ಪ್ರಸ್ತಾಪಿತ ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರಿಸಲು ಆಗ್ರಹ

By Suvarna NewsFirst Published Dec 16, 2019, 9:30 AM IST
Highlights

ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮತ್ತು ಕಂಪ್ಲಿಗೆ ಅವಿನಾಭಾವ ಸಂಬಂಧವಿದ್ದು, ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಆಗ್ರಹ| ಆನಂದ್‌ಸಿಂಗ್‌ ಗೆಲವು ಸಾಧಿಸಿದ್ದರಿಂದ ನೂತನ ಜಿಲ್ಲೆಗೆ ಬಲ ಬಂದಿದೆ| ಬಿಜೆಪಿ ಕಾರ್ಯಕರ್ತರು ಈ ಗೊಂದಲದಿಂದ ದೂರವಾಗಬೇಕು| ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಹೋರಾಟದಲ್ಲಿ ಪಾಲ್ಗೊಳ್ಳಬೇಕು|

ಕಂಪ್ಲಿ(ಡಿ.16): ಹಂಪಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಂಪ್ಲಿ ಮೂಲ ಕಾರಣವಾಗಿದ್ದು, ಈ ಕಾರಣಕ್ಕಾಗಿಯಾದರೂ ಪ್ರಸ್ತಾಪಿತ ವಿಜಯನಗರ(ಹೊಸಪೇಟೆ)ಜಿಲ್ಲೆಗೆ ಕಂಪ್ಲಿಯನ್ನು ಸೇರಿಸಬೇಕು ಎಂದು ಹಿರಿಯ ಮುಖಂಡ ಕರೆಕಲ್‌ ಶಂಕ್ರಪ್ಪ ಆಗ್ರಹಿಸಿದ್ದಾರೆ.

ವಿಜಯನಗರ(ಹೊಸಪೇಟೆ)ಜಿಲ್ಲೆ ಪ್ರಾಸ್ತಾವನೆ ಹಿನ್ನೆಲೆಯಲ್ಲಿ ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸುವ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮತ್ತು ಕಂಪ್ಲಿಗೆ ಅವಿನಾಭಾವ ಸಂಬಂಧವಿದ್ದು, ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ತಾಲೂಕಿನ ಸರ್ವರು ಪಕ್ಷಾತೀತವಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿರಿಯ ಮುಖಂಡ ಜಿ. ರಾಮಣ್ಣ ಮಾತನಾಡಿ, ರೆಡ್ಡಿಯವರು ಬಳ್ಳಾರಿ ಜಿಲ್ಲೆ ಹಾಗೆ ಇರಲಿ ಅಂತ ಹೇಳಿದ್ದಾರೆ. ಆದರೆ ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಬಾರದು ಎಂದು ಹೇಳಿಲ್ಲ. ಆನಂದ್‌ಸಿಂಗ್‌ ಗೆಲವು ಸಾಧಿಸಿದ್ದರಿಂದ ನೂತನ ಜಿಲ್ಲೆಗೆ ಬಲ ಬಂದಿದೆ. ಬಿಜೆಪಿ ಕಾರ್ಯಕರ್ತರು ಈ ಗೊಂದಲದಿಂದ ದೂರವಾಗಬೇಕು. ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕರೆಕಲ್‌ ಮನೋಹರ, ಎ.ಸಿ. ದಾನಪ್ಪ, ಸಿ. ವೆಂಕಟೇಶ, ಭಾಸ್ಕರರೆಡ್ಡಿ, ವಿ.ಟಿ. ನಾಗರಾಜ, ವಿ. ವೆಂಕಟರಮಣ, ಬಿ. ನಾಗೇಂದ್ರ, ಎ. ರೇಣುಕಪ್ಪ, ಆರ್‌. ಇಮಾಮ್‌ಸಾಬ್‌, ಬಿ. ಚಂದ್ರಶೇಖರ, ಮೇಘರಾಜಗೌಡ, ಕಾಳಿಂಗವರ್ಧನ ಹಾದಿಮನೆ, ಎಂ. ವೆಂಕಟೇಶ, ಎಲ್‌. ಭಗವಾನ್‌ ಸೇರಿದಂತೆ ಅನೇಕರು ಇದ್ದರು.
 

click me!