ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗೋದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರವಾಗಲೇ, ವಿವಿ ಸಾಗರ ಜಲಾಶಯಕ್ಕೆ ಭದ್ರಾದಿಂದ ನೀರು ಹರಿಸಬಾರದು ಎಂದು ದಾವಣಗೆರೆ ರೈತರು ಕ್ಯಾತೆ ತೆಗೆದಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜು.13): ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗೋದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರವಾಗಲೇ, ವಿವಿ ಸಾಗರ ಜಲಾಶಯಕ್ಕೆ ಭದ್ರಾದಿಂದ ನೀರು ಹರಿಸಬಾರದು ಎಂದು ದಾವಣಗೆರೆ ರೈತರು ಕ್ಯಾತೆ ತೆಗೆದಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಚಿತ್ರದುರ್ಗ ಜಿಲ್ಲಾ ಭದ್ರಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಾವು ಸಿಎಂ ನಿಯೋಗ ಹೋಗ್ತೀವಿ ಎಂದು ಟಕ್ಕರ್ ಕೊಟ್ಟಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಭದ್ರಾ ಮೇಲ್ದಂಡೆ ಯೋಜನೆ ಅಂದ್ರೆ ಸಾಕು ಅದು ಕೋಟೆನಾಡಿನ ರೈತರು, ಹೋರಾಟಗಾರರು, ಸ್ವಾಮೀಜಿಗಳ ಹೋರಾಟದ ಪ್ರತಿಫಲವಾಗಿ ಕೋಟೆನಾಡಿಗೆ ಭದ್ರೆ ಹರಿದು ಬರ್ತಿದ್ದಾಳೆ ಎಂದು ಎಲ್ಲರು ಮಾತನಾಡ್ತಾರೆ. ಆದ್ದರಿಂದಲೇ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ದ ವಿವಿ ಸಾಗರ ಡ್ಯಾಂ ತುಂಬುವ ಸನಿಹದಲ್ಲಿದೆ. ನೂರಾರು ವರ್ಷಗಳ ಬಳಿಕ ಡ್ಯಾಂ ತುಂಬಲಿದೆ, ಹಾಗೂ ಜಿಲ್ಲೆಯ ರೈತರಿಗೆ ಕುಡಿಯೋದಕ್ಕೆ ನೀರು ಸಿಗಲಿದೆ ಎಂದು ಜಿಲ್ಲೆಯ ಅನ್ನದಾತರು ಖುಷಿಯಲ್ಲಿದ್ದಾರೆ. ಆದ್ರೆ ಶಿವಮೊಗ್ಗ ಹಾಗೂ ದಾವಣಗೆರೆ ರೈತರ ಒಕ್ಕೂಟ ಆಗಿರುವ ಕಾಡಾ ಸಮಿತಿ ಭದ್ರಾದಿಂದ ಯಾವುದೇ ಕಾರಣಕ್ಕೂ ಇನ್ಮುಂದೆ ಚಿತ್ರದುರ್ಗಕ್ಕೆ ನೀರು ಹರಿಸಬಾರದು ಎಂದು ಕ್ಯಾತೆ ತೆಗೆದಿರೋದು ಕೋಟೆನಾಡಿನ ರೈತರ ನಿದ್ದೆಗೆಡಿಸಿದೆ.
