Dharwad: ಕಡ್ಡಾಯ ಮತದಾನ ಮಾಡೋಣ- ಸದೃಡ ದೇಶ ನಿರ್ಮಿಸೋಣ: ಡಿಸಿ ಗುರುದತ್ತ ಹೆಗಡೆ ಸಲಹೆ

By Sathish Kumar KH  |  First Published Jan 25, 2023, 6:14 PM IST

ಭಾರತೀಯ ಮತದಾನ ವ್ಯವಸ್ಥೆ ತನ್ನ ಮುಕ್ತತೆ, ನಿಷ್ಪಕ್ಷಪಾತತೆ ಮತ್ತು ಸುರಕ್ಷತೆ ದೃಷ್ಟಿಯಿಂದ ವಿಶ್ವದಲ್ಲಿ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ಮತದಾರರ ನೆನೆಕೆಗೆ ಮತ್ತು ಮತದಾರನಿಗೆ ಗೌರವಿಸುವುದಕ್ಕೆ ಭಾರತೀಯ ಚುನಾವಣಾ ಆಯೋಗವು ತನ್ನ ಸಂಸ್ಥಾಪನಾ ದಿನವಾದ ಜ.25 ಅನ್ನು  ಮತದಾರ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.


ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.25): ಭಾರತೀಯ ಮತದಾನ ವ್ಯವಸ್ಥೆ ತನ್ನ ಮುಕ್ತತೆ, ನಿಷ್ಪಕ್ಷಪಾತತೆ ಮತ್ತು ಸುರಕ್ಷತೆ ದೃಷ್ಟಿಯಿಂದ ವಿಶ್ವದಲ್ಲಿ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ಮತದಾರರ ನೆನೆಕೆಗೆ ಮತ್ತು ಮತದಾರನಿಗೆ ಗೌರವಿಸುವುದಕ್ಕೆ ಭಾರತೀಯ ಚುನಾವಣಾ ಆಯೋಗವು ತನ್ನ ಸಂಸ್ಥಾಪನಾ ದಿನವಾದ ಜ.25 ಅನ್ನು  ಮತದಾರ ದಿನವೆಂದು ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಧಾರವಾಡ ಜಿಲ್ಲಾಡಳಿತ  ಸಂಯುಕ್ತವಾಗಿ ಆಯೋಜಿಸಿದ್ದ ಮತದಾರ ದಿನಾಚರಣೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಭಾರತೀಯ ಚುನಾವಣಾ ಆಯೋಗ ಪ್ರತಿಯೊಬ್ಬ ಅರ್ಹ ಮತದಾರನಿಗೆ ಚುನಾವಣೆಯಲ್ಲಿ ಭಾಗವಹಿಸುವ, ಮತದಾನ ಮಾಡುವ ಹಕ್ಕು ನೀಡಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಪ್ರಸಕ್ತ ಸಾಲಿನ ಮತದಾರ ದಿನವನ್ನು ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾ ಆಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

