ಕಾರ್ಕಳಕ್ಕೆ ಟೂರಿಸಂ ಸಕ್ರ್ಯೂಟ್ ನಿರ್ಮಾಣ ಮಾಡಲು ಪರಶುರಾಮ ಥಿಂ ಪಾರ್ಕ್ಮು ಕುಟಮಣಿಯಾಗಲಿದೆ. ಪರಶುರಾಮ ಕಂಚಿನ ಪ್ರತಿಮೆ ಈಗಾಗಲೇ ಆಗಮಿಸಿದ್ದು ಮೂರು ನಾಲ್ಕು ದಿನಗಳಲ್ಲಿ ಮೂರ್ತಿ ಜೋಡಣೆ ಕಾರ್ಯ ನಡೆದು ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.ಎಂದು ಸಚಿವ ಸುನಿಲ ಕುಮಾರ ಕಾರ್ಕಳ ಹೇಳಿದರು.
ಕಾರ್ಕಳ (ಜ.19) : ತುಳುನಾಡನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಸಿತಾಣವಾಗಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು. ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಆವರಣದ ಬಳಿ ಥೀಮ್ ಪಾರ್ಕ್ನ ಕಾರ್ಯಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಕಳಕ್ಕೆ ಟೂರಿಸಂ ಸಕ್ರ್ಯೂಟ್(Tourism Secret) ನಿರ್ಮಾಣ ಮಾಡಲು ಪರಶುರಾಮ ಥಿಂ ಪಾರ್ಕ್(Parasurama Theme Park) ಮುಕುಟಮಣಿಯಾಗಲಿದೆ. ಪರಶುರಾಮ ಕಂಚಿನ ಪ್ರತಿಮೆ ಈಗಾಗಲೇ ಆಗಮಿಸಿದ್ದು ಮೂರು ನಾಲ್ಕು ದಿನಗಳಲ್ಲಿ ಮೂರ್ತಿ ಜೋಡಣೆ ಕಾರ್ಯ ನಡೆದು ಉದ್ಘಾಟನೆಗೆ ಸಜ್ಜುಗೊಳ್ಳಲಿದೆ. ಕಳೆದ ಏಳು ವರ್ಷಗಳಿಂದ ಥೀಂ ಪಾರ್ಕ್ ಬಗೆಗಿನ ಮಾಹಿತಿಗಳನ್ನು ಪರಿಶೀಲಿಸಿ ಎಲ್ಲ ರೀತಿಯ ಎಡರು ತೊಡರುಗಳನ್ನು ನಿವಾರಿಸಿಕೊಂಡು ಕಳೆದ ಎರಡು ತಿಂಗಳಲ್ಲಿ 28 ಉಪ ಸಮಿತಿಗಳನ್ನು ರಚಿಸಿ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ ಎಂದರು.
ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ: ತುಳುನಾಡು ಸೃಷ್ಟಿಕರ್ತನಿಗೆ ಗೌರವ
ನಿಟ್ಟೆವಿದ್ಯಾಸಂಸ್ಥೆ ಅಧ್ಯಕ್ಷ ವಿನಯ್ ಹೆಗ್ಡೆ ಮಾತನಾಡಿ ಕಳೆದ ಐವತ್ತು ವರ್ಷಗಳಿಂದ ಕಾರ್ಕಳ ಹಿಂದುಳಿದ ತಾಲೂಕಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಮೂಲಕ ಬದಲಾವಣೆಗೆ ವೇಗ ಸಿಗುತ್ತಿರುವುದು ಸಂತಸವಾಗುತ್ತಿದೆ. ತುಳುನಾಡಿನ ಜನರು ಪರಶುರಾಮನನ್ನು ದೇವರ ಸ್ಥಾನದಲ್ಲಿ ಪೂಜಿಸುತ್ತಿದ್ದಾರೆ ಎಂದರು.
