ಹಾಸನದಲ್ಲಿ ಬೆಳ್ಳಂಬೆಳಗ್ಗೆ ಕಾಫಿ ತೋಟಕ್ಕೆ ಹೋದ ಕಾರ್ಮಿಕನ ಮೇಲೆ ಒಂಟಿ ಸಲಗ ಹುಲಿಯಂತೆ ಕಾದು ಕುಳಿತು ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಆನೆಯಿಂದ ತಪ್ಪಿಸಿಕೊಂಡಿದ್ದೇಗೆ ಇಲ್ಲಿದೆ ನೋಡಿ ರಣರೋಚಕ ವಿಡಿಯೋ...
ಹಾಸನ (ಜು.13): ಹಾಸನದಲ್ಲಿ ಬೆಳ್ಳಂಬೆಳಗ್ಗೆ ಕಾಫಿ ತೋಟಕ್ಕೆ ಹೋದವನ ಮೇಲೆ ಒಂಟಿ ಸಲಗ ಡೆಡ್ಲಿ ಅಟ್ಯಾಕ್ ಮಾಡಿದೆ. ಆನೆ ಘೀಳಿಟ್ಟುಕೊಂಡು ಕಾರ್ಮಿಕನನ್ನು ತುಳಿದು ಸಾಯಿಸಲು ಅಟ್ಟಾಡಿಸಿಕೊಂಡು ಬಂದಿದ್ದು, ಆನೆಯಿಂದ ತಪ್ಪಿಸಿಕೊಂದು ಓಡಿ ಬಂದ ವ್ಯಕ್ತಿ ಮನೆಯ ಬಳಿಯಿದ್ದ ಮೆಟ್ಟಿಲನ್ನೇರಿ ಮನೆಯ ಮೇಲೆ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ಆದರೆ, ಕಾರ್ಮಿಕ ಪುನಃ ಮೆಟ್ಟಿಲಿನಿಂದ ಇಳಿದು ಬರಬಹುದು ಎಂದು ಮನೆಯ ಮುಂದಿನ ಕಾಫಿ ತೋಟದಲ್ಲಿ ಸುಮಾರು ಹೊತ್ತು ಅಡಗಿ ಕುಳಿತು ಬೇಟೆಗಾಗು ಹುಲಿಯಂತೆ ಹೊಂಚು ಹಾಕಿತ್ತು. ಆನೆಯನ್ನು ಮನೆ ಮೇಲಿನಿಂದ ನೋಡುತ್ತಿದ್ದ ಕಾರ್ಮಿಕ ಆನೆ ಸಂಪೂರ್ಣವಾಗಿ ಹೋಗುವುದನ್ನು ಖಚಿತಪಡಿಸಿಕೊಂಡು ನಂತರ ಕೆಳಗೆ ಬಂದಿದ್ದಾನೆ.
ಹೌದು, ರಾಜ್ಯದಲ್ಲಿ ಕಾಡಾನೆಗಳು ಹಾಗೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇನ್ನು ರಾಮನಗರ ಹಾಗೂ ಹಾಸನದಲ್ಲಿ ಆನೆಗಳ ದಾಳಿಗೆ ಸಾವನ್ನಪ್ಪುವವರ ಪ್ರಕರಣ ಹೆಚ್ಚಾಗುತ್ತಿವೆ. ಇಂದು ಬೆಳ್ಳಂಬೆಳಗ್ಗೆ ಹಾಸನದ ಕಾಫಿ ತೋಟದಲ್ಲಿ ಒಂಟಿ ಸಲಗವೊಂದು ಹುಲಿಯಂತೆಅಡಗಿ ಕುಳಿತು ಕಾಫಿ ತೋಟದ ಕಾರ್ಮಿಕ ಬರುತ್ತಿದ್ದಂತೆಯೇ ಡೆಡ್ಲಿ ಅಟ್ಯಾಕ್ ಮಾಡಿದೆ. ಆದರೆ, ಕೂದಲೆಳೆ ಅಂತರದಲ್ಲಿ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ.
undefined
ಸರ್ಕಾರದ ಮಹಾ ಎಡವಟ್ಟು: ಇಂಜಿನಿಯರ್ ಸತ್ತು 6 ತಿಂಗಳಾದ ನಂತರ ವರ್ಗಾವಣೆ ಆದೇಶ
ಇಂದು ಬೆಳಗ್ಗೆ ತಮ್ಮ ಕಾಫಿ ತೋಟದಲ್ಲಿರುವ ಮನೆಯಿಂದ ಕಾಫಿ ತೋಟಕ್ಕೆ ಹೊರಟ ಮಹೇಶ್‌ಗೌಡ, ಕಾಫಿ ತೋಟದೊಳಗೆ ನಡೆದುಕೊಂಡು ಹೋಗುವಾಗ ಒಂಟಿ ಸಲಗ ಈತನನ್ನು ನೋಡಿ ಅಟ್ಯಾಕ್ ಮಾಡಿದೆ. ಆಗ ಆನೆ ತನ್ನತ್ತ ಧಾವಿಸಿ ಬರುತ್ತಿರುವುದನ್ನು ನೋಡಿದ ಮಹೇಶ್‌ಗೌಡ ಸತ್ನೋ, ಬಿದ್ನೋ ಅಂತಾ ಒಂದೇ ಉಸಿರಲ್ಲಿ ಓಡಿ ಮನೆಯತ್ತ ಬಂದಿದ್ದಾನೆ. ಇನ್ನು ಮನೆಯ ಬಾಗಲು ತೆಗೆದು ಒಳಗೆ ಹೋಗುವುದು ಆಗುವುದಿಲ್ಲವೆಂದು ಮನೆಯ ಬಳಿ ನಿರ್ಮಿಸಿದ್ದ ಕಬ್ಬಿಣದ ಮೆಟ್ಟಿಲುಗಳನ್ನು ಹತ್ತಿಕೊಂಡು ಮನೆಯ ಮೇಲೆ ಹೋಗಲು ಮುಂದಾಗಿದ್ದಾನೆ.
