ಉತ್ತರ ಕರ್ನಾಟಕ ಹೆಸರಲ್ಲಿ ಎಲ್ಲವನ್ನು ಹುಬ್ಬಳ್ಳಿ- ಧಾರವಾಡಕ್ಕೆ ಹೊತ್ತೊಯ್ಯಲಾಗುತ್ತಿದ್ದರೂ ಇಲ್ಲಿರುವ ಕಲ್ಯಾಣ ನಾಡಿನ 5 ಬಿಜೆಪಿ ಎಂಪಿಗಳು 30 ಕ್ಕೂ ಹೆಚ್ಚು ಬಿಜೆಪಿ ಶಾಸಕುರ ಏನು ಮಾಡುತ್ತಿದ್ದಾರೆ? ಬಾಯಿ ಮುಚ್ಚಿಕೊಂಡು ಕುಳಿತಿರೋದು ಬಿಟ್ಟರೆ ಏನೂ ಮಾಡುತ್ತಿಲ್ಲ ಎಂದು ದೂರಿದ ಜಗದೇವ ಗುತ್ತೇದಾರ್
ಕಲಬುರಗಿ(ಫೆ.11): ಕಲಬುರಗಿಗೆ ಬರಬೇಕಾಗಿದ್ದ ಏಮ್ಸ್ ಹುಬ್ಬಳ್ಳಿಗೆ ಹೋಯ್ತು, ಕಲಬುರಗಿಯಲ್ಲಿರೋ ಕೇಂದ್ರೀಯ ವಿವಿಯಲ್ಲೇ ಆರಂಭವಾಗಬೇಕಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಓಇ) ಬೆಂಗಳೂರು ಪಾಲಾಯ್ತು, ಮಂಜೂರಾಗಿ 8 ವರ್ಷವಾದರೂ ಕಲಬುರಗಿಗೆ ರೇಲ್ವೆ ಡಿವಿಜನ್ ಕಚೇರಿ ಬರಲಿಲ್ಲ, ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕಲ್ಯಾಣದವರ ಕೈಗೆ ಮಾತ್ರ ದೊಡ್ಡದಾದ ಚೊಂಬು ಸಿಗುತ್ತಿದೆ ಎಂದು ಇತ್ತೀಚೆಗೆ ಕಲಬುರಗಿ, ಕಲ್ಯಾಣದ ಕೈಜಾರಿರುವ ಹಲವು ಮಹತ್ವದ ಯೋಜನೆಗಳ ವಿಚಾರದಲ್ಲಿ ಕೇಂದ್ರ- ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಹೊಣೆಗೇಡಿತನವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಆಕ್ರೋಶ ಹೊರಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಡಾ.ಶರಣಪ್ರಕಾಶ ಕಲಬುರಗಿ ಜಿಲ್ಲಾ ಸಚಿವರಾಗಿದ್ದಾಗ ಇಎಸ್‌ಐಸಿಯನ್ನೇ ಏಮ್ಸ್ ದರ್ಜೆಗೆ ಮೇಲೇರಿಸುವಂತೆಹ ಪ್ರಸ್ತಾವನೆ ಕೇಂದ್ರಕ್ಕೆ ರವಾನೆಯಾಗಿತ್ತು. ಈಗ ನೋಡಿದರೆ ಯೋಜನೆ ಹುಬ್ಬಳ್ಳಿ- ದಾರವಾಡಕ್ಕೆ ಎತ್ತಂಗಡಿ ಮಾಡಲಾಗಿದೆ.
ಉ.ಕ. ಹೆಸರಲ್ಲಿ ಎಲ್ಲವನ್ನು ಹುಬ್ಬಳ್ಳಿ- ಧಾರವಾಡಕ್ಕೆ ಹೊತ್ತೊಯ್ಯಲಾಗುತ್ತಿದ್ದರೂ ಇಲ್ಲಿರುವ ಕಲ್ಯಾಣ ನಾಡಿನ 5 ಬಿಜೆಪಿ ಎಂಪಿಗಳು 30 ಕ್ಕೂ ಹೆಚ್ಚು ಬಿಜೆಪಿ ಶಾಸಕುರ ಏನು ಮಾಡುತ್ತಿದ್ದಾರೆ? ಬಾಯಿ ಮುಚ್ಚಿಕೊಂಡು ಕುಳಿತಿರೋದು ಬಿಟ್ಟರೆ ಏನೂ ಮಾಡುತ್ತಿಲ್ಲ ಎಂದು ದೂರಿದ್ದಾರೆ.
