ಏರಿಕೆಯಾಗುತ್ತಾ ಬೆಂಗಳೂರು ಮೇಯರ್ ಆಡಳಿತ ಅವಧಿ - ಎಷ್ಟಾಗಲಿದೆ..?

Published : Dec 09, 2020, 02:40 PM IST
ಏರಿಕೆಯಾಗುತ್ತಾ ಬೆಂಗಳೂರು ಮೇಯರ್ ಆಡಳಿತ ಅವಧಿ - ಎಷ್ಟಾಗಲಿದೆ..?

ಸಾರಾಂಶ

ಬಿಬಿಎಂಪಿ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿಯಿಂದ ವಿಧಾನಸಭೆಯಲ್ಲಿ ವರದಿ‌ ಮಂಡನೆ ಮಾಡಲಾಗಿದೆ.

ಬೆಂಗಳೂರು (ಡಿ.09):  ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರಲು ಸರ್ಕಾರದಿಂದ ಕಸರತ್ತು ನಡೆದಿದೆ.  ಬಿಬಿಎಂಪಿ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿಯಿಂದ ವಿಧಾನಸಭೆಯಲ್ಲಿ ವರದಿ‌ ಮಂಡನೆ ಮಾಡಲಾಗಿದೆ.

ಶಾಸಕ ಎಸ್ ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯು ವರದಿ ಮಂಡನೆ ಮಾಡಲಾಗಿದೆ. 

ಶಾಸಕ ರಘು ನೇತೃತ್ವದ ಜಂಟಿ ಸಮಿತಿಯ ವರದಿಯಲ್ಲಿರುವ ಶಿಫಾರಸುಗಳು ಇಂತಿವೆ. 

- ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆ

- ಮೇಯರ್ ಅವಧಿಯನ್ನು 12 ತಿಂಗಳಿಂದ 30 ತಿಂಗಳಿಗೆ ಏರಿಕೆ

- ಸ್ಥಾಯಿ ಸಮಿತಿಗಳ ಸಂಖ್ಯೆ 12 ರಿಂದ 15 ಕ್ಕೆ ಏರಿಕೆ

ಬಿಬಿಎಂಪಿ ಮೇಯರ್‌ ಅಧಿಕಾರ ಅವಧಿ 2.5 ವರ್ಷಕ್ಕೆ ಹೆಚ್ಚಿಸಲು ಶಿಫಾರಸು ...

- ಪ್ರತೀ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿಗಳ ರಚನೆ

- ಬಿಬಿಎಂಪಿಗೆ ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸುವುದು

- ಪ್ರತೀ ವಲಯಕ್ಕೂ ವಿಶೇಷ ಆಯುಕ್ತರ ನೇಮಕ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ. 

PREV
click me!

Recommended Stories

ಬಾಗಲಕೋಟೆ: ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರ ವಿದಾಯ!
ಅಲ್ಲೂರು ಕೆ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ 101 ಎತ್ತುಗಳ ಜಾತ್ರೆ, ಪೂಜೆ