ಕರ್ನಾಟಕ ಭಾರತ ದೇಶದ ನಕ್ಷೆಯಲ್ಲಿ ಇದೆಯೋ ಇಲ್ವೋ ಎಂದ ಮಾಜಿ ಸಚಿವ

By Web DeskFirst Published Nov 20, 2019, 4:33 PM IST
Highlights

ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರ ಅನುಮತಿ ವಾಪಸ್| ಈ ಬಗ್ಗೆ ನಾವು ನಿಲುವು ತಗೋತೆವಿ, ಕಾನೂನು ತಜ್ಞರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ ಎಂದ ಮಾಜಿ ಸಚಿವ ಎಂ ಬಿ ಪಾಟೀಲ| ಮಹದಾಯಿ ವಿಷಯದಲ್ಲಿ ಕೇಂದ್ರ ಅನುಮತಿ ನೀಡಿದೆ ಅಂತ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಪ್ರಹ್ಲಾದ ಜೋಶಿ ಬಹಳ ಸಂಭ್ರಮ ಪಟ್ಟಿದ್ದರು| ಇಂದ್ರ-ಚಂದ್ರ ಅಂತಾ ಹೇಳಿಕೊಂಡವರ ಬಣ್ಣ ಇದೀಗ ಬಯಲಾಗಿದೆ| 

ಅಥಣಿ(ನ.20): ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಬೇಡವಾಗಿದೆ. ಕರ್ನಾಟಕ ಭಾರತ ದೇಶದ ನಕ್ಷೆಯಲ್ಲಿ ಇದೆಯೋ ಇಲ್ವಾ ಅಂತಾ ನಮಗೆ ಸಂಶಯ ಬರುತ್ತಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಅವರು ಹೇಳಿದ್ದಾರೆ. 

ರಾಜ್ಯದ ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರ ಅನುಮತಿ ವಾಪಸ್ ವಿಚಾರದ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾವು ನಿಲುವು ತಗೋತೆವಿ, ಕಾನೂನು ತಜ್ಞರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ, ಮುಂದೆ ಏನೇನು ಮಾಡಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಮುಂದಿನ ನಿಲುವು ತಿಳಿಸಲಿದ್ದೇನೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಅಂತ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಪ್ರಹ್ಲಾದ ಜೋಶಿ ಬಹಳ ಸಂಭ್ರಮ ಪಟ್ಟಿದ್ದರು. ಇಂದ್ರ-ಚಂದ್ರ ಅಂತಾ ಹೇಳಿಕೊಂಡವರ ಬಣ್ಣ ಇದೀಗ ಬಯಲಾಗಿದೆ ಎಂದು ಹೇಳಿದ್ದಾರೆ. 

ಪ್ರಲ್ಹಾದ ಜೋಶಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬಾ ಹತ್ತಿರ ಇದ್ದವರು. ಬಿಜೆಪಿ ಹೈಕಮಾಂಡ್ ಗೆ  ಹತ್ತಿರವಾಗಿದ್ದರೂ ಇವರ ಬಣ್ಣ ಬದಲಾಗಿದೆ. ಇವರಿಗೆ ಕೇವಲ ಎಂಪಿಗಳು ಬೇಕು ಹೊರತು ಕರ್ನಾಟಕ ಬೇಡ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 
 

click me!