ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನದ ಬೆನ್ನಲ್ಲಿಯೇ ಬೆಂಗಳೂರಿನ ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಹೊಸ ಮಹಿಳೆಯ ಧ್ವನಿ ಬರಲಿದೆ.
ಬೆಂಗಳೂರು (ಜು.13): ಅಪರೂಪದ ಧ್ವನಿಯನ್ನು ಹೊಂದಿದ್ದ ನಟಿ ಹಾಗೂ ನಿರೂಪಕಿ ಅಪರ್ಣಾ ಸಾವಿನ ಬೆನ್ನಲ್ಲಿಯೇ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಅವರ ಧ್ವನಿಯನ್ನು ಬದಲಾವಣೆ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಖಚಿತಪಡಿಸಿದೆ. ಇನ್ನುಮುಂದೆ ಬೆಂಗಳೂರು ಮೆಟ್ರೋದ ವಿಸ್ತರಿತ ಮಾರ್ಗ ಹಾಗೂ ಹೊಸ ಮಾರ್ಗಗಳಲ್ಲಿ ಅಪರ್ಣಾ ಬದಲಾಗಿ ಬೇರೊಬ್ಬ ಮಹಿಳೆಯ ಧ್ವನಿ ನಿಮ್ಮ ಕಿವಿಗೆ ಕೇಳಲಿದೆ.
ಅಪರ್ಣಾ ನಿಧನ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಹೊಸ ಧ್ವನಿ ಬರಲಿದೆ. ಬೆಂಗಳೂರಿನ ಹೊಸ ಮೆಟ್ರೋ ಮಾರ್ಗಗಳಾದ ಆರ್.ವಿ. ರಸ್ತೆ- ಬೊಮ್ಮಸಂದ್ರ, ಹಸಿರು ಮಾರ್ಗದ ವಿಸ್ತರಿತ ಮಾರ್ಗ ನಾಗಸಂದ್ರ-ಮಾದವಾರ, ನಾಗವಾರ- ಗೊಟ್ಟಿಗೆರೆ - ವಿಮಾನ ನಿಲ್ದಾಣ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳಲು ಇರುವುದಿಲ್ಲ. ಈವರೆಗೆ ನಮ್ಮ ಮೆಟ್ರೋ ಸಂಚಾರ ಮಾಡುವ ಎಲ್ಲ ಮಾರ್ಗಗಳಲ್ಲಿ ಎಂದಿನಂತೆಯೇ ಅಪರ್ಣಾ ಧ್ವನಿ ಜೀವಂತವಾಗಿರುತ್ತದೆ. ನಮ್ಮ ಮೆಟ್ರೋದ ನೇರಳೆ ಮಾರ್ಗ ರಸ್ತೆಯ ಚಲ್ಲಘಟ್ಟ- ವೈಟ್ ಫೀಲ್ಡ್ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ- ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳುತ್ತಿದ್ದು, ಅದು ಎಂದಿನಂತೆ ಮುಂದುವರೆಯಲಿದೆ. ಈ ಮಾರ್ಗಗಳಲ್ಲಿ ಅರ್ಪಣಾ ನಿಧನ ಬಳಿಕವೂ ಅಪರ್ಣಾ ಧ್ವನಿ ಜೀವಂತವಾಗಿರಲಿದೆ.
'ಮೆಟ್ರೋ'ಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ: ಭಾಷೆಗೆ ತಕ್ಕ ಭಾವನೆ ಎಂದರೆ ಅದು ಅಪರ್ಣಾ!
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ ಎಂದಿರುವ ಬಿಎಂಆರ್‌ಸಿಎಲ್, ಯಾವುದೇ ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸುವಂತಿದ್ದರೂ ಅಪರ್ಣಾ ಅವರಿಂದ ಧ್ವನಿ ಪಡೆಯುತ್ತಾ ಬಂದಿದ್ದಾರೆ. ಎಂದಿಗೂ ಧ್ವನಿ ದಾನಕ್ಕೆ ಇಲ್ಲವೆನ್ನದ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡುತ್ತಾ ಬಂದಿದ್ದರು. ಆದರೆ, ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ, ನಿರೂಪಕಿ ಅಪರ್ಣಾ ಮೊನ್ನೆ ನಿಧನರಾಗಿದ್ದಾರೆ. ನಿಧನ ಬಳಿಕವೂ ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಮೊಳಗಲಿದೆ.
ಆದರೆ, ಬೆಂಗಳೂರು ಮೆಟ್ರೋದಲ್ಲಿ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಮೆಟ್ರೋ ನೂತನ ಮಾರ್ಗಗಳಲಲ್ಲಿ ಅಪರ್ಣಾ ಧ್ವನಿ ಕೇಳಲು ಸಾಧ್ಯವಿಲ್ಲ. ನಮ್ಮ ಮೆಟ್ರೋದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಆರ್.ವಿ. ರಸ್ತೆ- ಬೊಮ್ಮಸಂದ್ರ ಹಾಗೂ ನಾಗಸಂದ್ರ - ಮಾದವಾರ ಮಾರ್ಗದಲ್ಲಿ ಹೊಸ ಧ್ವನಿಗಾಗಿ ಮೆಟ್ರೋ ಹುಡುಕಾಟ ಮಾಡುತ್ತಿದೆ. ಆದರೆ, ಇದಕ್ಕಾಗಿ ಯಾರ ಧ್ವನಿಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂಬುದು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ, ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಮಾತ್ರ ಅಪರ್ಣಾ ಅವರದ್ದಲ್ಲದ ಧ್ವನಿಯನ್ನು ಕೇಳುವುದು ಅನಿವಾರ್ಯವಾಗಲಿದೆ.
ಮೆಟ್ರೋ ರೈಲಿನಲ್ಲಿ ಅಪರ್ಣಾಗೆ ಸಂತಾಪ:
ಅಪರ್ಣಾ ನಿಧನ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋಗಳಲ್ಲಿ ಧ್ವನಿಯಾಗಿದ್ದ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ಅಪರ್ಣಾ ಅವರ ಸಾವಿಗೆ ಸಂತಾಪ ಸೂಚಿಸಿದೆ. ನಮ್ಮ ಮೆಟ್ರೋ ರೈಲುಗಳಲ್ಲಿರುವ ಎಲ್ಇಡಿ ಸ್ಕ್ರೀನ್‌ಗಳಲ್ಲಿ 'ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ, ಕನ್ನಡದ ಸುಮಧುರ ಸ್ಪಷ್ಟ ಧ್ವನಿಗುಚ್ಚವಾಗಿ ಅವರೆಂದು ಅಜರಾಮರ ' ಅವರ ಅಗಲಿಕೆಗೆ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅತೀವ ಸಂತಾಪ ಸೂಚಿಸುತ್ತದೆ' ಎಂದು ಪರದೆಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಹುಲಿಯಂತೆ ಬೇಟೆಗಾಗಿ ಕಾದು ಕುಳಿತ ಮದಗಜ; ಕಾಫಿ ತೋಟಕ್ಕೆ ಹೋದವನ ಮೇಲೆ ಒಂಟಿ ಸಲಗ ಡೆಡ್ಲಿ ಅಟ್ಯಾಕ್