Latest Videos

undefined

ಬೇಂದ್ರೆ ಹುಟ್ಟುಹಬ್ಬ ಹಿನ್ನೆಲೆ, ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪ್ರಜೆಗಳು ದುಡ್ಡಿಗೆ  ಮತ ಮಾರಿಕೊಳ್ಳಬಾರದು: ಕಾರ್ಯಕ್ರಮ ಉದ್ಘಾಟಿಸಿ,  ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ. ಅವರು ಮಾತನಾಡಿ,  ಮತದಾನ ಅಮೂಲ್ಯ ಕಾರ್ಯ. ಪ್ರಜೆಗಳು ದುಡ್ಡಿಗೆ  ತಮ್ಮ ಮತ ಮಾರಿಕೊಳ್ಳಬಾರದು. ಹಣಬಲ, ಜಾತಿ ಬಲ ಇಂದು ಚುನಾವಣೆ ಎಂಬ ಪವಿತ್ರ  ಕಾರ್ಯದ ದಿಕ್ಕು ತಪ್ಪಿಸುತ್ತಿವೆ. ಮತದಾರರು ಜಾಗೃತರಾಗಬೇಕು. ಮಾದರಿ ಪ್ರಜಾ ಪ್ರಭುತ್ವ ಸ್ಥಾಪಿಸಬೇಕು. ಅರ್ಹ ನಾಗರಿಕರಿಗೆ ಸರಕಾರಿ ಸೌಕರ್ಯಗಳು  ಸುಲಭವಾಗಿ ಸಿಗಬೇಕು. ಉತ್ತಮ ಆಡಳಿತವಿರಬೇಕು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಇದೆಲ್ಲದಕ್ಕೂ ಮೇಲ್ವಿಚಾರಣೆಗೆ ಉತ್ತಮ ಜನಪ್ರತಿನಿಧಿ ಇರಬೇಕು. ಸಮಾಜಮುಖಿ ಕಾಳಜಿ ಇರುವ ಜನಪ್ರತಿನಿಧಿಗಳ ಆಯ್ಕೆ ಪ್ರಜೆಗಳ ಕೈ ಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕೀರ್ತಿವತಿ ಅವರು ಮತದಾರ ಪ್ರತಿಜ್ಞೆಯನ್ನು ಬೋಧಿಸಿದರು. ಉತ್ತಮ ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಾದ ತಹಸಿಲ್ದಾರ ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ  ಹಾಗೂ ಮತಗಟ್ಟೆ ಮೇಲ್ವಿಚಾರಕ ಗ್ರಾಮ ಆಡಳಿತ ಅಧಿಕಾರಿ ವೆಂಕಟೇಶ ಹಟ್ಟಿಯವರ ಅವರನ್ನು ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು  ಸನ್ಮಾನಿಸಿ, ಗೌರವಿಸಿದರು.

ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಲು ಚುನಾವಣಾ ಚಾಣಕ್ಯ ಅಮಿತ್‌ ಶಾ ಆಗಮನ..!

ಯುವ ಮತದಾರರ ಪರವಾಗಿ ಸಾನಿಯಾ, ವಿಜಯಕುಮಾರ, ಪ್ರಜ್ವಲ  ಅವರಿಗೆ ಮತದಾರ ಚೀಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ವಿತರಿಸಿದರು. ಮತದಾನ ಜಾಗೃತಿ ಕುರಿತು ಕಿರುಚಿತ್ರ ಪ್ರದರ್ಶನಕ್ಕೆ  ಚುನಾವಣಾ ಆಯೋಗದಿಂದ ರನ್ನರ್ ಆಪ್ ಪ್ರಶಸ್ತಿ ಪಡೆದ ಎಪ್.ಬಿ.ಕಣವಿ‌ ಕಲಾ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಜಿಲ್ಲಾ ಸ್ವಿಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,  ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೊಡ, ಜಿ.ಪಂ. ಉಪ ಕಾರ್ಯದರ್ಶಿ ರೇಖಾ ಡೊಳ್ಳಿನ, ಡೈಟ್ ಪ್ರಾಚಾರ್ಯ ಎನ್.ಕೆ.ಸಾವುಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ತಹಸೀಲ್ದಾರರಾದ ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ ಇದ್ದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪ್.ಬಿ.ಕಣವಿ ಶಿಕ್ಷಕರ ತಂಡದವರು ನಾಡಗೀತೆ ಹಾಗೂ ಚುನಾವಣಾ ಜಾಗೃತಿ ಗೀತೆ ಪ್ರಸ್ತುತ ಪಡಿಸಿದರು. ಕೀರ್ತಿವತಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ.ಶೇಖ ವಂದಿಸಿದರು. ಮತದಾರ ದಿನಾಚರಣೆ ನಿಮಿತ್ಯ  ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ವಿವಿಧ ಕಾಲೇಜುಗಳ ಮತದಾರ ಸಾಕ್ಷರತಾ ಕ್ಲಬ್ ಸದಸ್ಯರು, ಮುಖ್ಯಸ್ಥರು, ಕಂದಾಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

click me!