ಜಮೀನು ಸ್ವಾಧೀನಕ್ಕೆ ಪೊಲೀಸರು, ಶಾಸಕರ ಬೆಂಬಲಿಗರ ಅಡ್ಡಿ: ಡಿಸಿ ಕಚೇರಿ ಮುಂದೆ ಕಣ್ಣೀರಿಟ್ಟ ಮಹಿಳೆ
ಈಗಾಗಲೇ ಸರ್ಕಾರ ತುಂಗಾದಿಂದ 17Tmc ಹಾಗೂ ಭದ್ರಾದಿಂದ 12.50Tmc ಒಟ್ಟು 29.50Tmc ನೀರನ್ನು ವಿವಿ ಸಾಗರಕ್ಕೆ ಹರಿಸುವಂತೆ ಆದೇಶ ಹೊರಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗುವ ಹೊತ್ತಿನಲ್ಲೇ ದಾವಣಗೆರೆ ರೈತರು ಚಕಾರ ಎತ್ತಿರೋದಕ್ಕೆ ಯಾವುದೇ ಉರುಳಿಲ್ಲ. ಸಾವಿರಾರು ಕ್ಯೂಸೆಕ್ ನೀರು ಸಮುದ್ರದ ಪಾಲು ಆಗುತ್ತಿದೆ. ಇಂತದ್ರಲ್ಲಿ ನಮ್ಮ ಜಿಲ್ಲೆಯ ಜನರು ನೀರು ಕೇಳ್ತಿರೋದು ಕುಡಿಯೋದಕ್ಕೆ, ಇವರು ಕೇವಲ ರಾಜಕೀಯ ಗಿಮಿಕ್ ಮಾಡಲಿಕ್ಕೆ ಕ್ಯಾತೆ ತೆಗೆದಿರೋದು ಸರಿಯಲ್ಲ ಹೀಗೆ ಮುಂದೆವರದ್ರೆ ನಾವು ಸಿಎಂ ನಿಯೋಗ ತೆರಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಇನ್ನೂ ಕಾಡಾ ಸಮಿತಿಯಲ್ಲಿ ಕೇವಲ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ರೈತರು ಇದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಹಾಗು ತುಮಕೂರಿನ ಕೆಲ ರೈತರನ್ನೂ ತಮ್ಮ ಸಮಿತಿಗೆ ಸೇರಿಸಿಕೊಳ್ಳಬೇಕು. ಯಾಕಂದ್ರೆ ನಾವು ಕೂಡ ಭದ್ರಾ ನೀರಿನ ಪಾಲುದಾರರು ಎಂದು ರೈತರು ಒತ್ತಾಯಿಸಿದರು. ಇದೇ ವೇಳೆ ನಿನ್ನೆ ನಗರಕ್ಕೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವರ ಬಳಿ ಈ ವಿಚಾರವಾಗಿ ಚರ್ಚಿಸಿದಾಗ, ಎಲ್ಲರೂ ನಮ್ಮ ರಾಜ್ಯದ ರೈತರೇ ಆಗಿದ್ದಾರೆ. ರೈತರ ಮಧ್ಯೆ ಯಾವುದೇ ಕಿರಿಕಿರಿ ಮಾಡುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ.
Chitradurga Irrigation Project; ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ನಾನು ಕೂಡ ಕಾಡಾ ಸಮಿತಿಯವರು ಕೊಟ್ಟಿರೋ ಹೇಳಿಕೆಯನ್ನು ನೋಡಿದ್ದೇನೆ. ಈ ಕುರಿತು ಕೂಡಲೇ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ತೀನಿ ಎಂದು ಭರವಸೆ ಕೊಟ್ಟರು. ಒಟ್ಟಾರೆಯಾಗಿ ಭದ್ರಾ ನೀರು ಜಿಲ್ಲೆಗೆ ಹರಿಯುತ್ತಿದೆ ಎಂದು ಕನಸು ಕಾಣ್ತಿರೋ ಜಿಲ್ಲೆಯ ಜನರಿಗೆ ಪದೇ ಪದೇ ದಾವಣಗೆರೆ ರೈತರು ಸುಖಾ ಸುಮ್ಮನೆ ನೀರು ಬಿಡಬಾರದು ಎಂದು ಕ್ಯಾತೆ ತೆಗೆಯುತ್ತಿರೋದು ನಿಜಕ್ಕೂ ಬೇಸರದ ಸಂಗತಿ. ಈ ಭಾಗದ ರೈತರು ಕುಡಿಯುವ ನೀರಿಗಾಗಿ ಕೇಳ್ತಿರೋದು ಎಂದು ಮನಗಂಡು ಇನ್ನಾದ್ರು ಸುಮ್ಮನೆ ಇರಲಿ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.