ವಿಚ್ಛೇದನ ಅರ್ಜಿ ಹಿಂಪಡೆಯುವೆ: ಕೆ.ಕಲ್ಯಾಣ್‌ ಪತ್ನಿ

Kannadaprabha News   | Asianet News
Published : Oct 13, 2020, 03:02 PM IST
ವಿಚ್ಛೇದನ ಅರ್ಜಿ ಹಿಂಪಡೆಯುವೆ: ಕೆ.ಕಲ್ಯಾಣ್‌ ಪತ್ನಿ

ಸಾರಾಂಶ

ನಮ್ಮ ಕುಟುಂಬ ಯಾವುದೋ ಒಂದು ಸುಳಿಯಲ್ಲಿ ಸಿಲುಕಿಕೊಂಡಿತ್ತು. ಇದೀಗ ಅದರಿಂದ ಸಂಪೂರ್ಣ ಹೊರಬಂದಿದ್ದೇವೆ ಎಂದ ಕೆ.ಕಲ್ಯಾಣ್‌ ಪತ್ನಿ ಅಶ್ನಿನಿ| ಆರೋಪಿ ಶಿವಾನಂದ ವಾಲಿಯಿಂದ 350 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ, 9 ಮ್ಯಾಕ್ಸಿಕ್ಯಾಬ್‌, ಆಸ್ತಿ ದಾಖಲೆ ಸೇರಿದಂತೆ ಒಟ್ಟು 6 ಕೋಟಿ ಮೌಲ್ಯದ ಸ್ವತ್ತು ವಶ| 

ಬೆಳಗಾವಿ(ಅ.13): ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್‌ ತಮ್ಮ ಕುಟುಂಬವನ್ನು ಉಳಿಸಿಕೊಳ್ಳುವ ಸಲುವಾಗಿ ನಡೆಸಿದ ಹೋರಾಟ ಫಲಪ್ರದವಾಗಿದ್ದು, ಅವರ ಪತ್ನಿ ಅಶ್ನಿನಿ ತಾನು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಲಾದ ವಿಚ್ಛೇದನಾ ಅರ್ಜಿ ವಾಪಸ್‌ ಪಡೆಯುವುದಾಗಿ ತಿಳಿಸಿದ್ದಾರೆ.

ನಮ್ಮ ಕುಟುಂಬ ಯಾವುದೋ ಒಂದು ಸುಳಿಯಲ್ಲಿ ಸಿಲುಕಿಕೊಂಡಿತ್ತು. ಇದೀಗ ಅದರಿಂದ ಸಂಪೂರ್ಣ ಹೊರಬಂದಿದ್ದೇವೆ. ನನ್ನ ಮುಂದಿನ ಜೀವನವನ್ನು ಪತಿ ಜೊತೆಗೆ ಕಳೆಯುತ್ತೇನೆ. ಶೀಘ್ರವೇ ಪತಿ ಕಲ್ಯಾಣರನ್ನು ಭೇಟಿ ಮಾಡುವುದಾಗಿ ಸೋಮವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ಆರೋಪಿ ಶಿವಾನಂದ ವಾಲಿಯಿಂದ 350 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ, 9 ಮ್ಯಾಕ್ಸಿಕ್ಯಾಬ್‌, ಆಸ್ತಿ ದಾಖಲೆ ಸೇರಿದಂತೆ ಒಟ್ಟು 6 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು?

ಜೊತೆಗೆ ಶಿವಾನಂದ ವಾಲಿಯ ಜಾಮೀನು ಅರ್ಜಿಯನ್ನೂ ಬೆಳಗಾವಿ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. 
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC