'ಕಾಂಗ್ರೆಸ್‌ನವರು ಯಡಿಯೂರಪ್ಪ ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿದ್ದಾರೆ'

Suvarna News   | Asianet News
Published : Mar 15, 2020, 02:42 PM ISTUpdated : Mar 15, 2020, 02:43 PM IST
'ಕಾಂಗ್ರೆಸ್‌ನವರು ಯಡಿಯೂರಪ್ಪ ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿದ್ದಾರೆ'

ಸಾರಾಂಶ

2023 ರವರೆಗೂ ಯಡಿಯೂರಪ್ಪ ಸರ್ಕಾರ ಸುಭದ್ರ| ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ| ಸಾರಿಗೆ ಇಲಾಖೆಯಿಂದ ಚಾಲಕರು ಮತ್ತು ನಿರ್ವಾಹಕರಿಗೆ ಮಾಸ್ಕ್ ಕೊಡುತ್ತೇವೆ| 

ಬೆಳಗಾವಿ(ಮಾ.15): ಬಿ. ಎಸ್. ಯಡಿಯೂರಪ್ಪ ಸರ್ಕಾರ ಸೂರ್ಯ, ಚಂದ್ರರಷ್ಟೇ ಸುಭದ್ರವಾಗಿದೆ. ಕಾಂಗ್ರೆಸ್‌ನವರಿಗೆ ಆಗಿರುವ ಆಘಾತ ಬೇರೆಯವರಿಗೆ ಆಗುತ್ತೆ ಅಂತ ಭ್ರಮೆಯಲ್ಲಿ ಇದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ತೊಂದರೆಯಿಲ್ಲ. ಒಂದಾಗಿ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. 

ಬಿಜೆಪಿಯಲ್ಲಿ ಭಿನ್ನಮತವಿದ್ದು ಸರ್ಕಾರ ತಾನೇ ಕುಸಿಯುತ್ತೆ ಎಂದು ಕಾಂಗ್ರೆಸ್‌ ನಾಯಕ ಆರ್.ಬಿ.ತಿಮ್ಮಾಪುರ ಹೇಳಿಕೆ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪುರ ಅವರಿಗೆ ನಾನು ಹೇಳಲು ಇಚ್ಛೆ ಪಡುತ್ತೇನೆ. 2023 ರವರೆಗೂ ಸರ್ಕಾರ ಸುಭದ್ರವಾಗಿ ಇರಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ. ಆರ್‌.ಬಿ.ತಿಮ್ಮಾಪುರ ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊರೋನಾ ವೈರಸ್ ಭೀತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಿಂದ ಚಾಲಕರು ಮತ್ತು ನಿರ್ವಾಹಕರಿಗೆ ಮಾಸ್ಕ್ ಕೊಡುತ್ತೇವೆ. ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳೂ ನಷ್ಟದಲ್ಲಿವೆ. ನಮ್ಮದು ಲಾಭ ಗೊಳಿಸಬೇಕೆಂಬ ಉದ್ದೇಶವಿಲ್ಲ. ಸಾರ್ವಜನಿಕರಿಗೆ ಸೇವೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಕೊರೋನಾ ಎಫೆಕ್ಟ್‌ನಿಂದ ಸಾರಿಗೆ ಇಲಾಖೆಗೆ ಹಾನಿಯಾಗಿದೆ. ಇಡೀ ವಿಶ್ವದಲ್ಲೇ ಎಲ್ಲಾ ವಿಭಾಗದಲ್ಲೂ ಹಾನಿ ಆಗಿದೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು