ಕಾಂತಾರ ಚಿತ್ರದ ಕಂಬಳ ದೃಶ್ಯದಲ್ಲಿ ಮಿಂಚಿದ್ದ 'ಅಪ್ಪು' ಕೋಣ ಇನ್ನಿಲ್ಲ

Published : Aug 09, 2025, 10:23 AM ISTUpdated : Aug 09, 2025, 10:25 AM IST
Kantara Movie Fame buffalo

ಸಾರಾಂಶ

ಕಾಂತಾರ ಚಿತ್ರದಲ್ಲಿ ನಟಿಸಿದ್ದ 'ಅಪ್ಪು' ಎಂಬ ಕೋಣ ಇತ್ತೀಚೆಗೆ ಮರಣ ಹೊಂದಿದೆ. ಕಂಬಳ ಕಣದಲ್ಲಿ ಚಾಂಪಿಯನ್ ಆಗಿದ್ದ ಈ ಕೋಣ, ಚಿತ್ರದಲ್ಲೂ ಮಿಂಚಿತ್ತು. ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ.

ಉಡುಪಿ (ಆ.9): ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕಂಬಳದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ 'ಅಪ್ಪು' ಸಾವನ್ನಪ್ಪಿದೆ. ಇದರೊಂದಿಗೆ ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ. ಬೈಂದೂರು ತಾಲೂಕಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. 

ಕಾಂತಾರ ಚಿತ್ರದ ಶೂಟಿಂಗ್‌ಗೂ ಮೊದಲಿನಿಂದಲೂ ಈ ಕೋಣಗಳ ಮೂಲಕವೇ ಚಿತ್ರತಂಡಕ್ಕೆ ಕಂಬಳದ ತರಬೇತಿ ನೀಡಲಾಗಿತ್ತು. ಪರಮೇಶ್ವರ ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಅವರು ಅಪ್ಪು ಕೋಣದ ಆರೈಕೆ ಮಾಡುತ್ತಿದ್ದರು.

ಮೃತನಾದ ಅಪ್ಪು ಕೋಣ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ, ಕಂಬಳದ ಕಣದಲ್ಲಿಯೂ ಚಾಂಪಿಯನ್ ಆಗಿ ಗುರುತಿಸಿಕೊಂಡಿತ್ತು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿತ್ತು. ಕುಂದಾಪುರ ಭಾಗದಲ್ಲಿ ನಡೆದ ಕಂಬಳಗಳಲ್ಲಿ ಸತತ ಐದು ವರ್ಷಗಳ ಕಾಲ ಚಾಂಪಿಯನ್ ಆಗಿದ್ದ ಅಪ್ಪು, ಬೆಂಗಳೂರಿನಲ್ಲಿ ನಡೆದ ಕಂಬಳದ ಕನೆಹಲಗೆ ವಿಭಾಗದಲ್ಲೂ ಪ್ರಥಮ ಪ್ರಶಸ್ತಿ ಪಡೆದಿತ್ತು. ಕರಾವಳಿಯ ಹಲವು ಕಂಬಳಗಳಲ್ಲಿ ಈ ಕೋಣ ಕೀರ್ತಿ ಬಹುಮಾನ ಸಂಪಾದಿಸಿತ್ತು. ಅಪ್ಪು ಕೋಣದ ನಿಧನದಿಂದಾಗಿ ಕಂಬಳ ಜಗತ್ತು ಒಬ್ಬ ಚಾಂಪಿಯನ್‌ ಅನ್ನು ಕಳೆದುಕೊಂಡಂತಾಗಿದೆ.

 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು