ಲಾಕ್‌ಡೌನ್‌ನಲ್ಲಿ ನಮಗೆ ನಷ್ಟ ಸಹ ಆಗಿದೆ, ಬಾರ್, ಕ್ಲಬ್‌ಗಳು ಓಪನ್ ಆದರೆ ನಮಗೆ ಲಾಭ| ಈಗ ಶೇ. 40 ರಷ್ಟು ಮಾತ್ರ ಮದ್ಯ ಸರಬರಾಜು| ಬಾರ್‌ಗಳನ್ನು ಓಪನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ| ಈ ಬಗ್ಗೆ ಸಚಿವ ಸಂಪುಟದಲ್ಲೇ ತಿರ್ಮಾನ ಆಗಬೇಕು|
ಬೆಂಗಳೂರು(ಮೇ.04): ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿದೆ. ವೈನ್ ಸ್ಟೋರ್‌ಗಳಿಗೆ ಮದ್ಯ ಸರಬರಾಜು ಆಗಲಿದೆ. ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಯಾರು ವರ್ತಿಸಬಾರದು. ರಾಜ್ಯದ ಕೆಲವೆಡೆ ಗೊಂದಲ ಆದ ಬಗ್ಗೆ ಮಾಹಿತಿ ಬಂದಿದೆ. ಗೊಂದಲ, ನೂಕು ನುಗ್ಗಲು ಆದರೆ ಈಗ ನಾವು ಮಾಡಿರುವ ವ್ಯವಸ್ಥೆ ಕ್ಲೋಸ್ ಆಗಲಿದೆ ಎಂದು ಅಬಕಾರಿ ಸಚಿವ ನಾಗೇಶ ಅವರು ಮದ್ಯ ಪ್ರಿಯರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಹೊಸದಾಗಿ ಮದ್ಯ ಸರಬರಾಜು ಮಾಡಲು ಗೋದಾಮುಗಳಿಗೆ ಸೂಚನೆ ನೀಡಲಾಗಿದೆ. ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ. ಇಂದು ಇರುವ ಮದ್ಯ ಇಂದೇ ಖಾಲಿ ಆಗಲಿದೆ. ಮದ್ಯ ಮಾರಾಟದಿಂದ ದೊಡ್ಡ ಮಟ್ಟದ ಆದಾಯ ನಿರೀಕ್ಷೆ ಮಾಡಿಲ್ಲ ಎಂದು ಹೇಳಿದ್ದಾರೆ.
undefined
40 ದಿನದ ನಂತರ ಮದ್ಯದಂಗಡಿ ಓಪನ್: ಆದ್ರೆ ಎಣ್ಣೆ ಬೆಲೆ ದುಬಾರಿ!
ಲಾಕ್‌ಡೌನ್‌ನಲ್ಲಿ ನಮಗೆ ನಷ್ಟ ಸಹ ಆಗಿದೆ. ಬಾರ್, ಕ್ಲಬ್‌ಗಳು ಓಪನ್ ಆದರೆ ನಮಗೆ ಲಾಭ ಆಗಲಿದೆ. ಈಗ ಶೇ. 40 ರಷ್ಟು ಮಾತ್ರ ಮದ್ಯ ಸರಬರಾಜು ಆದಂಗೆ ಆಗಿದೆ. ಬಾರ್‌ಗಳನ್ನು ಓಪನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲೇ ತಿರ್ಮಾನ ಆಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ನಾವು ಗೌರವಿಸುತ್ತೇವೆ. ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಸೂಚನೆಗಳನ್ನೂ ಸಹ ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಮದ್ಯ ಮಾರಾಟ ಆರಂಭವಾಗಿರುವುದರಿಂದ ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿದೆ. ಮದ್ಯ ಪ್ರಿಯರು ಇದ್ದಾರೆ, ಮದ್ಯ ವ್ಯಸನಿಗಳು ಸಹ ಇದ್ದಾರೆ. ಎಲ್ಲರೂ ಇವತ್ತು ಮದ್ಯ ಪಡೆಯುತ್ತಿದ್ದಾರೆ. ಹೊಸದಾಗಿ ಸರಬರಾಜು ಮಾಡುವ ಮದ್ಯಕ್ಕೆ ಹೊಸ ದರ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಮದ್ಯಕ್ಕೆ ಕಿಲೋಮೀಟರ್ ಗಟ್ಟಲೇ ಸಾಲುಗಟಗ್ಟಿ ನಿಂತರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚವಿ ನಾಗೇಶ ಅವರು, 123 ಅಂಗಡಿಗಳಿಗೆ ಮದ್ಯ ಮಾರಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವು ಕಡೆ ಕ್ಯೂ ನೋಡಿ ಸ್ವತಃ ಮಾಲೀಕರೇ ಹೆದರಿದ್ದಾರೆ. ಕೆಲವು ಕಡೆ ಮಾಲೀಕರು ಶಾಪ್ ಓಪನ್ ಮಾಡಿಲ್ಲ ಎಂದು ಹೇಳಿದ್ದಾರೆ.
40 ದಿನಗಳ ಬಳಿಕ ಕೆಲವು ಕಡೆ ಬಾರ್‌ಗಳು ತೆರೆದಿವೆ. ನಗರದ ವಸಂತ್ ವಿಹಾರ್, ಬಿಕಾಜಿ ಕಾಮ್ ಕೆಲವು ಕಡೆಗಳಲ್ಲಿ ಮದ್ಯದ ಅಂಗಡಿಗಳು ಓಪನ್ ಆಗಿವೆ. ಸಾಲುಗಟ್ಟಿ ನಿಂತರ ಜನರನ್ನ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ. ದೆಹಲಿ ಮಹಾನಗರ ಪಾಲಿಕೆ ಸಿಬ್ಬಂದಿ ಜನರ ಕ್ಯೂ ಬಳಿಯೇ ಬಂದು, ಸ್ಯಾನಿಟೇಜಷನ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.