡು ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮಟ್ಟಗಟ್ಟೆಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಬಿಗಿ ಪೊಲೀಸ್‌ ಬಂದೂ ಬಸ್‌್ತ ಕಲ್ಪಿಸಲಾಗಿದೆ.

click me!