ಕಲಬುರಗಿ ಟು ಬಾಂಗ್ಲಾದೇಶ: 4 ತಿಂಗಳ ಹಿಂದೆ ನಾಪತ್ತೆಯಾದ ಯುವತಿ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್! ನೆಕ್ಸ್ಟ್ ಜನ್ ಗಾರ್ಮೆಂಟ್ಸ್‌ ನಲ್ಲಿ ಏನು ನಡೀತಿದೆ?

Kannadaprabha News   | Kannada Prabha
Published : Sep 20, 2026, 08:38 AM IST
Kalaburagi young woman missing case

ಸಾರಾಂಶ

kalaburagi young woman missing case: ಇಲ್ಲಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು 4 ತಿಂಗಳ ಹಿಂದೆ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮೆಟ್ಟಲೇರಿದೆ. ಯುವತಿಯು ಬಾಂಗ್ಲಾದೇಶಕ್ಕೆ ಬಲವಂತವಾಗಿ ಸಾಗಿಸಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಕಲಬುರಗಿ(ಸೆ.20) ಇಲ್ಲಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು 4 ತಿಂಗಳ ಹಿಂದೆ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮೆಟ್ಟಲೇರಿದೆ. ಯುವತಿಯು ಬಾಂಗ್ಲಾದೇಶಕ್ಕೆ ಬಲವಂತವಾಗಿ ಸಾಗಿಸಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ನಾಪತ್ತೆಯಾಗಿದ್ದ ಕಲಬುರಗಿ ಯುವತಿ ಬಾಂಗ್ಲಾದೇಶದಲ್ಲಿ ಪತ್ತೆ!

ಸುರೇಖಾ ಪವಾರ್‌ ಎಂಬುವರು ಮೇ 20ರಂದು ಕಲಬುರಗಿಯ ನೆಕ್ಸ್ಟ್ ಜನ್ ಗಾರ್ಮೆಂಟ್ಸ್‌ಗೆ ಯುವಕನೊಂದಿಗೆ ಕೆಲಸಕ್ಕೆಂದು ತೆರಳಿದ್ದರು. ಆದರೆ ಮನೆಗೆ ಮರಳಿರಲಿಲ್ಲ. ಹೀಗಾಗಿ ಪೋಷಕರು ಗುಲಬರ್ಗ ವಿವಿ ಪೊಲೀಸ್‌ ಠಾಣೆಗೆ ನಾಪತ್ತೆಯಾಗಿರುವ ಪ್ರಕರಣ ದಾಖಲಿಸಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್‌ ವಿಚಾರಣೆ ಬಳಿಕ ಸೆ.23ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ ಎಂದು ಕುಟುಂಬದ ಪರ ವಾದ ಮಂಡಿಸಿರುವ ವಕೀಲರು ತಿಳಿಸಿದ್ದಾರೆ. ಹೀಗಾಗಿ 4 ತಿಂಗಳ ಹಿಂದಿನ ಯುವತಿ ನಾಪತ್ತೆ ಪ್ರಕರಣದ ವಿಚಾರಣೆ ಇದೀಗ ಹೊಸ ತಿರುವು ಪಡೆದಂತಾಗಿದೆ.

ಸಹೋದರನಿಗೆ ಬಂದ ಪತ್ರದಲ್ಲೇನಿದೆ?

ಇದಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದರನಿಗೆ ಪತ್ರವೊಂದು ಬಂದಿದೆ ಎನ್ನಲಾಗಿದ್ದು, ಅದರಲ್ಲಿ ಆಕೆ ಬಾಂಗ್ಲಾದೇಶದ ಹಲವರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರ ಹೆಸರು ಉಲ್ಲೇಖಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ಯುವತಿ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಜಹಾಂಗೀರ್‌ ಎಂಬಾತ ಯುವತಿಯನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುಟುಂಬದವರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್‌ ವಿಚಾರಣೆ ಬಳಿಕ ಸೆ.23ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ ಎಂದು ಕುಟುಂಬದ ಪರ ವಾದ ಮಂಡಿಸಿರುವ ವಕೀಲರು ತಿಳಿಸಿದ್ದಾರೆ. ಹೀಗಾಗಿ 4 ತಿಂಗಳ ಹಿಂದಿನ ಯುವತಿ ನಾಪತ್ತೆ ಪ್ರಕರಣದ ವಿಚಾರಣೆ ಇದೀಗ ಹೊಸ ತಿರುವು ಪಡೆದಂತಾಗಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಕಲಬುರಗಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ನೆಕ್ಸ್ಟ್ ಜನ್’ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಹೀರೆನಂದೂರ್ ತಾಂಡಾದ ಯುವತಿಯೊಬ್ಬರನ್ನು ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ಬಾಂಗ್ಲಾದೇಶಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದಿದ್ದು, ಪೋಷಕರು ಹಿಂದೆ ದೂರು ನೀಡಿದ್ದಾಗ ಕಾನೂನು ಪ್ರಕಾರ ಪೊಲೀಸರು ಯುವತಿಯನ್ನು ಸಂಪರ್ಕಿಸಿದ ವೇಳೆ ತಾನು ಕಾಣೆಯಾಗಿಲ್ಲ, ಸ್ವಇಚ್ಛೆಯಿಂದಲೇ ಬಂದಿರುವುದಾಗಿ ತಿಳಿಸಿದ್ದಾಳೆ. ಹೀಗೆ ಸ್ವಂತ ನಿರ್ಧಾರದಿಂದ ಹೋದಾಗ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಕೊಂಕಣ ರೈಲ್ವೆಗೆ ₹7760 ಕೋಟಿ ಥ್ಯಾಂಕ್ಸ್: ಅಂಕೋಲಾ–ಹುಬ್ಬಳ್ಳಿ, ತಾಳಗುಪ್ಪ–ಹೊನ್ನಾವರ ಅನುಷ್ಠಾನ ಮಾಡಿ-ಕಾಗೇರಿ
ಬೆಂಗಳೂರಿಗರೇ ಗಮನಿಸಿ: ಸೆ.22ರಂದು ಕಾವೇರಿ ನೀರು ಪೂರೈಕೆ ಸ್ಥಗಿತ; ನಿಮ್ಮ ಏರಿಯಾ ಇದೆನಾ ಚೆಕ್ ಮಾಡಿ