ಕಲಬುರಗಿ- ತಿರುಪತಿ ವಿಮಾನ ಸೇವೆಗೆ ಸ್ಟಾರ್ ಮುಹೂರ್ತ| ಜ.11ರಿಂದ ವಿಮಾನ ಸೇವೆ, ವಾರಕ್ಕೆ ನಾಲ್ಕು ದಿನ ತಿರುಪತಿ- ಕಲಬುರಗಿ ನಡುವೆ ವಿಮಾನ ಹಾರಾಟ| ಕಲಬುರಗಿಯಿಂದ ಒಂದು ಗಂಟೆಯಲ್ಲಿ ತಿರುಪತಿ ತಲುಪಬಹುದು|
ಕಲಬುರಗಿ(ಡಿ.16): ಹೆಚ್ಚಿನ ವಿಮಾನ ಹಾರಾಟ, ಪ್ರಯಾಣಿಕರ ಸಂಖ್ಯಾಬಲ ಹೊಂದುವ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಇದೀಗ ತಿರುಪತಿಗೆ ವಾಯುಯಾನ ಸೇವೆ ನೀಡಲು ಸ್ಟಾರ್ ಏರ್ ಮುಂದಾಗಿದೆ.
ಹೊಸ ವರ್ಷ 2021ರ ಜ.11ರಿಂದಲೇ ಈ ವಿಮಾನ ಸೇವೆಗೆ ಮುಂದಾಗಿರುವ ಸ್ಟಾರ್ ಸಂಸ್ಥೆಯವರು ಪ್ರತಿ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ಕಲಬುರಗಿಯಿಂದ ತಿರುಪತಿಗೆ ವಿಮಾನ ಸೇವೆ ನೀಡೋದಾಗಿ ಹೇಳಿದ್ದಾರೆ. ಇದು ಕಲ್ಯಾಣ ನಾಡಿಗೇ ಸಂತಸದ ಸುದ್ದಿಯಾಗಿ ಹೊರಹೊಮ್ಮಿದೆ. ಕಲಬುರಗಿಯಿಂದ ಒಂದು ಗಂಟೆಯಲ್ಲಿ ತಿರುಪತಿ ತಲುಪಬಹುದಾಗಿದ್ದು, ಭಕ್ತರು ಸಂತೋಷದಲ್ಲಿದ್ದಾರೆ.
ಕಲಬುರಗಿ ಏರ್‌ರ್ಪೋರ್ಟ್: ವರ್ಷದಲ್ಲಿ 43797 ಜನ ವಿಮಾನಯಾನ
2000 ಮೂಲ ಟಿಕೆಟ್ ದರ ನಿಗದಿಪಡಿಸಲಾಗಿದೆ. ಬೆ.9.55ಕ್ಕೆ ಕಲಬುರಗಿಯಿಂದ ಹಾರುವ ವಿಮಾನ ಬೆಳಗ್ಗೆ 11ಕ್ಕೆ ತಿರುಪತಿ ತಲುಪಲಿದೆ. ಮಧ್ಯಾಹ್ನ 2.25ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 3.30ಕ್ಕೆ ಕಲಬುರಗಿ ತಲುಪಲಿದೆ. ಈಗಾಗಲೇ ಬುಕಿಂಗ್ ಕೂಡಾ ಆರಂಭಗೊಂಡಿದೆ.
ಮುಂಬೈ-ಹೈದರಾಬಾದ್‌ಗೆ ಮನವಿ:
ವಾಣಿಜ್ಯ ವಹಿವಾಟಿಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿಯಿಂದ ಮುಂಬೈ ಹಾಗೂ ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸುವಂತೆ ಅಲಯಸ್ಸ್ ಏರ್ ಸಂಸ್ಥೆಗೆ ಹೈದ್ರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಮನವಿ ಸಲ್ಲಿಸಿದೆ. ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದ್ದಾರೆ.