ಮಹಿಷಾ ದಸರಾ ರದ್ದು: ಮೋದಿ, ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಭಗವಾನ್

By Web Desk  |  First Published Sep 28, 2019, 4:05 PM IST

ಮಹಿಷಾಸುರ ದಸರಾ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೋ.ಕೆ.ಎಸ್.ಭಗವಾನ್ ಕಿಡಿಕಾರಿದ್ದಾರೆ. ಮಹಿಷ ದಸರೆಯ ಚಪ್ಪರ ಕಿತ್ತವರು ಗುಲಾಮರು ಅಂತೆಲ್ಲ ವಾಗ್ದಾಳಿ ನಡೆಸಿದ್ದಾರೆ.


ಮೈಸೂರು, (ಸೆ.28): ಮಹಿಷಾಸುರನನ್ನ ಸುಮ್ಮನೆ ರಾಕ್ಷಸ ಅಂತ ಬಿಂಬಿಸಿದ್ದಾರೆ. ಆತ ರಾಕ್ಷಸನಾಗಿದ್ದರೆ ಆತನ ಹೆಸರನ್ನ ಒಂದು ರಾಜ್ಯಕ್ಕೆ ಇಡುತ್ತಿದ್ದರಾ.? ಜನರಿಗೆ ಇಡುತ್ತಿದ್ದರಾ.? ಎಂದು ಸಾಹಿತಿ ಪ್ರೋ.ಕೆ.ಎಸ್.ಭಗವಾನ್ ಪ್ರಶ್ನಿಸಿದ್ದಾರೆ.

ಇಂದು (ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಗವಾನ್, ನಿನ್ನೆ (ಶುಕ್ರವಾರ) ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ನಾನು ಬುದ್ದನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿದ್ದಾರೆ. ಬುದ್ದಬೇಕು ಯುದ್ದ ಬೇಡ ಅಂತ ಹೇಳಿದ್ದಾರೆ. ಅವರು ಏಕೆ ರಾಮನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿಲ್ಲ. ರಾಮನ ಬಗ್ಗೆ ವಿಶ್ವಸಂಸ್ಥೆಯಲ್ಲಿ ಏಕೆ ಮೋದಿ ಮಾತನಾಡಿಲ್ಲ ಎಂದು ಪ್ರೋ.ಕೆ.ಎಸ್.ಭಗವಾನ್ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿದರು.

Tap to resize

Latest Videos

'ಮಹಿಷಾಸುರ ದಸರಾ ಆಚರಣೆ ಮಾಡಲು ಮುಂದಾಗಿರೋರು ವಿತ್ತಂಡ ವಾದಿಗಳು'

ಮೋದಿಗೆ ತಾಕತ್ತಿದ್ದರೆ ಭಾರತದಲ್ಲಿ ಬುದ್ದನ ದೇವಸ್ಥಾನ ಕಟ್ಟಲಿ. ಅದ್ಯಾಕೆ ರಾಮನ ದೇವಸ್ಥಾನ ಕಟ್ಟುತ್ತೇನ ಅಂತಾರೇ ಎಂದು ಗುಡುಗಿದರು.

ಮನುಸ್ಮೃತಿಯಲ್ಲಿ ಬ್ರಾಹ್ಮಣ ಸೇವೆ ಮಾಡೋರೋ ಗುಲಾಮರು ಅಂತ ಹೇಳಿದೆ. ನಿನ್ನೆ ಅಂತದ್ದೆ ಗುಲಾಮರು ವೇದಿಕೆ ಕಿತ್ತು ಹಾಕಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರು. 

ಭಗವಾನ್‌ಗೆ ಗೃಹಬಂಧನ, ಗೂಂಡಾಗಿರಿಗೆ ಬಗ್ಗಲ್ಲ ಅಂದ್ರು ಮಹೇಶ್ ಚಂದ್ರ ಗುರು!

ಮೈಸೂರು ದಸರಾ 2019ರ ಹಿನ್ನೆಲೆಯಲ್ಲಿ ಮಹಿ‍ಷಾ ದಸರಾ ಆಚರಣೆ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿದ್ದ ವೇದಿಕೆಯನ್ನು ಬಲವಂತವಾಗಿ ಸಂಸದ ಪ್ರತಾಪ್ ಸಿಂಹ ತೆಗೆಸಿದ್ದರು. ಅಷ್ಟೇ ಅಲ್ಲದೇ ವೇದಿಕೆಗೆ ಯಾರು ಅನುಮತಿಕೊಟ್ಟಿದ್ದು ಎಂದು  ಪೋಲಿಸರ ವಿರುದ್ಧ ಹರಿಹಾಯ್ದಿದ್ದರು.

click me!