ಆ್ಯಂಬುಲೆನ್ಸ್ ಆತಂಕದ ನಡುವೆಯೇ ಮಂಡ್ಯಕ್ಕೆ ಇನ್ನೋವಾಘಾತ, ಏನಿದು?

By Suvarna NewsFirst Published May 4, 2020, 2:34 PM IST
Highlights

ಮುಂಬೈನಲ್ಲಿ ಮೃತಪಟ್ಟಿದ್ದ ಜಿಲ್ಲೆಯ ಪಾಂಡವಪುರ ತಾಲೂಕಿನ ಕೊಡಗಳ್ಳಿ ಗ್ರಾಮದ ವ್ಯಕ್ತಿಯ ಶವ ತಂದ ಆ್ಯಂಬುಲೆನ್ಸ್ ಜೊತೆ ಇನೋವಾ ಕಾರೊಂದು ಬಂದಿತ್ತು ಎಂಬ ಸ್ಫೋಟಕ ಮಾಹಿತಿ| ಆತಂಕಕ್ಕೊಳಗಾದ ಜಿಲ್ಲೆಯ ಜನತೆ| ಮೃತದೇಹದ ಜೊತೆ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದ ನಾಲ್ವರಿಗೆ ಕೊರೋನಾ ಸೋಂಕು ದೃಢ| ಇನ್ನು ಕಾರಿನಲ್ಲಿ ಪ್ರಯಾಣ ಮಾಡಿದ್ದ ಇಬ್ಬರನ್ನ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಾಡಳಿತ ಐಸೋಲೇಷನ್‌ಗೆ ಕರೆದೊಯ್ದಿದೆ|

ಮಂಡ್ಯ(ಮೇ.04): ಜಿಲ್ಲೆಗೆ ಕೊರೋನಾ ವೈರಸ್‌ ವಿಲನ್‌ ರೀತಿ ಕಾಡುತ್ತಲೇ ಇದೆ. ಹೌದು, ಇಷ್ಟು ದಿನ ಆ್ಯಂಬುಲೆನ್ಸ್ ಕಾಡಿತ್ತು ಇದೀಗ ಇನೋವಾ ಕಾರು ಕಾಡುವ ಲಕ್ಷಣಗಳು ಗೋಚರವಾಗುತ್ತಿವೆ. ಈ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಮಹಾರಾಷ್ಟ್ರ ಮಾರಕವಾಗುತ್ತಿದೆ. 

ಕಳೆದ ತಿಂಗಳು ಏ.23ರಂದು ಮುಂಬೈನಲ್ಲಿ ಮೃತಪಟ್ಟಿದ್ದ ಜಿಲ್ಲೆಯ ಪಾಂಡವಪುರ ತಾಲೂಕಿನ ಕೊಡಗಳ್ಳಿ ಗ್ರಾಮದ ವ್ಯಕ್ತಿಯ ಶವ ತಂದ ಆ್ಯಂಬುಲೆನ್ಸ್ ಜೊತೆ ಇನೋವಾ ಕಾರೊಂದು ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಲಭ್ಯವಾಗಿದೆ. ಇದರಿಂದ ಜಿಲ್ಲೆಯ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. 

ಮುಂಬೈ ಆ್ಯಂಬುಲೆನ್ಸ್‌ನಿಂದ ಮಂಡ್ಯದಲ್ಲಿ ಕೊರೋನಾತಂಕ!

ಮೃತನ‌ ಸಂಬಂಧಿಕರು ಎಂದು ಸುಳ್ಳು ಹೇಳಿಕೊಂಡು ಆಂಬ್ಯೂಲೆನ್ಸ್ ಜೊತೆ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. ಹಾಗಾದ್ರೆ ಇವರು ಯಾರು ಎಂಬ ಪ್ರಶ್ನೆ ಮೂಡಲಾರಂಭಿಸಿದೆ. ಮೃತದೇಹದ ಜೊತೆ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದ ನಾಲ್ವರಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಕಾರಿನಲ್ಲಿ ಪ್ರಯಾಣ ಮಾಡಿದ್ದ ಇಬ್ಬರನ್ನ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಾಡಳಿತ ಐಸೋಲೇಷನ್‌ಗೆ ಕರೆದೊಯ್ದಿದ್ದಾರೆ. ಹೀಗಾಗಿ ತಾಲೂಕಿನ ಜಾಗನಕೆರೆ ಗ್ರಾಮ ಸಂಪೂರ್ಣವಾಗಿ ಸೀಲ್‌ಡೌನ್ ಆಗಿದೆ. ಇದರಿಂದ ತಾಲೂಕಿನಲ್ಲಿ ಆತಂಕ ಹೆಚ್ಚಾಗಿದೆ. 

ಒಂದೇ ಪಾಸ್‌ನಲ್ಲಿ ಎರಡು ವಾಹನಗಳು ಮುಂಬೈ ಇಂದ ಮಂಡ್ಯ ತಲುಪಿದ್ದೆ ಒಂದು ರೋಚಕತೆಯಾಗಿದೆ. ಮುಂಬೈನಿಂದ ಮಂಡ್ಯದ ವೆರೆಗೂ ಯಾರು ಇವರನ್ನ ಪರೀಕ್ಷೆ ಮಾಡಲಿಲ್ವಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಇದಕ್ಕೆಲ್ಲಾ ಜಿಲ್ಲಾಡಳಿತವೇ ಉತ್ತರ ನೀಡಬೇಕಿದೆ. 
 

click me!