ದಿನಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ರಸ್ತೆ ಅಪಘಾತಕ್ಕೆ ಬಲಿ

By Web Desk  |  First Published Nov 20, 2019, 10:26 PM IST

ರಸ್ತೆ ಅಪಘಾತಕ್ಕೆ ಬಲಿಯಾದ ದಿನ ಪತ್ರಿಕೆಯ ವರದಿಗಾರ/ ಹಾವೇರಿ ಜಿಲ್ಲೆ ಪ್ರಜಾವಾಣಿ ವರದಿಗಾರರಾಗಿದ್ದ ಮಂಜುನಾಥ್ ಸಾವು/ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿ/ ಬೈಕ್ ನಲ್ಲಿ ಸಂಚರಿಸುತ್ತಿದ್ದ ಮಂಜುನಾಥ್


ಹಾವೇರಿ[ನ. 20]  ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಮಂಜುನಾಥ ಎಂ.ಸಿ . ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶಿವಮೊಗ್ಗ ನಗರದವರಾದ ಅವರು ಹಾವೇರಿ ಜಿಲ್ಲೆಗೆ 5 ತಿಂಗಳ ಹಿಂದಷ್ಟೇ ಬಂದಿದ್ದರು. ದಾವಣಗೆರೆ ಜಿಲ್ಲೆ ಮಾಯಕೊಂಡ ಸಮೀಪದ ಕೊಡಗನೂರು ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

Tap to resize

Latest Videos

undefined

ರಸ್ತೆ ಅಪಘಾತದಲ್ಲಿ ಮರೆಯಾದ ಖ್ಯಾತ ಗಾಯಕಿ

ಮಾಯಕೊಂಡದ ಬಳಿಯ ಕೊಡಗನೂರು ಗ್ರಾಮದಲ್ಲಿ ಘಟನೆ ನಡೆದಿದೆ.  ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿ ಬಳಿ ನಡೆದ ಅಪಘಾತ ಪತ್ರಕರ್ತನ ಜೀವ ಬಲಿಪಡೆದಿದೆ.

ಬೆಂಗಳೂರಿನಲ್ಲಿಯೂ ಕೆಲಸ ಮಾಡಿದ್ದ ಮಂಜುನಾಥ್ ತಮ್ಮ ಅತಿ ಕಡಿಮೆ ವಯಸ್ಸಿನಲ್ಲಿಯೇ ಅನೇಕ ವಿಶೇಷ ವರದಿಗಳನ್ನು ಬರೆದಿದ್ದರು. ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.


 

click me!