ತಾಲೂಕಿನಲ್ಲಿರುವ ಸಮಸ್ಯೆಗಳ ಬಗ್ಗೆ ಪತ್ರಕರ್ತರಿಗೆ ಹೆಚ್ಚು ತಿಳಿದಿರುತ್ತದೆ. ಗೊತ್ತಿಲ್ಲದ ಹಲವಾರು ವಿಚಾರಗಳನ್ನು ಮತ್ತು ಅನೇಕ ಸಮಸ್ಯೆಗಳನ್ನು ಪತ್ರಿಕೆ ಮುಖಾಂತರ ತಿಳಿದುಕೊಂಡಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಎಚ್.ಡಿ. ಕೋಟೆ : ತಾಲೂಕಿನಲ್ಲಿರುವ ಸಮಸ್ಯೆಗಳ ಬಗ್ಗೆ ಪತ್ರಕರ್ತರಿಗೆ ಹೆಚ್ಚು ತಿಳಿದಿರುತ್ತದೆ. ಗೊತ್ತಿಲ್ಲದ ಹಲವಾರು ವಿಚಾರಗಳನ್ನು ಮತ್ತು ಅನೇಕ ಸಮಸ್ಯೆಗಳನ್ನು ಪತ್ರಿಕೆ ಮುಖಾಂತರ ತಿಳಿದುಕೊಂಡಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
undefined
ದಲ್ಲಿ ಪತ್ರಿಕಾರಂಗವು ಸಂವಿಧಾನದ 4 ನೇ ಅಂಗ., ನ್ಯಾಯಾಂಗ ಮತ್ತು ಕಾರ್ಯಾಂಗದಷ್ಟೆಪ್ರಮುಖವಾದ ಅಂಗ. ನಾವು ಜನ ಪ್ರತಿನಿಧಿಗಳಾಗಿ ಸಮಾಜಸೇವೆ ಮಾಡುತ್ತಿದ್ದೇವೆ. ಸಮಾಜ ತಿದ್ದುವ ಕೆಲಸವನ್ನು ಮಾಡುವ ಮೂಲಕ ಪತ್ರಕರ್ತರು ಕೂಡ ಸಮಾಜ ಸೇವೆ ಮಾಡುತ್ತಿದ್ದಾರೆ. ದಿನ ಪತ್ರಿಕೆಗಳಲ್ಲಿ ಬರುವ ಎಷ್ಟೊಸಮಸ್ಯೆಗಳನ್ನು ತಿಳಿದುಕೊಂಡು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವುಗಳ ಸಮಸ್ಯೆಗೆ ಪ್ರಯತ್ನ ಪಟ್ಟಿದ್ದೇನೆ ಎಂದರು.
ಎಚ್.ಡಿ. ಕೋಟೆ ತಾಲೂಕನ್ನು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ತೆಗೆಯುವ ಉದ್ದೇಶದಿಂದ ಹಿಂದಿನ 5 ವರ್ಷಗಳ ಅವಧಿಯಲ್ಲಿ ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ನಡೆಸಿದ್ದೆ. ಅದರ ಫಲವಾಗಿ ಇಂದು ತಾಲೂಕಿನ ಮತದಾರರು, ಎರಡನೇ ಬಾರಿಗೆ ತಮಗೆ ಜನ ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ತಾಲೂಕಿನ ಅಭಿವೃದ್ದಿಗೆ ತಮ್ಮ ತಂದೆ ಮಾಜಿ ಶಾಸಕ ದಿ. ಚಿಕ್ಕಮಾದು ಮತ್ತು ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ್ ಕೂಡ ಅನೇಕ ಅಭಿವೃದ್ದಿ ಕೆಲಸ ನಡೆಸಿದ್ದರು. ತಾಲೂಕಿನಲ್ಲಿ ಇನ್ನೂ ಅನೇಕ ಸಮಸ್ಯೆಗಳುಇ ಇವೆ. ಅವುಗಳನ್ನು ಒಮ್ಮೆಗೆ ಪರಿಹಾರ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಪರಿಹರಿಸಬೇಕು ಎಂದರು.
ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಮೈಸೂರು ಮಾನಂದವಾಡಿ ರಸ್ತೆ ಅಭಿವೃದ್ದಿಗೆ ಸಂಬಂಧಿಸಿದಂತೆ 920 ಕೋಟಿ ರು. ಗಳ ಯೋಜನೆ ತಯಾರಾಗಿದೆ. ಭಾರತ್ ಮಹಾನ್ ಯೋಜನೆ ಅಡಿ ರಸ್ತೆ ಅಭಿವೃದ್ದಿ ಆಗಲಿದೆ. ರಸ್ತೆ ವಿಸ್ತರಣೆ ಆಗುವುದರಿಂದ ಜಮೀನು ಮತ್ತು ಅನೇಕ ಕಟ್ಟಡಗಳು ನೆಲಸಮವಾಗಿದೆ. ಹಾಗಾಗಿ ಜಮೀನು ಮಾಲೀಕರು ಮತ್ತು ಕಟ್ಟಡ ಮಾಲೀಕರನ್ನು ಕರೆದು ಸಭೆ ನಡೆಸಲಾಗುವುದು. ಅರಣ್ಯ ಇಲಾಖೆ ಕೂಡ ರಸ್ತೆ ಕಾಮಗಾರಿ ನಡೆಸಲಕ್ಕೆ ಅವಕಾಶ ಕೊಡಲಿದೆ. ಹಾಗೆಯೇ ಎಚ್.ಡಿ. ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಯರಹಳ್ಳಿ ಹ್ಯಾಂಡ್‌ಪೋಸ್ಟ್ ಗ್ರಾಮದಿಂದ ಎಚ್.ಡಿ. ಕೋಟೆ ಪಟ್ಟಣದ ಗದ್ದಿಗೆ ವೃತ್ತದವದರೆಗೆ ಜೋಡಿ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಎಚ್.ಡಿ. ಕೋಟೆ ಪತ್ರಕರ್ತರಿಗೆ ನಿವೇಶನ ಕೊಡಿಸುವ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ದೀಪಕ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಗ್ರಾಮಾಂತರ ಕಾರ್ಯಾದರ್ಶಿ ಧರ್ಮಾಪುರ ನಾರಾಯಣ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ, ತಾಲೂಕು ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ ಇದ್ದರು.
ಪ್ರತಿಭಾ ಪುರಸ್ಕಾರ- ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಶಾಸಕ ಅನಿಲ್ ಚಿಕ್ಕಮಾದು ಪುರಸ್ಕರಿಸಿ, ಪೋ›ತ್ಸಾಹ ಧನ ವಿತರಿಸಿದರು. ಹಿರಿಯ ಪತ್ರಕರ್ತ ಕಬಿನಿ ಮಂಜು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.