ಬೈಎಲೆಕ್ಷನ್ ಎಫೆಕ್ಟ್: ಮೈಸೂರು ದಸರಾ ಮೇಲೆ ನೀತಿ ಸಂಹಿತೆ ಕರಿ ನೆರಳು

By Web DeskFirst Published Sep 25, 2019, 1:47 PM IST
Highlights

ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ| ಮೈಸೂರು ದಸರಾ ಮೇಲೆ ಮತ್ತೆ ನೀತಿ ಸಂಹಿತೆ ಕರಿ ನೆರಳು| ಹೆಚ್. ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ| ಜಿಲ್ಲೆಯಾದ್ಯಂತ ನೀತಿ ಸಂಹಿತೆ ಮುಂದುವರೆಸುವಂತೆ ಚುನಾವಣೆ ಅಧಿಕಾರಿಗಳ ಸೂಚನೆ| ಉಪ ಸಮಿತಿಗಳ ಸಭೆ ಮುಂದೂಡಿದ ಜಿಲ್ಲಾಧಿಕಾರಿ|

ಮೈಸೂರು:(ಸೆ.25) ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮೇಲೆ ಮತ್ತೆ ನೀತಿ ಸಂಹಿತೆ ಕರಿ ನೆರಳು ಆವರಿಸಿದೆ. ಹೌದು, ಜೆಡಿಎಸ್ ಶಾಸಕರಾಗಿದ್ದ ಹೆಚ್. ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.


ಜಿಲ್ಲೆಯ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಮುಂದುವರೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 


ಉಪ ಸಮಿತಿಗಳ ಸಭೆ ಮುಂದೂಡಿದ ಜಿಲ್ಲಾಧಿಕಾರಿ


ರಾಜ್ಯ ಚುನಾವಣಾ ಅಧಿಕಾರಿಗಳು ಜಿಲ್ಲಾಧಿಕಾರಿ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಗೊಂದಲ ಮೂಡಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ಸೂಚನೆಯಿಂದ ದಸರಾಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಹಲವು ಉಪ ಸಮಿತಿಗಳ ಸಭೆಗಳನ್ನು ಜಿಲ್ಲಾಧಿಕಾರಿ ಮುಂದೂಡಿದ್ದಾರೆ. ನೀತಿ ಸಂಹಿತೆ ಬಗ್ಗೆ ಸ್ಪಷ್ಟತೆ ಬರುವವರೆಗೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಮುಂದುವರೆಸುವಂತೆ ಡಿಸಿ ಸೂಚನೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಈ ಸಂಬಂಧ ಇಂದು ಸಂಜೆ ವೇಳೆಗೆ ಕೇಂದ್ರ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಸಿಗುವ ಸಾಧ್ಯತೆ. 


ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಬೆಂಗಳೂರಿನ ಆರ್. ಆರ್. ನಗರ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆಯ ಉಪಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇನ್ನೂ ಘೋಷಣೆ ಮಾಡಿಲ್ಲ. 

click me!