Kannada Prabha ರಜತ ಮಹೋತ್ಸವ: ಚಾಮರಾಜನಗರಕ್ಕೂ ಕನ್ನಡ ಪ್ರಭಕ್ಕೂ ಅವಿನಾಭಾವ ನಂಟು

By Sathish Kumar KH  |  First Published Jan 7, 2023, 11:18 PM IST

 ಕನ್ನಡ ಪ್ರಭದಿಂದ ರಜತ ಮಹೋತ್ಸವ ಅಂಗವಾಗಿ ಚಾಮರಾಜನಗರ  25 ವಿಶೇಷ ಸಂಚಿಕೆ ಬಿಡುಗಡೆ. 
ಕನ್ನಡ ಪ್ರಭ ಪತ್ರಿಕೆ ಕೊಂಡಾಡಿದ ಸಚಿವ ವಿ.ಸೋಮಣ್ಣ.
ಚಾಮರಾಜನಗರಕ್ಕೂ ಕನ್ನಡ ಪ್ರಭ ಪತ್ರಿಕೆಗೂ ಇದೇ ಅವಿನಾಭಾವ ಸಂಬಂಧ..


ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್
ಚಾಮರಾಜನಗರ (ಜ.07):  ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ  ಕನ್ನಡಪ್ರಭ ಪತ್ರಿಕೆಯೂ ರಜತ ಮಹೋತ್ಸವದ ಅಂಗವಾಗಿ ಹೊರತಂದ ಚಾಮರಾಜನಗರ-25 ವಿಶೇಷ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಸತಿ ಸಚಿವ ವಿ.ಸೋಮಣ್ಣ ಬಿಡುಗಡೆ ಮಾಡಿದರು.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಚಾಮರಾಜನಗರ  ಜಿಲ್ಲೆಯ ರಜತ ಮಹೋತ್ಸವ ಹಿನ್ನಲೆ, ನಿಮ್ಮೆಲ್ಲರ ನೆಚ್ಚಿನ ಪತ್ರಿಕೆ ಕನ್ನಡ ಪ್ರಭದಿಂದ ವಿಶೇಷ ಸಂಚಿಕೆ ಹೊರತರಲಾಗಿದೆ.  ನಗರದ ಪೊಲೀಸ್ ಕವಾಯತು ಮೈದಾನದಲ್ಲಿ  ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿಶೇಷ  ಸಂಚಿಕೆ  ಬಿಡುಗಡೆಗೊಳಿಸಿದರು. ಸಂಚಿಕೆಯ ವಿನ್ಯಾಸ,  ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಸಚಿವರಿಗೆ ಸಂಪಾದಕ ಸಮನ್ವಯ ವಿಶೇಷ  ಯೋಜನೆ ಸಂಪಾಕರು, ಪ್ರಕಾಶಕರಾದ  ಬಿ.ವಿ. ಮಲ್ಲಿಕಾರ್ಜುನಯ್ಯ, ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್, ಜಾಹೀರಾತು ಹಿರಿಯ ವ್ಯವಸ್ಥಾಪಕ ಕೃಷ್ಣಪ್ರಸಾದ್,  ಶಾಸಕರುಗಳಾದ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಹಾಗೂ ಸಿ.ಎಸ್.ನಿರಂಜನಕುಮಾರ್ ಸಾಥ್ ನೀಡಿದರು.

