ಗೋವಾ ಸಿಎಂ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಈಶ್ವ​ರ​ಪ್ಪ

Kannadaprabha News   | Asianet News
Published : Jan 31, 2021, 10:26 AM IST
ಗೋವಾ ಸಿಎಂ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಈಶ್ವ​ರ​ಪ್ಪ

ಸಾರಾಂಶ

ಪ್ರಮೋದ್‌ ಸಾವಂತ್‌ ಏನೇ ಹೇಳಲಿ, ಅದಕ್ಕೆ ನ್ಯಾಯ ಮಂಡಳಿ ಇದೆ| ಜನಪ್ರಿಯತೆಗಾಗಿ ಏನು ಬೇಕಾದರೂ ಹೇಳುತ್ತಾರೆ. ಅವರ ಯಾವ ಹೇಳಿಕೆಗೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ| ಯಾರೋ ಒಬ್ಬ ವ್ಯಕ್ತಿ ಹೇಳಿದರೆ ಏನೂ ಆಗುವುದಿಲ್ಲ: ಈಶ್ವರಪ್ಪ| 

ಕಾರವಾರ(ಜ.31): ಮಹದಾಯಿ ಬಗ್ಗೆ ಗೋವಾ ಮುಖ್ಯಮಂತ್ರಿ ಏನೇ ಹೇಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಏನೋ ಹೇಳುತ್ತಾರೆ ಎಂದರೆ ನಾವು ಯಾಕೆ ತಲೆ​ಕೆ​ಡಿ​ಸಿ​ಕೊ​ಳ್ಳ​ಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿ​ಸಿ​ದ್ದಾ​ರೆ. 

ಮಹ​ದಾಯಿ ವಿಚಾ​ರ​ದಲ್ಲಿ ಗೋವಾ ಸಿಎಂ ನೀಡಿದ ಹೇಳಿ​ಕೆಗೆ ಸಂಬಂಧಿಸಿ ಶನಿ​ವಾರ ಮಾಧ್ಯ​ಮ​ಗಳಿಗೆ ಪ್ರತಿ​ಕ್ರಿ​ಯಿ​ಸಿದ ಅವ​ರು, ಪ್ರಮೋದ್‌ಸಾವಂತ್‌ಏನೇ ಹೇಳಲಿ, ಅದಕ್ಕೆ ನ್ಯಾಯ ಮಂಡಳಿ ಇದೆ. ಜನಪ್ರಿಯತೆಗಾಗಿ ಏನು ಬೇಕಾದರೂ ಹೇಳುತ್ತಾರೆ. ಅವರ ಯಾವ ಹೇಳಿಕೆಗೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಒಬ್ಬ ವ್ಯಕ್ತಿ ಹೇಳಿದರೆ ಏನೂ ಆಗುವುದಿಲ್ಲ. ಇಂದು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡುತ್ತಾರೆ. ಅವರ ಹೇಳಿಕೆಗಳಿಗೆಲ್ಲ ನಾವು ಉತ್ತರಿಸುತ್ತ ಹೋದರೆ ಸುಮ್ಮನೆ ಕಾಲಹರಣವಷ್ಟೆ ಎಂದರು.

ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು: ಠಾಕ್ರೆ ಬಳಿಕ ಗೋವಾ ಸಿಎಂ ಉದ್ಧಟತನದ ಹೇಳಿಕೆ

ಮಹದಾಯಿ ವಿಚಾರದಲ್ಲಿ ಸಂವಿಧಾನಬದ್ಧವಾದ ತೀರ್ಮಾನಕ್ಕೆ ತಲೆಬಾಗುತ್ತೇವೆ. ಸುಪ್ರೀಂ ಕೋರ್ಟ್‌ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ತಲೆಬಾಗುತ್ತೇವೆ ಎಂದ​ರು.
 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