'ಮೋದಿ ವಿರುದ್ಧ ಮಾತನಾಡಿದರೆ ಕೊಲೆ ಬೆದರಿಕೆಗಳು ಬರುತ್ತಿವೆ'
ಕಲಬುರಗಿಯಲ್ಲಿ ಕೇಂದ್ರೀಯ ವಿವಿ ಮುಖ್ಯ ಕ್ಯಾಂಪಸ್ ಇದ್ದರೂ ಸೆಂಟರ್ ಆಪ್ ಎಕ್ಸಲನ್ಸ್ ಬೆಂಗಳೂರಲ್ಲಿ ಮಾಡಲು ಹೊರಟಿದ್ದಾರೆ. ಇದು ನ್ಯಾಯಸಮ್ಮತವೆ? ಬಿಡೆಪಿ ಸರಕಾರಕ್ಕೆ ಇದು ಹೇಗೆ ತಿಲಿಯಲಿಲ್ಲವೋ? ಕಲ್ಯಾಣದ ಯೋಜನೆಗಳನ್ನು ಹೀಗೆ ಯಾಮಾರಿಸಿ ಬೆಂಗಲೂರಿಗೆ, ಹುಬ್ಬಳ್ಳಿಗೆ ಕೊಂಡೊಯ್ಯುವುದೇ ಇವರ ಕೆಲಸವಾಗಿದೆ. ಕಾಂಗ್ರೆಸ್ ಪ7ದ ಸರಕಾರವಿದ್ದಾಗ ಹಲವು ಯೋಜನೆಗಳು ಮಂಜೂರಾದರೂ ಇದೀಗ ಅವು ಒಂದೊಂದಾಗಿ ಎತ್ತಂಗಡಿಯಾಗುತ್ತಿವೆ. ಇದಕ್ಕೆ ಬಿಡಜೆಪಿಯವರು ಮೌನವಾಗಿದ್ದು ಸಮ್ಮತಿಸುತ್ತಿದ್ದಾರೆಂದು ಗುತ್ತೇದಾರ್ ಕುಟುಕಿದ್ದಾರೆ.
ಕೇಂದ್ರಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆಯವರು ಸಚಿವರಾಗಿದ್ದಾಗ ಕೇಂದ್ರೀಯ ವಿವಿ ಕಲಬುರಗಿಗೆ ಬಂತು, ಡಾ. ಶರಣಪ್ರಕಾಶ ಪಾಟೀಲರು ಜಿಲ್ಲಾ ಸಚಿವರಾಗಿದ್ದಾಗ ಕಲಬುರಗಿಯಲ್ಲೇ ಏಮ್ಸ್ ಬೇಕೆಂಬ ಪಸ್ತಾವನೆ ಕೇಂದ್ರಕ್ಕೆ ಹೋಯ್ತು. ಇದೀಗ ಅವೆಲ್ಲವೂ ಕೈ ಬಿಟ್ಟು ಹೋಗುತ್ತಿವೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಬಿಜೆಪಿ ಸಂಸದರು, ಶಾಸಕರು ಹೇಳಿಕೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆಂದು ಕುಟುಕಿದ್ದಾರೆ.
ಕಲಬುರಗಿಯನ್ನು ಪಾರ್ಲಿಮೆಂಟ್‌ನಲ್ಲಿ ಪ್ರತಿನಿಧಿಸುತ್ತಿರುವ ಡಾ. ಉಮೇಶ ಜಾಧವ್ ತಾವು ಗೆದ್ದುಬಂದಾಗಿನಿಂದ ಕೇಂದ್ರ, ರಾಜ್ಯಗಳ ಸಚಿವವರು, ಅಧಿಕಾರಿಗಳ ಬಳಿ ಹೋಗಿ ಮನವಿ ಕೊಡೋದು, ಹೇಳಿಕೆ ಕೊಡೋದನ್ನೇ ಮಾಡುತ್ತಿದ್ದಾರೆ. ರಾಜಕೀಯ ಇಚ್ಚಾಶಕ್ತಿ ತೋರಿಸುತ್ತ ಮಂಜೂರಾದ ಯೋಜನೆ ಕೈಗೂಡುವಮಂತೆ, ಹೊಸ ಯೋಜನೆ ಮಂಜೂರಿ ಮಾಡಿ ತರುವ ಯತ್ನ ಮಾಡುತ್ತಿಲ್ಲ. ಹೀಗಾಗಿ ಇವರನ್ನು ‘ಮೆಂಬರ್ ಆಫ್ ಪಾರ್ಲಿಮೆಂಟ್’ ಅನ್ನೋದಕ್ಕಿಂತ ‘ಮನವಿ ಪತ್ರ’ದ ಎಂಪಿ ಎಂದರೇನೆ ಲೇಸೆಂದು ಜಗದೇವ ಗುತ್ತೇದಾರ್ ಲೇವಡಿ ಮಾಡಿದ್ದಾರೆ.