ಇವರು ಖಾಕಿ ತೊಟ್ಟರೆ ಖಡಕ್ ಅಧಿಕಾರಿ; ಬಣ್ಣ ಹಚ್ಚಿದ್ರೆ ನುರಿತ ಕಲಾವಿದ! ಬಹುಮುಖ ಪ್ರತಿಭೆಯ ಪೊಲೀಸ್ ಅಧಿಕಾರಿ

By Ravi Nayak  |  First Published Sep 12, 2022, 12:55 PM IST

ಇವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.‌ ವೃತ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರೂ, ಇವರ ಅಭಿರುಚಿ ಮಾತ್ರ ವಿಭಿನ್ನ. ಖಾಕಿ ತೊಟ್ಟರೆ ಖಡಕ್ ಅಧಿಕಾರಿ- ಬಣ್ಣಹಚ್ಚಿದ್ರೆ ಅದ್ಭುತ ಕಲಾವಿದ,  ಮನಸು ಬಿಚ್ಚಿ ಮಾತನಾಡಿದ್ರೆ ಹೃದಯ ಶ್ರೀಮಂತ..! ಯಾರು ಆ ಅಧಿಕಾರಿ? ಏನ್ ಅವರ ವಿಶೇಷ ಅಂತಾ ಕುತೂಹಲವಾ? ಮುಂದೆ ಓದಿ.


ಹುಬ್ಬಳ್ಳಿ (ಸೆ.12) : ಇವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.‌ ವೃತ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರೂ, ಇವರ ಅಭಿರುಚಿ ಮಾತ್ರ ವಿಭಿನ್ನ. ಖಾಕಿ ತೊಟ್ಟರೆ ಖಡಕ್ ಅಧಿಕಾರಿ- ಬಣ್ಣಹಚ್ಚಿದ್ರೆ ಅದ್ಭುತ ಕಲಾವಿದ,  ಮನಸು ಬಿಚ್ಚಿ ಮಾತನಾಡಿದ್ರೆ ಹೃದಯ ಶ್ರೀಮಂತ..! ಯಾರು ಆ ಅಧಿಕಾರಿ? ಏನ್ ಅವರ ವಿಶೇಷ ಅಂತಾ ಕುತೂಹಲವಾ? ಮುಂದೆ ಓದಿ.

ಗಣಪತಿ ಭಕ್ತ PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!

Tap to resize

Latest Videos

ಖಾಕಿ ತೊಟ್ಟು ಕೈಯಲ್ಲಿ ಲಾಠಿ ಹಿಡಿದು ನಿಂತರೆ ಮುಗಿತು, ಯಾವುದೇ ಸಮಾಜಘಾತುಕರು ಹತ್ತಿರ ಸಹ ಸುಳಿಯುವುದಿಲ್ಲ. ಇನ್ನು ಬಣ್ಣ ಹಚ್ಚಿ ಸ್ಟೇಜ್ ಹತ್ತಿದ್ರೆ ನೆರೆದವರಿಗೆಲ್ಲ ಭರಪುರ ಮನರಂಜನೆ. ಅಂದಹಾಗೆ ಇವರು ಹೆಸರು ಜೆ.ಎಮ್.ಕಾಲಿಮಿರ್ಚಿ(J.M.kaalimirchi)‌ ಹುಬ್ಬಳ್ಳಿ(hubballi) ಗೋಕುಲ ರೋಡ್ ಠಾಣೆಯ ಇನ್ಸ್ಪೆಕ್ಟರ್(Gokul Road Police Station). ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸುವುದನ್ನ ನೋಡಿದ್ರೆ ಇವರು ಪರಿಪೂರ್ಣ ಕಲಾವಿದರು ಅನಿಸೋದು ಸಹಜ. ಆದ್ರೆ ಪೊಲೀಸ್ ಅಧಿಕಾರಿಯ ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡುವ ಮೂಲಕ ನಮ್ಮ‌ ಯುವ ಸಮುದಾಯಕ್ಕೆ ರಂಗಭೂಮಿ ಕಲೆ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ.

 ಇನ್ಸ್‌ಪೆಕ್ಟರ್ ಜೆ.ಎಮ್.ಕಾಲಿಮಿರ್ಚಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್(Sawai Gandharva Hall) ನಲ್ಲಿ ಜಾನಪದ ಕಲಾ ಬಳಗ ಟ್ರಸ್ಟ್(Janapada kala balaga trust) ನಿಂದ ರವಿವಾರ ನಡೆದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ವೃಷಸೇನ ಪಾತ್ರದಲ್ಲಿ ವೇಷ ಧರಿಸಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಹುಟ್ಡಿದ್ದು‌ ಮುಸ್ಲಿಂ ಸಮಾಜದಲಾದ್ರು ಸರ್ವಧರ್ಮಗಳ ಆರಾಧಕ, ಮೊನ್ನೆ ಗಣೇಶ ಚತುರ್ಥಿ(Ganesh Chaturthi) ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಗಣೇಶನ ಪ್ರತಿಷ್ಟಾಪಿಸಿ ಅದ್ಧೂರಿಯಾಗಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯ ಮೆರದಿದ್ರು. ಇವರ ಜೀವನ ಪ್ರೀತಿ, ಸರ್ವಧರ್ಮ ಸಹಿಷ್ಣುತೆಗೊಂದು ಸಲಾಂ. ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!

click me!