ಕನ್ನಡ ಪುಸ್ತಕ ಪ್ರೇಮಿ ಮೈಸೂರಿನ ಸೈಯದ್ ಇಸಾಕ್‌ಗೆ ರಾಜರತ್ನಂ ಪ್ರಶಸ್ತಿ

By Suvarna NewsFirst Published Jun 30, 2021, 5:11 PM IST
Highlights

* ಮೈಸೂರಿನ ಕನ್ನಡ ಪುಸ್ತಕ ಪ್ರೇಮಿಗೆ ಜಿ.ಪಿ.ರಾಜರತ್ನಂ ಪ್ರಶಸ್ತಿ.
* ಬೆಂಕಿ ಬಿದ್ದು ಸ್ವಂತ ಗ್ರಂಥಾಲಯ ಸುಟ್ಟು ಹಾಳಾಗಿತ್ತು.
* ಮೈಸೂರಿನ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ರ ಗ್ರಂಥಾಲಯ.
* ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ವಾರ್ಷಿಕ ಪ್ರಶಸ್ತಿ

ಮೈಸೂರು (ಜೂ. 30):  ಮೈಸೂರಿನ  ಕನ್ನಡ ಪುಸ್ತಕ ಪ್ರೇಮಿ ಕನ್ನಡಪ್ರಭ, ಸುವರ್ಣ ನ್ಯೂಸ್‌ನ 2019ರ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ  ಸೈಯ್ಯದ್ ಇಸಾಕ್  ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಜಿ.ಪಿ.ರಾಜರತ್ನಂ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಕಿ ಬಿದ್ದು ಸ್ವಂತ ಗ್ರಂಥಾಲಯ ಸುಟ್ಟು ಹಾಳಾಗಿತ್ತು.  ಮಾದ್ಯಮಗಳಲ್ಲಿ ಸುದ್ದಿ ವರದಿಯಾದ ನಂತರ ಅವರಿಗೆ ನರವಿನ ಮಹ ಪೂರವೇ ಹರಿದು ಬಂದಿತ್ತು. ಜಿ.ಪಿ.ರಾಜರತ್ನಂ ಪರಿಚಾರಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ಗೌರವ ನೀಡುವುದನ್ನು ತಿಳಿಸಿದೆ.

ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಒಳಗೊಂಡಿರುತ್ತದೆ. ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.  ಗ್ರಂಥಾಲಯಕ್ಕೆ ಬೆಂಕಿ ಬಿದ್ದುದ್ದರಿಂದ ಲಕ್ಷಾಂತರ ಮೌಲ್ಯದ ಪುಸ್ತಕಗಳು ಸುಟ್ಟು ಹೋಗಿದ್ದವು.

ಗ್ರಂಥಾಲಯಕ್ಕೆ ಬೆಂಕಿ ಇಟ್ಟಿದ್ದು ಯಾರು? 

ಜೀತದಾಳಾಗಿದ್ದ ಇಸಾಕ್‌ ಅವರು ಪ್ರತಿನಿತ್ಯ ಟೀ ಅಂಗಡಿ ಬಳಿ ಪತ್ರಿಕೆ ಓದಲು ಬರುತ್ತಿದ್ದ ಕೆಲವರನ್ನು ಗಮನಿಸಿ, ತಾನೇ ಏಕೆ ಗ್ರಂಥಾಲಯ ತೆರೆಯಬಾರದು ಎಂದೆನಿಸಿ ಗ್ರಂಥಾಲಯ ತೆರೆದಿದ್ದರು. ತಮ್ಮ ದುಡಿಮೆಯ ಒಂದಷ್ಟುಹಣವನ್ನು ಇದಕ್ಕಾಗಿ ಮೀಸಲಿಟ್ಟರು. ಇದರ ಉಪಯೋಗವನ್ನು ಸುತ್ತಮುತ್ತಲಿನ ಹಲವಾರು ವಿದ್ಯಾರ್ಥಿಗಳು ಪಡೆದಿದ್ದರು. ಈ ಗ್ರಂಥಾಲಯವನ್ನು ಮೂರು ಬಾರಿ ತೆರವುಗೊಳಿಸಲಾಗಿತ್ತು.

ಕನ್ನಡ ಪುಸ್ತಗಳೇ ಹೆಚ್ಚು:  ಇಸಾಕ್‌ ಸಂಗ್ರಹಿಸಿದ್ದ ಪುಸ್ತಕಗಳ ಪೈಕಿ ಕನ್ನಡ ಪುಸ್ತಕಗಳೇ ಶೇ.80 ರಷ್ಟಿತ್ತು. ಗ್ರಂಥಾಲಯಕ್ಕೆ ಬೆಂಕಿ ಹಚ್ಚಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

"

"

 

click me!