ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಬೆಳಕು: ಎಚ್.ಆರ್.ಶ್ರೀನಾಥ ಪ್ರಶಂಸೆ

Published : Jun 01, 2026, 06:06 PM IST
Hirebenakal

ಸಾರಾಂಶ

ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು.

ಗಂಗಾವತಿ (ಜೂ.01): ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು. ನಗರದ ಕೊಟ್ಟೂರು ಬಸವೇಶ್ವರ ದೇವಸ್ಥನ ವೇದಿಕೆಯಲ್ಲಿ ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗು ಪರಿಸರ ಸೇವಾ ಟ್ರಸ್ಟ್ ಏರ್ಪಿಡಿಸಿದ್ದ “ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 40 ದಶಕಗಳ ಹಿಂದೆ ಹಿರೇಬೆಣಕಲ್ ಬೆಟ್ಟದಲ್ಲಿರುವ ಮೋರೆರ್ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಕೇಳಿದ್ದಲ್ಲದೆ ಆ ಸ್ಥಳವನ್ನು ವೀಕ್ಷಿಸಲಾಗಿತ್ತು. ಈಗ ಸರಕಾರ ಈ ಪ್ರದೇಶವನ್ನು ಅಭಿವೃದ್ದಿ ಪಡಿಸುವದಕ್ಕೆ ಮುಂದೆ ಬರಬೇಕೆಂದರು. ಇತ್ತೀಚಿಗೆ ಸರಕಾರ ಮೋರೆರ್ ಬೆಟ್ಟದ ಬಳಿ ಅಣು ಸ್ಥಾವರ ಸ್ಥಾಪನೆಗೆ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ್ದರಿಂದ ಸ್ಥಾಪನೆ ರದ್ದಾಗಿತು ಎಂದರು. ಕೂಡಲೆ ಸರಕಾರ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿಗೆ ಅನುದಾನ ನೀಡಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋದಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮೋರೆರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಇದ್ದು, ಇತ್ತ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ವಾಹಿನಿಯು 7 ಅಧ್ಬುತಗಳ ಪರಿಚಯದ ಸಂದರ್ಭದಲ್ಲಿ ಹಿರೇಬೆಣಕಲ್‌ಗೆ ಪ್ರಥಮ ಸ್ಥಾನ ನೀಡಿ ಬೆಳಕು ಚೆಲ್ಲಿದರು ಎಂದು ಶ್ಲಾಘಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಹಿರೇಬೆಣಕಲ್ ಇತಿಹಾಸ ಪ್ರಸಿದ್ಧವಾಗಿದ್ದು, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು. ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನದ ಮಂಜುನಾಥ ಗುಡ್ಲಾನೂರ ಅವರು ಮೋರೆರ್ ಶಿಲಾ ಸಮಾದಿಗಳು ಮತ್ತು ಅಭಿವೃದ್ದಿಯ ಕುರಿತು ವಿವರಿಸಿದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾನಿದ್ಯವನ್ನು ತಲೇಖಾನ್ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಎಚ್.ಎಸ್.ಮುರುಳಿಧರ, ಲಲಿತರಾಣಿ ಶ್ರೀರಂಗದೇವರಾಯಲು, ಡಾ. ಸೋಮರಾಜು, ಡಾ. ಚಂದ್ರಪ್ಪ, ಹಾಸ್ಯ ಕಲಾವಿದರಾದ ಬಿ.ಪ್ರಾಣೇಶ, ನರಸಿಂಹ ಜೋಷಿ, ಕನ್ನಡಪ್ರಭ ವರರದಿಗಾರ ರಾಮಮೂರ್ತಿ ನವಲಿ, ಟಿ.ಆಂಜನೇಯ, ಡಾ.ಸುಲೋಚನ ಚಿನಿವಾಲರ್, ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ಗುಡ್ಲಾನೂರ, ಡಾ.ಬದರಿಪ್ರಸಾದ್, ಶಿಕ್ಷಕ ಶರಣಪ್ಪ ಹಕ್ಕಂಡಿ, ವಿರೂಪಾಕ್ಷಪ್ಪ ಶಿರವಾರ್, ಮಾರುತಿ ಐಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕೊಪ್ಪಳ ತಳಕಲ್‌ನಲ್ಲಿ 13ನೇ ಶತಮಾನದ ಅಪರೂಪದ ಶಾಸನ ಪತ್ತೆ: ಇತಿಹಾಸದ ಪುಟಗಳಲ್ಲಿದ್ದ ಅಗ್ರಹಾರದ ರಹಸ್ಯ ಬಯಲು!
ಬೆಂಗಳೂರು-ಫುಕೆಟ್ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಸೇವೆ, ಸ್ವರ್ಗವೆಂಬ ದ್ವೀಪಕ್ಕೆ ಹೊಸ ಸೇತುವೆ!