Chitradurga: ಕಾಡುಗೊಲ್ಲ ಸಮುದಾಯ ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

By Govindaraj S  |  First Published Jan 25, 2023, 7:20 PM IST

ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ಸಮುದಾಯಗಳು ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿವೆ. ಹಾಗೆಯೇ ಕಾಡುಗೊಲ್ಲ ಸಮುದಾಯ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದು, ಇದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜ.25): ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ಸಮುದಾಯಗಳು ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿವೆ. ಹಾಗೆಯೇ ಕಾಡುಗೊಲ್ಲ ಸಮುದಾಯ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದು, ಇದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಕುರಿತು ವರದಿ ಇಲ್ಲಿದೆ. ಬುಡಕಟ್ಟು ಸಮುದಾಯದ ದಿರಿಸು ಧರಿಸಿ ಪ್ರತಿಭಟಿಸ್ತಿರುವ ಜನರು, ಕುರಿ ಮರಿಯನ್ನು ಹೆಗಲ ಮೇಲೆ ಹೊತ್ತು ಬುಡಕಟ್ಟು ಸಂಸ್ಕ್ರತಿ ಅನಾವರಣ ಮಾಡಿದ ಕಾಡು ಗೊಲ್ಲ‌ ಸಮುದಾಯ. 

Tap to resize

Latest Videos

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣ. ಹೌದು ಸತತ ,20 ವರ್ಷಗಳಿಂದ  ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕಾಡುಗೊಲ್ಲ ಸಮುದಾಯ ಹೋರಾಡ್ತಿದೆ.ಆದ್ರೆ ಆಳುವ ಸರ್ಕಾರಗಳು ಇವರ ಕೂಗಿಗೆ ಸೊಪ್ಪು ಹಾಕಿಲ್ಲ. ಹೀಗಾಗಿ ಇಂದು ಚಳ್ಳಕೆರೆ ಪಟ್ಟಣದಲ್ಲಿ ಕಾಡುಗೊಲ್ಲರ ರಾಜ್ಯಾಧ್ಯಕ್ಷ  ರಾಜಣ್ಣ ನೇತೃತ್ವದಲ್ಲಿ ಕಾಡುಗೊಲ್ಲ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಯ್ತು. 

ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್‌.ಡಿ.ಕುಮಾರಸ್ವಾಮಿ

ಆರ್ಥಿಕವಾಗಿ,ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಹಿಂದುಳಿದ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು‌. ಇನ್ನು ಚಳ್ಳಕೆರೆಯ ಕಾಡುಗೊಲ್ಲರ ಸಂಘದ ಆವರಣದಿಂದ ಆರಂಭವಾದ  ಪ್ರತಿಭಟನಾ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಪ್ರತಿಭಟಿಸಿದ ಕಾಡುಗೊಲ್ಲ ಮುಖಂಡರು, ಕೈನಲ್ಲಿ ಕೋಲು, ಹೆಗಲಿಗೆ ಕಂಬಳಿ ಧರಿಸಿ ಧರಣಿಯಲ್ಲಿ ಭಾಗಿಯಾಗಿದ್ದೂ, ಚಳ್ಳಕೆರೆ ತಾಲೂಕು ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಜನರ ಸಂಕಷ್ಟ ನಿವಾರಣೆಗೆ ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಈ ವೇಳೆ ಮಾತನಾಡಿದ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ, ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೊರಾಟದ ಎಚ್ಚರಿಕೆ ನೀಡಿದರು. ಅಲ್ಲದೇ ಈ ಸರ್ಕಾರದಿಂದ ನ್ಯಾಯ ಸಿಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು. ಒಟ್ಟಾರೆಯಾಗಿ 2023ರ ವಿಧಾನಸಭಾ ಚುನಾವಣೆ‌ ಸಮೀಪಿಸ್ತಿರುವ ಬೆನ್ನಲ್ಲೇ ನಡೆಯುತ್ತಿರುವ ಕಾಡುಗೊಲ್ಲರ ಮೀಸಲಾತಿ ಹೋರಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

click me!