ಹಳ್ಳ ದಾಟಲು ಹೋಗಿ ನಿನ್ನೆ ಕೊಚ್ಚಿ ಹೋಗಿದ್ದ ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದ ಯುವತಿ ದಾನೇಶ್ವರಿ ಶವ ಶನಿವಾರ ಪತ್ತೆಯಾಗಿದೆ. ಶವ ಸೋಧಕ್ಕೆ ಹೈದ್ರಾಬಾದ್‌ನ ಎನ್‌ಡಿಆರ್‌ಎಫ್ ತಂಡದ ಈಜು ತಜ್ಞರ ಪಡೆ ಆಗಮಿಸಿತ್ತು. ಸತತ2 ದಿನಗಳ ಸೋಧದ ನಂತರ ಯುವತಿ ಶವವಾಗಿ ಸಿಕ್ಕಿದ್ದಾಳೆ.
ಕಲಬುರಗಿ (ಸೆ.11) : ಮಳೆಯಬ್ಬರ ಮತ್ತೆ ಕಳೆದ 3 ದಿನದಿಂದ ಜಿಲ್ಲೆಯಲ್ಲಿ ಮುಂದುವರಿದಿದೆ. ಏತನ್ಮದ್ಯೆ ಮಳೆಗೆ ಹಳ್ಳ- ಕೊಳ್ಳಗಲು ತುಂಬಿ ಹರಿಯುತ್ತಿವೆ. ಹಳ್ಳ ದಾಟಲು ಹೋಗಿ ನಿನ್ನೆ ಕೊಚ್ಚಿ ಹೋಗಿದ್ದ ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದ ಯುವತಿ ದಾನೇಶ್ವರಿ ಶವ ಶನಿವಾರ ಪತ್ತೆಯಾಗಿದೆ. ಶವ ಸೋಧಕ್ಕೆ ಹೈದ್ರಾಬಾದ್‌ನ ಎನ್‌ಡಿಆರ್‌ಎಫ್ ತಂಡದ ಈಜು ತಜ್ಞರ ಪಡೆ ಆಗಮಿಸಿತ್ತು. ಸತತ2 ದಿನಗಳ ಸೋಧದ ನಂತರ ಯುವತಿ ಶವವಾಗಿ ಸಿಕ್ಕಿದ್ದಾಳೆ.
ಕಲಬುರಗಿ: ತುಕ್ಕು ಹಿಡಿದ ಪೈಪ್‌ಲೈನ್ ಗೊಬ್ಬುರವಾಡಿ ಜನರಿಗೆ ಕಂಟಕವಾಯ್ತೆ?
ಯುವತಿ ದಾನೇಶ್ವರಿ ತಮ್ಮ ತಾಯಿ ಗುರುಮ್ಮ ಜೊತೆ ಹೊಲದಿಂದ ಮನೆಗೆ ಮರಳುವಾಗ ನಿನ್ನೆ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಳು. ಮನೆಯಲ್ಲಿ ಈಕೆಯ ಸಾವಿಗಾಗಿ ಬಂಧುಗಳು, ಊವರು ರೋದಿಸುತ್ತಿದ್ದಾರೆ. ತಹಸಿಲ್ದಾರ್ ಸುರೇಶ್ ವರ್ಮಾ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ್ ವಾಲಿ, ಲಾಡಮುಗಳಿ ಗ್ರಾಪಂ ಅಧ್ಯಕ್ಷ ರಾಜಕುಮಾರ್ ಪೂಜಾರಿ ಯುವತಿ ಮನೆಗೆ ಭೇಟಿ ನೀಡಿದ್ದರು.
ಸಂಪರ್ಕ ಕಡಿತ, ಶಾಲಾ ಮಕ್ಕಳು, ರೈತರು ತತ್ತರ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಹಲವಡೆ ಸಂಪರ್ಕ ಕಡಿತವಾಗಿದೆ. ಶಾಲಾ ಮಕ್ಕಳು, ರೈತರು ಸೇರಿದಂತೆ ಮಳೆಗೆ ತತ್ತರಿಸಿದ್ದಾರೆ. ಸೇತುವೆಗಳು ಜಲಾವೃತವಾಗಿದ್ದು ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಶಾಲೆಗೆ ತೆರಳಿದ ಮಕ್ಕಳು, ಜಮೀನುಗಳಿಗೆ ತೆರಳಿದ ರೈತರು ಮರಳಿ ಗ್ರಾಮಕ್ಕೆ ಹೋಗಲು ಪರದಾಡುತ್ತಿದ್ದಾರೆ. ಆಳಂದದ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಕಲ್ಲಹಂಗರಗಾ ಗ್ರಾಮದ ಹೊರ ವಲಯದಲ್ಲಿರುವ ಹಳ್ಳ ತುಂಬಿ ಸೇತುವೆ ಮೇಲೆ ಹರಿಯುತ್ತಿದೆ. ಹೀಗಾಗಿ ಜಂಬಗಾ (ಬಿ) ಕ್ರಾಸ…, ಕಲ್ಲಹಂಗರಗಾ ಮಾರ್ಗವಾಗಿ ಚಿಂಚನಸೂರ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನೀರಿನಲ್ಲಿ ಕೊಚ್ಚಿಹೋದ ಆಟೋ , ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ
ಶಾಲಾ ಮಕ್ಕಳಿಗೆ ಸಂಕಷ್ಟ: ಚಿಂಚೋಳಿಯಲ್ಲಿ ಮಳೆಯಿಂದಾಗಿ ಕೋಡ್ಲಿ ಗ್ರಾಮದ ಮುಖ್ಯದ್ವಾರದ ಅಗಸಿ ಹತ್ರ ಸಣ್ಣ ಹಳ್ಳ ತುಂಬಿ ಹರಿಯುತ್ತಿದ್ದು, ಶಾಲೆಗೆ ತೆರಳಿದ ಶಾಲಾಮಕ್ಕಳು ಗ್ರಾಮದೊಳಗೆ ಹೋಗಲು ಪರದಾಡಿದ್ದಾರೆ. ರೈತರು ಕೂಡಾ ಜಮೀನಿನಿಂದ ಗ್ರಾಮಕ್ಕೆ ಹೋಗಲು ಹರಸಾಹಸ ಪಟ್ಟರು. ಕುಕ್ಲೂರು ಭಂಟನಳ್ಳಿ ಗಡಿಕೇಶ್ವರ ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಗಡಿಕೇಶ್ವರ, ಭೂತ್ಪೂರ, ಚಿಂತಪಳ್ಳಿ ಗ್ರಾಮಗಳಲ್ಲಿ ನಾಲೆಗಳು ತುಂಬಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹೊನ್ನ ಕಿರಣಗಿ, ಖಣದಾಳದಲ್ಲಿ ಮಳೆಗೆ ಮನೆಗಳಿಗೆ ಹಾಗೂ ಜಮೀನಿಗೆ ನೀರು ನುಗ್ಗಿ ಭಾರಿ ಹಾನಿಯಾಗಿದೆ. ಇನ್ನೂ ಸೆ. 12 ರ ವರೆಗೂ ಜಿಲ್ಲೆಯಲ್ಲಿ ಮಳೆಯ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.