ಧರ್ಮದರ್ಶಿ ಪುಂಡಲೀಕ ಮಾತನಾಡಿ ನಮ್ಮ ದೈವ ದೇವರುಗಳ ಮೂಲಕ ಕಾರ್ಕಳ ಧಾರ್ಮಿಕ ವಾಗಿ ಶ್ರೀಮಂತವಾಗಿದೆ. ಪರಶುರಾಮ ಪಾರ್ಕ್ ನಿರ್ಮಾಣ ಮೂಲಕ ಪ್ರವಾಸೋದ್ಯಮಯ ಹಾಗೂ ಧಾರ್ಮಿಕತೆಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದರು. ವಿಶ್ರಾಂತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಪ್ರಾಸ್ತಾವಿಕ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಕಾರ್ಕಳ ವೆಂಕಟರಮಣ ದೇವಸ್ಥಾನದ ಒಂದನೆ ಮೊಕ್ತೆಸರ ಜಯರಾಮ ಪ್ರಭು, ಅಡಪಾಡಿ ದೇವಾಲಯದ ಧರ್ಮದರ್ಶಿ ಪುಂಡಲೀಕ, ಭಾಸ್ಕರ ಕೋಟ್ಯಾನ್, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ, ಕಾರ್ಕಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್, ಹೆಬ್ರಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಹೆಬ್ರಿ ತಹಸೀಲ್ದಾರ್ ಪುರಂದರ ಕೆ., ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಪಂಚ ಮೇಳದ ಯಕ್ಷಗಾನ ಅಧ್ಯಕ್ಷ ಕಿಶನ್ ಹೆಗ್ಡೆ, ಉದ್ಯಮಿ ಸುಧೀರ್ ಹೆಗ್ಡೆ, ನೀರೆ ಗ್ರಾಪಂ ಅಧ್ಯಕ್ಷೆ ಶಾಲಿನಿ , ಹಿರಿಯ ವೈದ್ಯ ದಿನೇಶ್ಚಂದ್ರ ಹೆಗ್ಡೆ, ಮಾರಿಗುಡಿ ಮೊಕ್ತೆಸರ ಕರುಣಾಕರ್ ಹೆಗ್ಡೆ, ಎರ್ಲಪಾಡಿ ಗ್ರಾ.ಪಂ. ಪ್ರಮಿಳಾ ಪೂಜಾರಿ, ಕೌಡೂರು ಗ್ರಾ.ಪಂ. ಅಧ್ಯಕ್ಷ ಜಗದೀಶ್ ಪೂಜಾರಿ, ಕಾರ್ಕಳ ಎಎಸ್ಪಿ ವಿಜಯಪ್ರಸಾದ್ ಉಪಸ್ಥಿತರಿದ್ದರು.
ಪ್ರಸನ್ನ ಶೆಟ್ಟಿಬೈಲೂರು ವಿರಚಿತ ಪರಶುರಾಮ ಸೃಷ್ಟಿಯ ಹಾಡನ್ನು ಬಿಡುಗಡೆ ಮಾಡಲಾಯಿತು. ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಸ್ವಾಗತಿಸಿದರು. ಹರೀಶ್ ನಾಯಕ್ ನಿರೂಪಿಸಿದರು. ಥೀಮ್ ಪಾರ್ಕ್ ಉಮಿಕಲ್ ಬೆಟ್ಟದ ಮೇಲೆ ಸಚಿವ ಸುನೀಲ್ ಕುಮಾರ್ ಹಾಗೂ ಗಣ್ಯರು ಬಲೂನ್ ಹಾರಿಸುವ ಮೂಲಕ ಆಮಂತ್ರಣಕ್ಕೆ ಚಾಲನೆ ನೀಡಿದರು.
75 ವರ್ಷದ ಬಳಿಕ ಕಾಂಗ್ರೆಸ್ಸಿಗರಿಗೆ ಜ್ಞಾನೋದಯ: ಸಚಿವ ಸುನೀಲ್ ಕುಮಾರ
ಇಂದು ‘ಪರಶುರಾಮ ದೌಡ್’, 27ರಂದು ಉದ್ಘಾಟನೆಗೆ ಸಿಎಂ
ಜ.19ರಂದು ನೇಷನ್ ಫಸ್ವ್ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಿಂದ ಪರಶುರಾಮ ಥೀಮ್ ಪಾರ್ಕ್ ವರೆಗೆ ಐತಿಹಾಸಿಕ ಪರಶುರಾಮ ದೌಡ್ ಓಟ ನಡೆಯಲಿದೆ. ಜ.24ರಂದು ವಸ್ತು ಪ್ರದರ್ಶನ, ಆಹಾರ ಮೇಳ ಹಾಗೂ ಕಾರ್ಕಳ ಕುಕ್ಕುಂದೂರಿನಿಂದ ಬೈಲೂರು ಥಿಂ ಪಾರ್ಕ್ ವರೆಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ. 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಥೀಮ್ ಪಾರ್ಕ್ ಉದ್ಘಾಟನೆಯಾಗಲಿದೆ. ಎರಡು ಸಾವಿರ ಶಂಖವಾದಕರಿಂದ ಶಂಖನಾದ ಮೊಳಗಿಸುವ ಮೂಲಕ ಪುತ್ಥಳಿ ಉದ್ಘಾಟನೆ ನಡೆಯಲಿದೆ. 28ರಂದು ಥೀಮ್ ಪಾರ್ಕ್ನಲ್ಲಿ ಭಜನಾ ಮಂದಿರ ಉದ್ಘಾಟನೆ ನಡೆಯಲಿದೆ. 29ರಂದು ಸಮಾರೋಪ ಸಮಾರಂಭದ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಮಂತ್ರಿಗಳು ,ಅವಿಭಜಿತ ದ.ಕ. ಜಿಲ್ಲಾ ಶಾಸಕರು, ಕಾಂತಾರ ನಿರ್ದೇಶಕ, ನಟ ರಿಷಬ್ ಶೆಟ್ಟಿಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.