Tap to resize

Latest Videos

undefined

Kannada Prabha: ಕನ್ನಡಪ್ರಭ ಬೆಳಗಾವಿ ಆವೃತ್ತಿಗೆ ಬೆಳ್ಳಿಹಬ್ಬ ಸಂಭ್ರಮ

ನಾಡಿನ ಪ್ರಭಾವಶಾಲಿ ಪತ್ರಿಕೆ: ರವಿ ಹೆಗಡೆ ಸಂಪಾದಕತ್ವದಲ್ಲಿ  ಕನ್ನಡಪ್ರಭ  ಪತ್ರಿಕೆ ಇಂದು ನಾಡಿನ ಪ್ರಭಾವಶಾಲಿ ಪತ್ರಿಕೆಯಾಗಿದೆ, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೇ  ಕನ್ನಡಪ್ರಭ ಪತ್ರಿಕೆ ಖಾಯಂ ಓದುಗನಾಗಿದ್ದೇನೆ.  ಖಾದ್ರಿ ಶಾಮಣ್ಣನವರ ಬದ್ಧತೆ ಇಂದೂ ಕೂಡ ಪತ್ರಿಕೆಯಲ್ಲಿ ಉಳಿದು ಜನರ ನಿತ್ಯದ ಒಡನಾಡಿಯಾಗಿದೆ ಎಂದು ಸಚಿವ ಸೋಮಣ್ಣ ಕನ್ನಡ ಪ್ರಭ ಪತ್ರಿಕೆಯ ಕಾರ್ಯವೈಖರಿಯನ್ನು ಕೊಂಡಾಡಿದರು. ನನ್ನ ಮನೆಗೆ ಎಲ್ಲಾ ಪತ್ರಿಕೆಗಳು ಬರುತ್ತದೆ. ನಾನು ಮೊದಲು ಕೈಗೆತ್ತಿಕೊಳ್ಳುವುದೇ ಕನ್ನಡಪ್ರಭ. ನಿಜ ಸಂಗತಿಯನ್ನು ಯಾವುದೇ ಮುಲಾಜಿಗೆ ಒಳಗಾಗದೇ ಜನ ಸಾಮಾನ್ಯರಿಗೆ ತಿಳಿಸುತ್ತಿದ್ದು ಪತ್ರಿಕೆ ಮತ್ತಷ್ಟು ಎತ್ತರಕ್ಕೆ ಪಸರಿಸಲಿ, ಇಂದು ಹೊರತಂದಿರುವ ಸಂಚಿಕೆ ಸಂಗ್ರಹಯೋಗ್ಯವಾಗಿದ್ದು ಮುಂದಿನ ಪೀಳಿಗೆಗೆ ಈ ಸಂಚಿಕೆಯನ್ಜು ಎತ್ತಿಡಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚು ಪ್ರವರ್ಧಮಾನಕ್ಕೆ ಕನ್ನಡ ಪ್ರಭ: ಕನ್ನಡಪ್ರಭ ಪತ್ರಿಕೆಗೆ ಸಂಪಾದಕರಾಗಿ ರವಿ ಹೆಗಡೆ ಬಂದ ನಂತರ ಪತ್ರಿಕೆ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ರವಿ ಹೆಗಡೆ ಅವರಿಂದ ಎಲ್ಲಾ ವರ್ಗದ ಓದುಗರು ಮೆಚ್ಚುವಂತ, ಒಪ್ಪಿಕೊಳ್ಳುವಂತಹ ಪತ್ರಿಕೆಯಾಗಿ ರೂಪುಗೊಂಡಿದೆ. ವಿಶೇಷ ಸಂಚಿಕೆ ರೂಪುಗೊಳ್ಳಲು ಸಾಕಷ್ಟು ಮಾರ್ಗದರ್ಶನ ಕೊಟ್ಡಿದ್ದು ಸಂಪಾದಕರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಸಂಪಾದಕ ಸಮನ್ವಯ ವಿಶೇಷ ಯೋಜನೆ ಸಂಪಾಕರು,  ಪ್ರಕಾಶಕರಾದ ಬಿ.ವಿ.  ಮಲ್ಲಿಕಾರ್ಜುನಯ್ಯ ವಿಶೇಷ ಸಂಚಿಕೆ ಬಿಡುಗಡೆಯಲ್ಲಿ ಹೇಳಿದರು. 

ಹಾವೇರಿ ಜಿಲ್ಲೆಗೆ ರಜತ ಮಹೋತ್ಸವ: ಸಂಭ್ರಮಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್- ಕನ್ನಡಪ್ರಭ ವೇದಿಕೆ

ಚಾಮರಾಜನಗರದ ಬೆಳ್ಳಿಹಬ್ಬದ ಸಂದರ್ಭ: ಜಿಲ್ಲೆಯ ಸಮಗ್ರ ಚಿತ್ರಣ ಕೊಡುವ ರಾಜಕೀಯ, ಸಾಂಸ್ಕೃತಿಕ ಸಚಿತ್ರ ಮಾಹಿತಿ ಕೊಡುವ 44 ಪುಟಗಳ ವಿಶೇಷ ಸಂಚಿಕೆಯನ್ನು ಚಾಮರಾಜನಗರದ ಬೆಳ್ಳಿಹಬ್ಬದ ಸಂದರ್ಭದಲ್ಲಿ ವಸತಿ ಸಚಿವ ಸೋಮಣ್ಣ ಲೋಕಾರ್ಪಣೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಆರಂಭದಿಂದಲೂ ಕನ್ನಡಪ್ರಭ ಪತ್ರಿಕೆ ಒತ್ತಾಸೆಯಾಗಿ ನಿಂತಿದೆ. 44 ಪುಟಗಳಷ್ಟು ವಿಶೇಷ ಸಂಚಿಕೆ ರೂಪುಗೊಳ್ಳಲು ಜಿಲ್ಲೆಯ ವರದಿಗಾರರು ಬಹಳಷ್ಟು ಶ್ರಮ ಹಾಕಿದ್ದಾರೆ, ಅವರ ಶ್ರಮದ ಫಲವಾಗಿ ಸುಂದರ, ಸಂಗ್ರಹಯೋಗ್ಯ ಸಂಚಿಕೆ ಓದುಗರ ಕೈಯಲ್ಲಿದೆ ಎಂದು ಮಲ್ಲಿಕಾರ್ಜುನಯ್ಯ ಹರ್ಷ ವ್ಯಕ್ತಪಡಿಸಿದರು.

ಒಟ್ಟಾರೆ ಚಾಮರಾಜನಗರ ರಜತ ಮಹೋತ್ಸವ ಸಂಭ್ರಮ ಆಚರಿಸಿಕೊಳ್ತಿದೆ.ಈ ವೇಳೆ ಸಂಭ್ರಮಕ್ಕೆ ಇಂಬು ಕೊಡುವಂತೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ್ದು,ಕನ್ನಡ ಪ್ರಭ ಕಾರ್ಯಕ್ಕೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

click me!