ಆದರೆ, ಮನೆಯ ಮೆಟ್ಟಿಲು ಹತ್ತುವಾಗ ಮಳೆಯಾಗಿದ್ದರಿಂದ ಒಂದು ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಜೀವದ ಮೇಲಿದ್ದ ಭಯದಿಂದ ಕಾಲನ್ನು ಕಿತ್ತುಕೊಂಡು ಪುನಃ ಮೆಟ್ಟಿಲು ಹತ್ತಿ ಮೇಲೆ ಹೋಗಿದ್ದಾನೆ. ತನ್ನ ಬೇಟೆ ತಪ್ಪಿ ಹೋಯಿತು ಎಂದು ಕುಪಿತಗೊಂಡ ಆನೆ, ಮೆಟ್ಟಿಲನ್ನು ಹತ್ತುವುದಕ್ಕೆ ಸಾಧ್ಯವಿದೆಯೇ ಎಂದು ನೋಡಿದೆ. ಆದರೆ, ಕಬ್ಬಿಣದ ಜಾಲರಿಯಂತಿದ್ದ ಮೆಟ್ಟಿಲನ್ನು ಹತ್ತಲಾಗದೇ ಅಲ್ಲಿಯೇ ಕೆಲಹೊತ್ತು ಕಾದು ನಿಂತಿದೆ. ಮನೆಯ ಮೇಲೆ ಹೋದ ವ್ಯಕ್ತಿ ಮರಳಿ ಬಾರದ ಹಿನ್ನೆಲೆಯಲ್ಲಿ ಆನೆ ಮನೆಯ ಮುಂದೆ ಹೋಗಿ ಜೋರಾಗಿ ಘೀಳಿಡುತ್ತಾ ಅಲ್ಲಿಂದ ಮಣ್ಣನ್ನು ಕಾಲಿನಿಂದ ಕೆದರುತ್ತಾ ಆಕ್ರೋಶ ಹೊರಹಾಕಿದೆ.
6 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಸಾವು: ದೇಶದಲ್ಲೇ ಮೂರನೇ ಸ್ಥಾನ
ಇಷ್ಟಕ್ಕೆ ಸುಮ್ಮನಾಗದ ಆನೆ, ಹೇಗಾದರೂ ಮಾಡಿ ಆತನನ್ನು ಕೊಂದೇ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಪಣ ತೊಟ್ಟಂತಿದ್ದ ಕಾಡಾನೆ, ಮೆಟ್ಟಿಲೇರಿದ ವ್ಯಕ್ತಿ ಇರುವ ಸ್ಥಳದಿಂದ ತಾನು ಕಾಣದ ರೀತಿಯಲ್ಲಿ ಕಾಫಿಗಿಡಗಳ ಬಳಿ ಅವಿತು ನಿಂತಿದೆ. ಒಂದು ವೇಳೆ ಮನೆ ಮೇಲೆ ಹೋದ ವ್ಯಕ್ತಿ ಕೆಳಗಿಳಿದು ಬಂದಲ್ಲಿ ಆತನ ಮೇಲೆ ಅಟ್ಯಾಕ್ ಮಾಡಿ ತುಳಿದು ಸಾಯಿಸುವುದಕ್ಕೆ ಹುಲಿ ಬೇಟೆಗಾಗಿ ಹೊಂಚು ಹಾಕಿ ಕುಳತುಕೊಳ್ಳುವಂತೆ ಆನೆಯೂ ಕೆಲಹೊತ್ತು ಕಾಡು ನಿಂತಿದೆ. ಆದರೆ, ಆನೆ ಎಲ್ಲಿದೆ ಎಂಬುದನ್ನು ಮನೆ ಮೇಲಿಂದ ವೀಕ್ಷಣೆ ಮಾಡುತ್ತಿದ್ದ ಮಹೇಶ್‌ಗೌಡ, ಸುಮಾರು 30 ನಿಮಿಷಗಳ ಕಾಲ ಮನೆ ಮೇಲೆಯೇ ನಿಂತುಕೊಂಡು ಆನೆ ದೂರ ಹೋಗುವವರೆಗೂ ಕಾದಿದ್ದಾನೆ. ಆನೆ ಹೋಗಿರುವುದು ಖಚಿತಪಡಿಸಿಕೊಂಡು ಕೆಳಗೆ ಬಂದಿದ್ದಾನೆ. ಒಟ್ಟಾರೆ, ಆನೆಯಿಂದ ಪ್ರಾಣ ಉಳಿಸಿಕೊಂಡ ಮಹೇಶ್‌ಗೌಡ ನಿಟ್ಟುಸಿರು ಬಿಟ್ಟು ಊರಿನತ್ತ ಹೋಗಿದ್ದಾನೆ.