ಮೂರುಸಾವಿರ ಮಠದ ಆಸ್ತಿ ಉಳಿಸಿ ಬೆಳೆಸಬೇಕಿದೆ: ದಿಂಗಾಲೇಶ್ವರ ಶ್ರೀ

By Kannadaprabha NewsFirst Published Jan 31, 2021, 9:50 AM IST
Highlights

ಮೂರುಸಾವಿರ ಮಠದ ಆಸ್ತಿಯು ರಾಜಕಾರಣಿಗಳ ಕಪಿಮುಷ್ಠಿಯಲ್ಲಿದ್ದು ಅವರ ವಿರುದ್ಧ ನಮ್ಮ ಹೋರಾಟ ನಿರಂತರ| ಹೋರಾಟಕ್ಕೆ ಭಕ್ತರು ಶಕ್ತಿ ತುಂಬಬೇಕು| ನಾನು ಆ ಮಠದ ಉತ್ತರಾಧಿಕಾರಿ ಆಗಬೇಕೆಂಬ ಆಸೆಯಿಂದ ಇದನ್ನು ಹೇಳುತ್ತಿಲ್ಲ| ನನ್ನ ಹೋರಾಟ ಕೇವಲ ಮಠದ ಆಸ್ತಿ ಮಠಕ್ಕೆ ಉಳಿಯಬೇಕು ಎಂಬುದಾಗಿದೆ ಎಂದ ದಿಂಗಾಲೇಶ್ವರ ಶ್ರೀ| 

ಕುಂದಗೋಳ(ಜ.31): ಹುಬ್ಬಳ್ಳಿ ಮೂರುಸಾವಿರ ಮಠದ ಆಸ್ತಿಯನ್ನು ಉಳಿಸಿಕೊಂಡು ಬಡ ಭಕ್ತರಿಗೆ ಪ್ರಸಾದ ವಸತಿ, ಬಡ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ದೊಡ್ಡ ಮಠವಾಗಿಸಲು ಮುಂದಾಗಬೇಕಿದೆ ಎಂದು ಬಾಲೇ ಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.  ಪಟ್ಟಣದ ಬ್ರಹ್ಮದೇವರ ಗುಡಿಯ ಆವರಣದಲ್ಲಿ ಮಠ ಮಂದಿರ ಉಳಿಸಿ ಸಮಾಜ ಬೆಳೆಸಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೂರುಸಾವಿರ ಮಠದ ಆಸ್ತಿಯು ರಾಜಕಾರಣಿಗಳ ಕಪಿಮುಷ್ಠಿಯಲ್ಲಿದ್ದು ಅವರ ವಿರುದ್ಧ ನಮ್ಮ ಹೋರಾಟ ನಿರಂತರ. ಆ ಹೋರಾಟಕ್ಕೆ ಭಕ್ತರು ಶಕ್ತಿ ತುಂಬಬೇಕು. ನಾನು ಆ ಮಠದ ಉತ್ತರಾಧಿಕಾರಿ ಆಗಬೇಕೆಂಬ ಆಸೆಯಿಂದ ಇದನ್ನು ಹೇಳುತ್ತಿಲ್ಲ. ನನ್ನ ಹೋರಾಟ ಕೇವಲ ಮಠದ ಆಸ್ತಿ ಮಠಕ್ಕೆ ಉಳಿಯಬೇಕು ಎಂಬುದಾಗಿದೆ ಎಂದರು.

ಮೂರುಸಾವಿರ ಮಠದ ಅಸ್ತಿ ಮಾರಾಟ ಮಾಡಿಲ್ಲ: ಮೂಜಗು

ಮಠದ ಭಕ್ತ ಗುರುರಾಜ ಹುಣಸಿಮರದ, ಮಠದಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಭಕ್ತಿಯ ಜ್ಞಾನ ತುಂಬಿರುತ್ತದೆ. ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮುತಾರೆ ಹಾಗಾಗಿ ಮಠಗಳು ಉಳಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ. ನಮ್ಮ ಹಿರಿಯರು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟುಕೊಟ್ಟಿರುವ ಈ ಮಠಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಅವರ ಹೋರಾಟಕ್ಕೆ ಭಕ್ತರೇ ಶಕ್ತಿಯಾಗಬೇಕಾಗಿದೆ ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಮುಳ್ಳೂಳ್ಳಿಯ ವಿರಕ್ತಮಠದ ಶಿವಯೋಗಿ ಶ್ರೀಗಳು, ಮಂಟೂರಿನ ಶಿವಲಿಂಗೇಶ್ವರ ಶ್ರೀಗಳು, ಕಲ್ಯಾಣಪುರದ ಬಸವಣ್ಣಜ್ಜನವರು, ಹುಲಗೂರಿನ ಮೌನೇಶ್ವರ ಶ್ರೀಗಳು, ಹನುಮನಹಳ್ಳಿಯ ಶಿವಬಸವ ಶ್ರೀಗಳು, ಶಂಭೋಲಿಂಗೇಶ್ವರ ಶ್ರೀಗಳು, ಅರವಿಂದ ಕಟಗಿ, ರಮೇಶ ಕೊಪ್ಪದ ಇದ್ದರು.
 

click me!