ಆರೋಪಕ್ಕೆಲ್ಲ ಉತ್ತರ; ಕನ್ನಡ ಫಲಕ ಇರದ ಮಳಿಗೆಗೆ ಬೆಂಗಳೂರಲ್ಲಿ ಸ್ಥಾನವಿಲ್ಲ

By Web DeskFirst Published Oct 9, 2019, 5:41 PM IST
Highlights

ಕನ್ನಡಿಗರಲ್ಲ ಎಂಬ ಆರೋಪಕ್ಕೆ ಮೇಯರ್ ಖಡಕ್ ಉತ್ತರ/ ಕನ್ನಡ ಫಲಕವಿಲ್ಲದ ಮಳಿಗೆಗಳಿಗೆ ಬೆಂಗಳೂರಲ್ಲಿ ಸ್ಥಾನವಿಲ್ಲ/ ನವೆಂಬರ್ 1 ರಿಂದ ಹೊಸ ನಿಯಮ?

ಬೆಂಗಳೂರು[ಅ. 09]  ನವೆಂಬರ್ ಒಂದರಿಂದ ಕನ್ನಡದ ನಾಮಫಲಕ ಕಡ್ಡಾಯ.. ಹೌದು ಬೆಂಗಳೂರಿನಲ್ಲಿ ಮಳಿಗೆಗಳೆಲ್ಲ ಕನ್ನಡದ ನಾಮಫಲಕ ಹೊಂದಿರಲೇಬೇಕು.  ಹೌದು ಇಂಥದ್ದೊಂದು ಆದೇಶಕ್ಕೆ ಬೆಂಗಳೂರು ಮೇಯರ್ ಚಿಂತನೆ ನಡೆಸಿದ್ದಾರೆ.

ನೂತನ ಮೇಯರ್ ಗೌತಮ್ ಕುಮಾರ್ ಆದೇಶ ನೀಡಿದ್ದು ಕನ್ನಡಿಗರಲ್ಲ ಎಂಬ ಆರೋಪಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಹೊಸ ಮಳಿಗೆ ಟ್ರೇಡ್ ಲೈಸೆನ್ಸ್ ಅಪ್ಲೈ ಮಾಡಲು ಕನ್ನಡದಲ್ಲೇ ಅರ್ಜಿ ತುಂಬಬೇಕು. ಕನ್ನಡದಲ್ಲಿ ನಾಮಫಲಕ ಹಾಕದಿದ್ರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಖಡಕ್ ಆಗಿ ತಿಳಿಸಲಾಗಿದೆ.

ಆಯುಕ್ತರ ಜೊತೆ ಚರ್ಚೆ ಮಾಡಿ ಮೇಯರ್ ಈ ಆದೇಶ ಹೊರಡಿಸಲಿದ್ದಾರೆ. ಅಧಿಕಾರ ಸ್ವೀಕಾರದ ವೇಳೆ ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಗೌತಮ್ ಹೇಳಿದ್ದರು.

ಜೈನ ಸಮುದಾಯಕ್ಕೆ ಸೇರಿದ ಗೌತಮ್ ಅವರನ್ನು ಮೇಯರ್ ಆಗಿ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು. ಕನ್ನಡೇತರ ವ್ಯಕ್ತಿಯನ್ನು ಮೇಯರ್ ಮಾಡಲಾಗಿದ್ದು ಬಿಜೆಪಿ ಹಿಂದಿ ಹೇರಿಕೆಯನ್ನು ಬೆಂಗಳೂರಿನ ಮೇಲೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಮೊದಲ ಕಾರ್ಯಕ್ರಮಕ್ಕೆ ಗೈರಾದ ಮೇಯರ್

ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಂತೆ ತೀವ್ರ ಕುತೂಹಲ ಮೂಡಿಸಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಅಂತಿಮವಾಗಿ ಗೌತಮ್ ಕುಮಾರ್  ಮೇಯರ್ ಆಗಿ ಹೊರಹೊಮ್ಮಿದ್ದರು. ನಾಲ್ಕು ವರ್ಷಗಳ ನಂತರ ಹೆಚ್ಚಿನ ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರ ಗದ್ದುಗೆ ಏರಿತ್ತು. ಬಿಜೆಪಿ ನಾಯಕರಲ್ಲಿಯೇ ಮೇಯರ್ ಆಯ್ಕೆ ವೇಳೆ ಭಿನ್ನಮತದ ಮಾತುಗಳು ಕೇಳಿಬಂದಿದ್ದವು.

ಜೈನ ಸಮುದಾಯದ ಗೌತಮ್‌ ಕುಮಾರ್‌ಗೆ ಮೇಯರ್  53ನೇ ಮೇಯರ್ ಆಗಿ ಆಯ್ಕೆಯಾಗಿದ್ದರು. ಅಳೆದು-ತೂಗಿ ಗೌತಮ್ ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು.

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!