Haveri: ವಿಮಾನವನ್ನೇ ನೋಡದ ಹೆತ್ತವ್ವನಿಗೆ ವಿಮಾನದಲ್ಲೇ ಹುಟ್ಟುಹಬ್ಬ ಆಚರಿಸಿದ ಮಗ

By Govindaraj SFirst Published Jan 19, 2023, 11:18 AM IST
Highlights

ಮುಕ್ಕೋಟಿ ದೇವತೆಗಳಿದ್ದರೆ ಏನಂತೆ. ಮನೆ ದೈವಗಳು ಅಂತ ಅನಿಸೋದು ಹೆತ್ತ ತಂದೆ- ತಾಯಿಗಳು ಮಾತ್ರ. ತ್ರಿಮೂರ್ತಿಗಳೇ ತಾಯಿ ಮಡಿಲಲ್ಲಿ ಮಗುವಾದರು. ಹೆತ್ತವರ ಋಣ ತೀರಿಸಲಾದೀತೇ. ಜೀವನ ಪರ್ಯಂತ ಮಕ್ಕಳ ಏಳಿಗೆಗೆ ಶ್ರಮಿಸುವ ನಿಸ್ವಾರ್ಥ ಜೀವಗಳಾದ ತಂದೆ- ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ (ಜ.19): ಮುಕ್ಕೋಟಿ ದೇವತೆಗಳಿದ್ದರೆ ಏನಂತೆ. ಮನೆ ದೈವಗಳು ಅಂತ ಅನಿಸೋದು ಹೆತ್ತ ತಂದೆ- ತಾಯಿಗಳು ಮಾತ್ರ. ತ್ರಿಮೂರ್ತಿಗಳೇ ತಾಯಿ ಮಡಿಲಲ್ಲಿ ಮಗುವಾದರು. ಹೆತ್ತವರ ಋಣ ತೀರಿಸಲಾದೀತೇ. ಜೀವನ ಪರ್ಯಂತ ಮಕ್ಕಳ ಏಳಿಗೆಗೆ ಶ್ರಮಿಸುವ ನಿಸ್ವಾರ್ಥ ಜೀವಗಳಾದ ತಂದೆ- ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಜೀವನ ಪರ್ಯಂತ ತಮಗಾಗೇ ಬದುಕಿದ, ತ್ಯಾಗಮಯಿಗಳಾದ ತಂದೆ ತಾಯಿಗಳಿಗೆ ಇಲ್ಲೊಬ್ಬ ಮಗ ವಿಶಿಷ್ಟವಾಗಿ ಗೌರವ ಕೊಟ್ಟಿದ್ದಾನೆ. ಸಾಮಾನ್ಯವಾಗಿ ಸ್ನೇಹಿತರೊಂದಿಗೆ ಬರ್ತ್‌ಡೇ ಆಚರಣೆ ಮಾಡುವುದು ಕಾಮನ್. ಆದರೆ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ರು ತಮ್ಮ ತಾಯಿಯ 63ನೇ ಜನ್ಮದಿನವನ್ನು ವಿಮಾನದಲ್ಲಿ ಆಚರಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹನುಮಂತಪ್ಪ ಸುಂಕದ ತಮ್ಮ ತಾಯಿ ಪಾರ್ವತವ್ವರ 63ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿಯ ಬರ್ತ್‌ಡೇ ಪ್ರಯುಕ್ತ ಇದೇ ಮೊದಲ ಬಾರಿ ತಂದೆ, ತಾಯಿ ಮತ್ತು ಮಗಳೊಂದಿಗೆ ಕಾನ್ಸ್‌ಟೇಬಲ್ ಹನುಮಂತಪ್ಪ, ವಿಮಾನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿಸಿದ್ದಾರೆ.

ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

ಸದಾ ಕೃಷಿ ಕೆಲಸದಲ್ಲೇ ನಿರತರಾಗಿರುತ್ತಿದ್ದ ತಾಯಿ, ತಂದೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ 2 ಕೆ.ಜಿ ಕೇಕ್‌ ಅನ್ನು ಖರೀದಿಸಿ, ತನ್ನ ತಾಯಿ ಪಾರ್ವತವ್ವ, ತಂದೆ ಲಕ್ಷ್ಮಣ ಮತ್ತು ಮಗಳು ಚಂದನಾಳೊಂದಿಗೆ ವಿಮಾನವನ್ನು ಏರಿದ್ದಾರೆ. ಆ ಬಳಿಕ ಕಾನ್ಸ್‌ಟೇಬಲ್ ಹನುಮಂತಪ್ಪ ವಿಮಾನದಲ್ಲೇ ಕೇಕ್ ಕತ್ತರಿಸಿ ತನ್ನ ತಾಯಿಯ ಹುಟ್ಟುಹಬ್ಬ ಆಚರಿಸುವ ಮೂಲಕ ಸಂಭ್ರಮ ಆಚರಿಸಿದ್ದಾರೆ. ವಿಮಾನ ನೋಡದ ಅಪ್ಪ - ಅವ್ವನಿಗೆ ಫ್ಲೈಟ್‌ನಲ್ಲೇ ಒಂದು ರೌಂಡ್ ಹೊಡೆಸಿ ಆನಂದ ಪಟ್ಟಿದ್ದಾರೆ.

click me!