ಕರಾವಳಿಯ ಪ್ರಸಿದ್ಧ ಕಂಬಳ ಇನ್ನು ಶಿವಮೊಗ್ಗದಲ್ಲಿಯೂ, ಬೆಂಗಳೂರಿನಲ್ಲಿಯೂ ನಡೆಯಲಿದೆಯಾ..? ಈ ಕುರಿತು ಡಿಸಿಎಂ ಸೂಚನೆಯೊಂದನ್ನು ನೀಡಿದ್ದಾರೆ. ಪಾರಂಪರಿಕ ಕಂಬಳವನ್ನು ರಾಜಧಾನಿ ಬೆಂಗಳೂರು ಮತ್ತು ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗದಲ್ಲಿ ನಡೆಸುವ ಮೂಲಕ ಕಂಬಳಕ್ಕೆ ಸರ್ಕಾರದ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮಂಗಳೂರು(ಡಿ.09): ಅವಿಭಜಿತ ಜಿಲ್ಲೆಯ ಕೃಷಿಕರು ಪ್ರೀತಿಯಿಂದ ಮಕ್ಕಳಂತೆ ಸಾಕಿದ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವ ಜಾನಪದ ಮತ್ತು ಪಾರಂಪರಿಕ ಕಂಬಳವನ್ನು ರಾಜಧಾನಿ ಬೆಂಗಳೂರು ಮತ್ತು ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗದಲ್ಲಿ ನಡೆಸುವ ಮೂಲಕ ಕಂಬಳಕ್ಕೆ ಸರ್ಕಾರದ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್‌್ಥ ನಾರಾಯಣ್ ಹೇಳಿದ್ದಾರೆ.
ಇಲ್ಲಿನ ಹೊಕ್ಕಾಡಿಗೋಳಿಯಲ್ಲಿ ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಶನಿವಾರ ರಾತ್ರಿ ನಡೆದ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
BJP 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ: ಡಿಸಿಎಂ
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಂಬಳ ಕ್ರೀಡೆಗೆ ಗರಿಷ್ಠ ಮೊತ್ತದ ಅನುದಾನ ಒದಗಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕೂಡಾ ಕಂಬಳ ನಡೆಸಲು ಮುಖ್ಯಮಂತ್ರಿ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು. ಶಾಸಕ ರಾಜೇಶ್ ನಾಯ್‌್ಕ ಉಳಿಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿಕೈತ್ರೋಡಿ ಇವರು ಕಂಬಳದ ತೈಲಚಿತ್ರ ಮತ್ತು ಕಂಬಳದ ಬೆತ್ತ ನೀಡಿ ಗೌರವಿಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಕಂಬಳ ಎಂಬುದು ಕ್ರೀಡೆ ಅಲ್ಲ. ಅದು ತುಳುನಾಡಿನ ಕೃಷಿಕರ ಮತ್ತು ದೈವಾರಾಧಕರ ನಂಬಿಕೆಯ ಪ್ರತೀಕ. ಕಂಬಳ ಹಿಂಸೆ ಎಂದು ಟೀಕಿಸುವವರು ನಿಜವಾಗಿಯೂ ನೈಜ ಕಂಬಳ ನೋಡಿರುವುದಿಲ್ಲ ಎಂದಿದ್ದಾರೆ.
'ಸುಪ್ರೀಂ ತೀರ್ಪಿನವರೆಗೆ ಶಬರಿಮಲೆ ಹುಂಡಿಗೆ ಕಾಸು ಹಾಕ್ಬೇಡಿ'..!
ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಉದ್ಯಮಿ ರವಿಶಂಕರ ಶೆಟ್ಟಿಬಡಾಜೆ, ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ, ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಶುಭ ಹಾರೈಸಿದ್ದಾರೆ.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿಕೂಳೂರು, ಮೂಡುಬಿದಿರೆ ಚೌಟರ ಅರಮನೆ ಕುಲದೀಪ್ ಎಂ., ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು, ರಾಯಿ ಗ್ರಾ.ಪಂ. ಅಧ್ಯಕ್ಷ ಬಿ. ದಯಾನಂದ ಸಪಲ್ಯ, ಉದ್ಯಮಿ ರಮೇಶ್ ಶೆಟ್ಟಿ, ವಕೀಲ ಅರುಣ್ ಶ್ಯಾಮ್ ಮತ್ತಿತರರು ಇದ್ದರು.
ಜಿಲ್ಲಾ ಸಮಿತಿ ನಿಕಟಪೂರ್ವ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಸ್ವಾಗತಿಸಿದರು. ಸಮಿತಿ ಗೌರವ ಸಲಹೆಗಾರ ವಕೀಲ ಸುರೇಶ ಶೆಟ್ಟಿವಂದಿಸಿದರು.