ಮದುವೆ ನಿಶ್ಚಯವಾಗಿದ್ದ, ಕನಕಪುರ ನರೇಗಾ ಇಂಜಿನಿಯರ್ ಶರಣ್ಯಾ ಗೌಡ ಅಪಘಾತದಲ್ಲಿ ಸಾವು!

Published : Jan 19, 2025, 01:56 PM IST
ಮದುವೆ ನಿಶ್ಚಯವಾಗಿದ್ದ, ಕನಕಪುರ ನರೇಗಾ ಇಂಜಿನಿಯರ್ ಶರಣ್ಯಾ ಗೌಡ ಅಪಘಾತದಲ್ಲಿ ಸಾವು!

ಸಾರಾಂಶ

ಕನಕಪುರದಲ್ಲಿ ನರೇಗಾ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರಣ್ಯಾ ಗೌಡ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಮುಂದಿನ ತಿಂಗಳು ಮದುವೆ ನಿಶ್ಚಯವಾಗಿದ್ದ ಶರಣ್ಯಾ ಗೌಡ ಅವರಿಗೆ ಈ ದುರ್ಘಟನೆ ಸಂಭವಿಸಿದೆ.

ರಾಮನಗರ (ಜ.19): ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರಣ್ಯಾ ಗೌಡ ನಿನ್ನೆ ಸಂಜೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಈ ಘಟನೆ ನಿನ್ನೆ ಸಂಜೆ ವೇಳೆ ಹಲಗೂರು ಸಮೀಪದ ಬಸಾಪುರ ಗೇಟ್ ಬಳಿ ನಿನ್ನೆ ನಡೆದಿದೆ. ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ವೇಳೆ ನೆಲಕ್ಕೆ ಅಪ್ಪಳಿಸಿ ಬಿದ್ದ ಇಂಜಿನಿಯರ್ ಶರಣ್ಯಾ ಗೌಡ (25) ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದವಳಾದ ಶರಣ್ಯಾ ಗೌಡ, ಕಳೆದ ಒಂದು ವರ್ಷದಿಂದ ಕನಕಪುರ ವಿಭಾಗದಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.

ಕನಕಪುರ ತಾಲೂಕಿನ ಸಾತನೂರು ಪಂಚಾಯಿತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ಮಾಡುತ್ತಿದ್ದ ಶರಣ್ಯಾ ಗೌಡ, ನಿನ್ನೆ ತನ್ನ ಕೆಲಸವನ್ನು ಮುಗಿಸಿ ವಾಪಸ್ ಹಲಗೂರಿನ ಬಳಿಯ ಸ್ವಗ್ರಾಮಕ್ಕೆ ಹೋುವಾಗ ಎರಡು ಬೈಕ್‌ಗಳ ನಡುವ ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಬೈಕ್‌ನಿಂದ ಬಿದ್ದ ಶರಣ್ಯಾ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದ ತಲೆ ಬಿದ್ದು ಗಂಭೀರ ಪೆಟ್ಟಿನಿಂದಾಗ ತೀವ್ರ ರಕ್ತಸ್ತಾವ ಉಂಟಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಯಾವುದೇ ವಾಹನಗಳು ಸರಿಯಾದ ಸಮಯಕ್ಕೆ ಲಭ್ಯವಾಗಲಿಲ್ಲ. ಹೀಗಾಗಿ, ಕೆಲವೇ ಕ್ಷಣಗಳಲ್ಲಿ ಶರಣ್ಯಾ ಗೌಡ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಇದನ್ನೂ ಓದಿ: ಹೊಸ ಮಾದರಿ ಭೂ ಮಾಪನ ಪ್ರಕ್ರಿಯೆ ಆರಂಭ: ಮಾಜಿ ಸಂಸದ ಡಿ.ಕೆ.ಸುರೇಶ್

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳೀಯ ಹಲಗೂರು ಠಾಣೆ ಪೊಲೀಸರು ಬಂದು ಸ್ಥಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಖಾಸಗಿ ಕ್ಯಾಂಟರ್ ವಾಹನದ ಮೂಲಕವೇ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. 

ಮೃತ ಇಂಜಿನಿಯರ್ ಶರಣ್ಯಾಗೆ ಮುಂದಿನ ತಿಂಗಳು ಫೆ.16ರಂದು ಮದುವೆ ಕೂಡ ನಿಶ್ಚಯವಾಗಿತ್ತು. ಈಗಾಗಲೇ ಎಂಗೇಜ್‌ಮೆಂಟ್ ಕೂಡ ಆಗಿದ್ದು, ಮದುವೆ ತಯಾರಿ ಮಾಡಿಕೊಳ್ಳುವುದಕ್ಕಾಗಿ ಪ್ರತಿ ವಾರಾಂತ್ಯದಲ್ಲಿ ತಪ್ಪದೇ ಮನೆಗೆ ಹೋಗುತ್ತಿದ್ದರು. ಮದುವೆ ಆಮಂತ್ರಣ ಪತ್ರಿಕೆಗಳನ್ನು ಕೂಡ ಪ್ರಿಂಟ್ ಮಾಡಿಸಿ ಹಂಚಿಕೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ನಿನ್ನೆ ಸಂಜೆ ವೇಳೆ ಬೈಕ್ ಅಪಘಾತದಲ್ಲಿ ಅಸುನೀಗಿದ್ದು, ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಮತ್ತಷ್ಟು ಮೈಕ್ರೋ ಫೈನಾನ್ಸ್ ಕಿರಿಕ್: ನೂರಾರು ಜನ ಪರಾರಿ!

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು